Dharwad: ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸಕ್ಕೆ ಬಂದಿದೆ ಅನಾಮಧೇಯ ಪತ್ರ!

By Govindaraj S  |  First Published Dec 16, 2022, 1:58 PM IST

2023ರ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿ ಇರುವಾಗಲೆ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೆತ್ರದ ಮಾಜಿ ಶಾಸಕ ವಿನಯ ಕುಲಕರ್ಣಿಗೆ ಅವರು ಈಗಾಗಲೇ ಜಿಲ್ಲೆಯಿಂದ ಹೊರಗುಳಿದಿದ್ದಾರೆ.


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಡಿ.16): 2023ರ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿ ಇರುವಾಗಲೆ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೆತ್ರದ ಮಾಜಿ ಶಾಸಕ ವಿನಯ ಕುಲಕರ್ಣಿಗೆ ಅವರು ಈಗಾಗಲೇ ಜಿಲ್ಲೆಯಿಂದ ಹೊರಗುಳಿದಿದ್ದಾರೆ. ಮಾಜಿ ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್‌ನಲ್ಲಿ ಜಿಲ್ಲೆಗೆ ಆಗಮಿಸದಂತೆ‌ ಕೋರ್ಟ್‌ ಹಾಕಿರುವ ಷರತ್ತುಬದ್ದ ಜಾಮಿನು ನೀಡಿದ ಬೆನ್ನಲ್ಲೆ ಸದ್ಯ ಒಂದು ವರ್ಷದಿಂದ ಧಾರವಾಡ ಜಿಲ್ಲೆಯಿಂದ ಹೊರಗುಳಿದಿದ್ದಾರೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೆತ್ರ ಪ್ರತಿಷ್ಠೆಯ ಕಣವಾಗಿದೆ.

Latest Videos

undefined

ಸದ್ಯ ಹಾಕಿ ಶಾಸಕ ಅಮೃತ ದೇಸಾಯಿ ಕೂಡಾ ಬಿಜೆಪಿಯಿಂದ ಮತ್ತೆ ಕಣಕ್ಕೆ‌ ಇಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹೌದು! ಒಂದು ಕಡೆ ಗ್ರಾಮೀಣ ಕ್ಷೆತ್ರದಲ್ಲಿ ಚುಣಾವಣಾ ಅಖಾಡ ಸಿದ್ದವಾದ್ರೆ, ಮತ್ತೊಂದಡೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ, ಮತ್ತು ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಅನಾಧಯೇ‌ ಪತ್ರಗಳು ಕಳೆದ ನಾಲ್ಕೈದು ದಿನಗಳಲ್ಲಿ ನಾಲ್ಕು ಪತ್ರಗಳು ಬಂದಿವೆ. ಈ ಕುರಿತು ಪತ್ರದ ಬಗ್ಗೆ‌ ಚರ್ಚಿಸಿ ಶಿವಲೀಲಾ ಕುಲಕರ್ಣಿ ಸದ್ಯ ಉಪನಗರ ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದಾರೆ. 

ದೂರು ಕೊಟ್ಟವರಿಗೆ ಸಾಬೀತು ಪಡಿಸುವ ಜವಾಬ್ದಾರಿ ಇರುತ್ತದೆ: ಡಿಸಿ ಗುರುದತ್ತ ಹೆಗಡೆ ಸಲಹೆ

ಇನ್ನು ಧಾರವಾಡ ಉಪನಗರ ಪೋಲಿಸ್ ಠಾಣೆಯ ಎದುರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಅನಾಮಧಯೇ ಪತ್ರ ಬರೆದು ಹಾಕಿದವರ ವಿರುದ್ದ ಕಠಿಣ ಕ್ರಮ ಆಗಬೇಕು, ಮತ್ತು ಅನಾಮಧಯೇ‌ ಪತ್ರ ಬರೆಸಿದವರ ಬಗ್ಗೆ ಪತ್ತೆ ಹಚ್ಚಬೇಕು ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕ್ರಮವನ್ನ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ, ಶಿವಲೀಲಾ ಕುಲಕರ್ಣಿ, ಮಗಳು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಠಾಣೆಯ ಎದುರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು.

