ಇದೇ ಮೊದಲ ಬಾರಿಗೆ ಸಕಲೇಶಪುರದಲ್ಲಿ ಅಂತಾರಾಷ್ಟ್ರೀಯ ಮ್ಯಾರಥಾನ್‌! ಭರ್ಜರಿ ಸಿದ್ಧತೆ, ದಿನಾಂಕ, ಸಮಯ, ಸ್ಥಳದ ವಿವರ ಇಲ್ಲಿದೆ

Kannadaprabha News   | Kannada Prabha
Published : Nov 29, 2026, 10:40 AM IST
Sakleshpur international marathon

ಸಾರಾಂಶ

Sakleshpur international marathon 2026: ಸಕಲೇಶಪುರ ತಾಲೂಕಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರಕಿಸುವ ಉದ್ದೇಶದಿಂದ ಜನವರಿ 17ರಂದು ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಿಸಲಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ಆಗಿದ್ದು, ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Sakleshpur international marathon 2026:  ಸಕಲೇಶಪುರ ತಾಲೂಕಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ (ಬ್ರಾಂಡ್) ದೊರಕಿಸಿಕೊಡುವ ಅಂಗವಾಗಿ ಪಟ್ಟಣದಲ್ಲಿ ಇದೇ ಮೊದಲಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ ಓಡ ಯಾವಾಗ?

ಡ್ರಗ್ಸ್ ಮುಕ್ತ ಸಕಲೇಶಪುರ ಸಂಘಟನೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಹಾಗೂ ಲಯನ್ಸ್ ಸಂಸ್ಥೆ ಸೇರಿದಂತೆ ಪಟ್ಟಣದ ಪ್ರಮುಖ ಸಕ್ರಿಯ ಸಂಘಟನೆಗಳು ಅಂತರರಾಷ್ಟ್ರೀಯ ಮ್ಯಾರಥಾನ್ ನಡೆಸಲು ಸಿದ್ದತೆ ನಡೆಸಿದ್ದು. ಜನವರಿ 17 ರಂದು ಪಟ್ಟಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಕಳೆದೊಂದು ತಿಂಗಳಿನಿಂದ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಹಿರಿಯ ಪತ್ರಕರ್ತ ಮಲ್ನಾಡ್ ಮೆಹೆಬೂಬ್ ನೇತೃತ್ವದಲ್ಲಿ ಸರಣಿ ಸಭೆ ನಡೆಸುವ ಮೂಲಕ ಮೂಡಿಗೆರೆ ಮುದ್ರೆಮನೆ ಸಂತೋಷ್ ಸಹಬಾಗಿತ್ವದಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲಾಗಿದೆ. 42 ಕಿ. ಮೀ. ದೂರದ ಪೂರ್ಣ ಮ್ಯಾರಥಾನ್,21 ಕಿ. ಮೀ. ದೂರದ ಅರ್ಧ ಮ್ಯಾರಥಾನ್, 10 ಕಿ. ಮೀ. ದೂರದ ಮ್ಯಾರಥಾನ್ ಹಾಗೂ ಐದು ಕಿ.ಮಿ ದೂರದ ಮ್ಯಾರಥಾನ್ ನಡೆಸಲು ಉದ್ದೇಶಿಸಲಾಗಿದ್ದು ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಸಕಲೇಶಪುರ ಮ್ಯಾರಾಥಾನ್ ಓಟದ ಸಿದ್ಧತೆ ಹೇಗಿದೆ?

ಮ್ಯಾರಾಥಾನ್ ಸಿದ್ಧತೆ ಆರಂಭವಾಗುತ್ತಿದ್ದಂತೆ ಪಟ್ಟಣದ ಬೀದಿಬೀದಿಗಳಲ್ಲಿ ಮುಂಜಾನೆ ಮ್ಯಾರಾಥಾನ್ ಓಟಕ್ಕಾಗಿ ಯುವಕರು,ಮದ್ಯವಯಸ್ಕರು,ಯುವತಿಯರು ಓಟ ನಡೆಸುವ ಮೂಲಕ ಸಿದ್ಧತೆ ನಡೆಸಿದ್ದಾರೆ. ಮ್ಯಾರಾಥಾನ್‌ನಲ್ಲಿ ಕನಿಷ್ಠ 10,000 ಜನರು ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ. ಪಟ್ಟಣದ ಎಪಿಎಂಸಿಯಿಂದ ಆರಂಭವಾಗುವ ಮ್ಯಾರಥಾನ್ ಓಟ ಆನೇಮಹಲ್, ಅರೆಕೆರೆ, ಬ್ಯಾಕರವಳ್ಳಿ- ಶುಕ್ರವಾರಸಂತೆ ಮೂಲಕ ಸಾಗಿ ಹೆನ್ನಲಿ ಕೂಡಿಗೆ ತಲುಪಿ ನಂತರ ಅದೇಮಾರ್ಗವಾಗಿ ಮ್ಯಾರಥಾನ ಓಟಗಾರರು ವಾಪಸ್ಸಾಗಲಿದ್ದಾರೆ. ಮ್ಯಾರಥಾನ್ ಸಾಗಲಿರುವ ಪ್ರತಿಗ್ರಾಮದ ಮುಖ್ಯರಸ್ತೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಲೆನಾಡು ವಾದ್ಯಬಾರಿಸುವ ಮೂಲಕ ಓಟಗಾರರನ್ನು ಹುರಿದುಂಬಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮ್ಯಾರಾಥಾನ್

ಜಿಲ್ಲೆಯಲ್ಲೆ ಮೊದಲು: ಅಂತಾರಾಷ್ಟ್ರೀಯ ಮ್ಯಾರಾಥಾನ್ ಪಟ್ಟಣದಲ್ಲಿ ಹಮ್ಮಿಕೊಂಡಿರುವುದು ಜಿಲ್ಲೆಯಲ್ಲೆ ಮೊದಲು ಎನ್ನಲಾಗಿದ್ದು ಮ್ಯಾರಾಥಾನ್‌ನಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಮ್ಯಾರಾಥಾನ್ ಓಟಗಾರರು ಪಾಲ್ಗೊಳ್ಳಲಿದ್ದಾರೆ ಎಂಬುದು ಆಯೋಜಕರ ಮಾತು. ಓಟಗಾರರಿಗೆ ಚೀಪ್ ಆಳವಡಿಸುವ ಮೂಲಕ ಅವರ ಓಟದ ಪ್ರಮಾಣವನ್ನು ನಿಖರವಾಗಿ ಪತ್ತೆಹಚ್ಚುವ ತಂತ್ರಜ್ಞಾನ ಆಳವಡಿಸಿ ಕೊಳ್ಳುವ ಚಿಂತನೆ ನಡೆದಿದೆ.

PREV
Read more Articles on
click me!

Recommended Stories

Mandya: ಪ್ರೀತಿಸುವಂತೆ ಕಿರುಕುಳ, ತಂದೆ ಮೇಲೆ ಹಲ್ಲೆ; ಮನನೊಂದು ದುಡುಕಿನ ನಿರ್ಧಾರ ಕೈಗೊಂಡ ಅಪ್ರಾಪ್ತೆ
ಶಬರಿಮಲೆ ಯಾತ್ರೆ, ಕ್ರಿಸ್‌ಮಸ್‌ಗೆ ಮಂಗಳೂರು ಸೆಂಟ್ರಲ್ – ಕೊಲ್ಲಂ ನಡುವೆ ವಿಶೇಷ ರೈಲು ಸೇವೆ; ವೇಳಾಪಟ್ಟಿ ಇಲ್ಲಿದೆ