ಪೆಟ್ರೋಲ್ ಬಂಕ್ ಬಂದ್ ವದಂತಿ; ರಾತ್ರೋರಾತ್ರಿ ಮುಗಿಬಿದ್ದ ಸವಾರರು

By Suvarna News  |  First Published Apr 10, 2020, 10:23 AM IST

ಪೆಟ್ರೋಲ್ ಬಂಕ್ ಬಂದ್ ಆಗುತ್ತೆ ಅಂತ ವದಂತಿ ಹರಡಿಸಿರೋ ಕಿಡಿಗೇಡಿಗಳು | ಕದ್ದುಮುಚ್ಚಿ ರಾತ್ರೋರಾತ್ರಿ ಬೈಕ್ ಗೆ ಪೆಟ್ರೊಲ್ ಹಾಕಿಸಿಕೊಳ್ಳುತ್ತಿದ್ದವರಿಗೆ ಲಾಠಿ ಏಟು | ಬಾಗಲಕೋಟೆ ಜಿಲ್ಲೆಯ ಲೋಕಾಪೂರದಲ್ಲಿ ಘಟನೆ..
 


ಬಾಗಲಕೋಟೆ (ಏ. 10): ಲಾಕ್‌ಡೌನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಡುತ್ತಿರುತ್ತದೆ. ಹಾಗಂತೆ, ಹೀಗಂತೆ ಅಂತ ಏನೇನೋ ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಹಬ್ಬಿಸುತ್ತಿರುತ್ತಾರೆ.ಸತ್ಯಾಸತ್ಯತೆಯನ್ನು ವಿಮರ್ಶಿಸದೇ ಜನ ಅದನ್ನು ನಂಬುತ್ತಾರೆ. 

ಪೆಟ್ರೋಲ್ ಬಂಕ್ ಬಂದ್ ಆಗುತ್ತೆ ಅಂತ ವದಂತಿ ಹರಡಿದ್ದೇ ತಡ ಜನ ರಾತ್ರೋರಾತ್ರಿ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಮುಗಿ ಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪೂರದಲ್ಲಿ ನಡೆದಿದೆ. ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. 

Tap to resize

Latest Videos

ಲಾಕ್‌ಡೌನ್‌ ಏರಿಯಾದಲ್ಲಿ ಸುವರ್ಣ ನ್ಯೂಸ್‌: DCP ಶ್ರೀನಾಥ್‌ ಬುಲೆಟ್‌ ಮೂಲಕ ಸಿಟಿ ರೌಂಡ್‌!

ಪೆಟ್ರೋಲ್ ಬಂಕ್ ಮೇಲೆ ಡಿಸಿ ಕ್ಯಾಪ್ಟನ್ ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ್ ದೌಡಾಯಿಸಿದ್ದಾರೆ. ಪೊಲೀಸರು ಲಾಠಿ ಬೀಸಿ ವಾಹನ ಸವಾರರನ್ನು ಚದುರಿಸಿದ್ದಾರೆ. 

ಬಾಗಲಕೋಟೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಹಿನ್ನೆಲೆ ಪೆಟ್ರೋಲ್ ಬಂಕ್ ಬಂದ್ ಆಗುತ್ತೆ ಅಂತ  ಕಿಡಿಗೇಡಿಗಳು ವದಂತಿ ಹರಡಿಸಿದ್ದಾರೆ. 

click me!