ಸ್ಥಳೀಯ ಉತ್ಪನ್ನಕ್ಕೆ ಆಧುನಿಕ ಆನ್‌ಲೈನ್ ಮಾರುಕಟ್ಟೆ ಒದಗಿಸುವ ಪ್ರಯತ್ನವಾಗಬೇಕು : ಆರ್ಥಿಕ ತಜ್ಞ ಅನಂತ್

By Ravi Janekal  |  First Published May 28, 2023, 3:10 PM IST

ಆರ್ಥಿಕತೆ ದೇಶದ 2-3 ನಗರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇಡೀ ದೇಶವನ್ನು ಅವಲಂಬಿಸಿರುತ್ತದೆ. ದೇಶದ ಬೇರೆ ಭಾಗಗಳನ್ನು ನಿರ್ಲಕ್ಷಿಸಿ ಲಂಡನ್‌ಗೆ ಮಾತ್ರ ಪ್ರಾಮುಖ್ಯತೆ ನೀಡಿದ ಕಾರಣ ಬ್ರಿಟನ್ ಆರ್ಥಿಕತೆ ದುರ್ಬಲಗೊಂಡಿತು. ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ನಗರಸಂಪರ್ಕ ಜಾಲ ಹೊಂದಿದ್ದು, 41.6 ಕೋಟಿ ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. 


ಉಡುಪಿ (ಮೇ.28) : ಡಿಜಿಟಲ್ ವೇದಿಕೆಗಳಲ್ಲಿ ಶೇ. 22ರಷ್ಟು ಫೂಟ್‌ವೇರ್ ಮತ್ತು ಶೇ. 55ರಷ್ಟು ಮೊಬೈಲ್ ಫೋನ್‌ಗಳು ಮಾರಾಟವಾಗುತ್ತಿವೆ. ಆದರೆ ಹ್ಯಾಂಡ್‌ಲೂಮ್‌ಗಳು ಕೇವಲ 0.2ರಷ್ಟು ಮಾತ್ರ ಮಾರುಕಟ್ಟೆ ವ್ಯಾಪ್ತಿ ಹೊಂದಿವೆ. ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಇದೆ. ಆದರೆ ಇದಕ್ಕೆ ಸೂಕ್ತ ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ. ಸ್ಥಳೀಯ ಉತ್ಪನ್ನಗಳಿಗೆ ಆಧುನಿಕ ಆನ್‌ಲೈನ್ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕು ಎಂದು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಪ್ರೊ. ಅನಂತ ನಾಗೇಶ್ವರನ್ ಹೇಳಿದರು.

ಅವರು ಮಣಿಪಾಲದಲ್ಲಿ ಹಿಂದೂ ಎಕನಾಮಿಕ್ ಫೋರಂ(Hindu Economic Forum) ಆಶ್ರಯದಲ್ಲಿ  ಪುಟ್ಟ ನಗರ ಹಾಗೂ ಪಟ್ಟಣಗಳ ಅಭಿವೃದ್ಧಿ ವಿಷಯದಲ್ಲಿ ನಡೆದ ‘ಇನ್ನರ್ ಭಾರತ್’ 2 ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Tap to resize

Latest Videos

undefined

ಜಗತ್ತಿನ ನಂ.4 ಆರ್ಥಿಕ ರಾಷ್ಟ್ರ ಜರ್ಮನಿಗೂ ಹಣ ಸಂಕಷ್ಟ

ಆರ್ಥಿಕತೆ ದೇಶದ 2-3 ನಗರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇಡೀ ದೇಶವನ್ನು ಅವಲಂಬಿಸಿರುತ್ತದೆ. ದೇಶದ ಬೇರೆ ಭಾಗಗಳನ್ನು ನಿರ್ಲಕ್ಷಿಸಿ ಲಂಡನ್‌ಗೆ ಮಾತ್ರ ಪ್ರಾಮುಖ್ಯತೆ ನೀಡಿದ ಕಾರಣ ಬ್ರಿಟನ್ ಆರ್ಥಿಕತೆ ದುರ್ಬಲಗೊಂಡಿತು. ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ನಗರಸಂಪರ್ಕ ಜಾಲ ಹೊಂದಿದ್ದು, 41.6 ಕೋಟಿ ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. 