ದೂರಿನ ಪ್ರತಿಯಲ್ಲಿ ಏನಿದೆ ಅನ್ನೋದಾದ್ರೆ...

ಮಾನ್ಯ ಶ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ ಬೆಂಗಳೂರು.

ವಿಷಯ: ಅನಾಮದೇಯ ಪತ್ರಗಳ ವಿರುದ್ದ ಸೂಕ್ತ ಕಾನೂ‌ನು ಕ್ರಮ ಕೈಗೊಳ್ಳುವ ಕುರಿತು...

ಮಾನ್ಯರೆ,
ನಾನು ಶ್ರೀಮತಿ ಶಿವಲಿಲಾ ವಿನಯ ಕುಲಕರ್ಣಿ ಅವರ ಪತ್ನಿ ಕೇಳಿಕ್ಕೊಳ್ಳುವುದೆನೆಂದರೆ ನಮ್ಮ‌ನಿವಾಸಕ್ಕೆ ಅನಾಮಧಯೇ‌ ಪತ್ರ ಬರುತ್ತಿದೆ ಪತ್ರ ಬರೆದವರ ವಿರುದ್ದ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2019 ಲೋಕಸಭಾ ಚುಣಾನಾವಣೆಯಲ್ಲಿ ಈ ತರಹ ಬೆದರಿಕೆ ಪತ್ರಗಳು ಬಂದಿದ್ದವು ಅವಾವಲೂ ನಾವು ದೂರು ಕೊಟ್ಟರು ಸಹ ಯಾವುದೆ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ 2023ರ ವಿಧಾನಸಭಾ ಚುನಾವಣೆ ಸಮಿಪಿಸುತ್ತಿದ್ದಂತೆ ಅನೇಕ ಅನಾಮದಯೇ ಪತ್ರಗಳು ಮತ್ತೆ ಮತ್ತೆ ಬರುತ್ತಿವೆ, ಕಾರಣ ಈ  ವಿಷಯವನ್ನ ಗಂಭೀರವಾಗಿ ಪರಿಗಣಿಸಿ ಪತ್ರ ಬರೆಯುವರ ಮೆಲೆ ಸೂಕ್ತ ತನಿಖೆ‌ ನಡೆಸಿ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕ್ಕೊಳ್ಳುತ್ತೇನೆ.

ತಮ್ಮ ವಿಶ್ವಾಸಿ, 
ಶಿವಲೀಲಾ ವಿನಯ ಕುಲಕರ್ಣಿ

ನಮ್ಮ ಕ್ಲಿನಿಕ್‌ಗೆ ಸಿಎಂ ಬೊಮ್ಮಾಯಿ ಚಾಲನೆ: ಏಕಕಾಲಕ್ಕೆ 114 ಕ್ಲಿನಿಕ್‌ ಆರಂಭ

ಇ‌ನ್ನು ಪತ್ರದಲ್ಲಿ ನಮ್ಮ‌ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಮತ್ತೊಂದು ಕೊಲೆಯ ಕೇಸನ್ನ ನಿಮ್ಮ ತಲೆಗೆ ಕಟ್ಟಬೇಕಾಗುತ್ತೆ. ನೀವು ಧಾರವಾಡ ವಿಜಯಲಕ್ಷಿ ಎಂಬ ಮಹಿಳೆಯ ಹತ್ತಿರ ಹೋಗಿ ಬಗೆಹರಿಸಿಕ್ಕೊಳ್ಳಿ ಇಲ್ಲದಿದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಶಿವಲಿಲಾ ಕುಲಕರ್ಣಿ ಅವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

click me!