2050ಕ್ಕೆ ಜನಸಂಖ್ಯೆಯ ಶೇ. 50ರಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸಲಿದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. ನಗರೀಕರಣ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಶೇ.3ರಷ್ಟು ಭೂ ಪ್ರದೇಶದಲ್ಲಿ ದೇಶದ ಶೇ. 60ರಷ್ಟು ಜಿಡಿಪಿ ಒಗ್ಗೂಡುವುದು ಉತ್ತಮ ಲಕ್ಷಣವಲ್ಲ. ಹೀಗಾಗಿ ಭಾರತದ ಚಿಕ್ಕ ನಗರ ಹಾಗೂ ಪಟ್ಟಣಗಳ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಇದು ಆಂತರಿಕ ಭದ್ರತೆಯ ಪುನರುತ್ಥಾನಕ್ಕೆ ಕಾರಣವಾಗಲಿದೆ ಎಂದರು. 

ದೇಶದ ಅಭಿವೃದ್ಧಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಮಹತ್ವದ ಪಾತ್ರ ವಹಿಸುತ್ತಿದ್ದು, 30 ವರ್ಷದ ಇತಿಹಾಸದಲ್ಲಿ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಪ್ರಮುಖ ಸಂಪರ್ಕಕೊಂಡಿಯಾಗಿವೆ. ದೇಶದಲ್ಲಿ 1.2 ಕೋಟಿ ಸ್ವಸಹಾಯ ಸಂಘಗಳಿದ್ದು, 1.42 ಕೋಟಿ ಕುಟುಂಬಗಳು ಇದರಲ್ಲಿ ಗುರುತಿಸಿಕೊಂಡಿವೆ. ವಾರ್ಷಿಕ 47,200 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂದರು. 

ಆಕ್ಸ್‌ಫರ್ಡ್ ಯೂನಿವರ್ಸಿಟಿ ಸ್ಟೂಡೆಂಟ್ ಯೂನಿಯನ್‌ನ ಪ್ರಥಮ  ಭಾರತೀಯ ಅಧ್ಯಕ್ಷೆ ರಶ್ಮಿ ಸಮಂತ್ ಮತ್ತು ಕಿಶನ್ ಶಾಸ್ತ್ರಿ  ಬರೆದ  ಉಡುಪಿ ವಿಷನ್ ಡಾಕ್ಯುಮೆಂಟ್ ವರದಿಯನ್ನು ಬಿಡುಗಡೆ ಮಾಡಿದರು.  
 
ಸ್ಕಾನರಿ ಟೆಕ್ನಲಾಜಿ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ವೈದ್ಯಕೀಯ ತಂತ್ರಜ್ಞಾನದ ಆವಿಷ್ಕಾರಗಳ ಬಗ್ಗೆ,  ನ್ಯುಮರಲ್ ಲ್ಯಾಬ್‌ಮುಖ್ಯಸ್ಥ ಪರಾಗ ನಾಯಕ್  ಕೃತಕ ಬುದ್ಧಿಮತ್ತೆ ಮತ್ತು ಸೆಮಿ ಕಂಡಕ್ಟರ್ ಕ್ಷೇತ್ರ, ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಬಗ್ಗೆ ಮಾತನಾಡಿದರು.  

ಒಂದೇ ದಿನದಲ್ಲಿ 92,620 ಕೋಟಿ ಕಳೆದುಕೊಂಡ ವಿಶ್ವದ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್!

ವಿಶ್ವ ಹಿಂದೂ ಪರಿಷತ್ತಿ(VHP) ನ ಉಪಾಧ್ಯಕ್ಷ  ಅಶೋಕ್ ಚೌಗುಲೆ(Ashok chaugule), ವಿಶ್ವ ಹಿಂದೂ ಪರಿಷತ್ತಿನ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ, ಉದ್ಯಮಿ  ಸ್ವದೇಶ್ ಶೇಖಾವತ್, ಶಿರಿಯಾರ್ ಗಣೇಶ್ ನಾಯಕ್ ಉಪಸ್ಥಿತರಿದ್ದರು. ದೀಪ್ತಿ ಸಿಂಗ್ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಸಾಮಂತ್ ವಂದಿಸಿದರು. 

click me!