ಆರೋಗ್ಯ ಸರಿ ಇಲ್ಲ, ಮೖಕ್ ಸಿಕ್ಕಿದ ಕೂಡಲೇ ಪ್ರಚೋದಿತಳಾಗ್ತಾಳಂತೆ ಅಮೂಲ್ಯ

Suvarna News   | Asianet News
Published : Feb 21, 2020, 10:43 AM ISTUpdated : Feb 21, 2020, 12:19 PM IST
ಆರೋಗ್ಯ ಸರಿ ಇಲ್ಲ, ಮೖಕ್ ಸಿಕ್ಕಿದ ಕೂಡಲೇ ಪ್ರಚೋದಿತಳಾಗ್ತಾಳಂತೆ ಅಮೂಲ್ಯ

ಸಾರಾಂಶ

ಅಮೂಲ್ಯಗೆ ಸೂಕ್ತ ಚಿಕಿತ್ಸೆ ಬೇಕು. ಸಭೆಗಳಲ್ಲಿ ಮೈಕ್ ಸಿಕ್ಕ ತಕ್ಷಣ ಪ್ರಚೋದನೆಗೆ ಒಳಾಗುತ್ತಾಳೆ ಎಂದು ಅಮೂಲ್ಯ ತಂದೆ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಮಗಳು ಮಾಡಿದ ಅವಾಂತರಕ್ಕೆ ತಂದೆ ಹೇಳಿದ್ದೇನು..? ಇಲ್ಲಿ ಓದಿ.  

ಚಿಕ್ಕಮಗಳೂರು(ಫೆ.21): ಅಮೂಲ್ಯಗೆ ಸೂಕ್ತ ಚಿಕಿತ್ಸೆ ಬೇಕು. ಸಭೆಗಳಲ್ಲಿ ಮೈಕ್ ಸಿಕ್ಕ ತಕ್ಷಣ ಪ್ರಚೋದನೆಗೆ ಒಳಾಗುತ್ತಾಳೆ ಎಂದು ಅಮೂಲ್ಯ ತಂದೆ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಮಗಳು ಮಾಡಿದ ಅವಾಂತರದ ಬಗ್ಗೆ ತಂದೆ ವಾಜಿ ಮಾತನಾಡಿದ್ದಾರೆ.

"

ಮಗಳ ಹೇಳಿಕೆಗೆ ತಂದೆ ವಿರೋಧ ವ್ಯಕ್ತಪಡಿಸಿದ್ದು, ಯಾವ ಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾಳೆ ಎನ್ನುವುದು ಗೊತ್ತಿಲ್ಲ, ವಯಸ್ಸಿನಲ್ಲೂ ಇನ್ನು ಚಿಕ್ಕವಳು ,ಪ್ರಬುದ್ಧತೆಯ ಕೊರತೆ ಇದೆ. ಬೆಂಗಳೂರಿನಲ್ಲಿ ಕೆಲವರ ಸಹವಾಸದಿಂದ ಈ ರೀತಿಯ ಮಾತು  ಹೊರಬರುತ್ತಿದೆ ಎಂದು ಹೇಳಿದ್ದಾರೆ.

ನಿಮ್ಗಿಂತ ಸೀನಿಯರ್, ನಂಗ್ ಹೇಳೋಕೆ ಬರ್ರ್ಬೇಡಿ: ಸ್ಪೀಕರ್‌ಗೆ ವಾರ್ನಿಂಗ್

ಅಮೂಲ್ಯಗೆ ಸಾಕಷ್ಟು ಬುದ್ದಿವಾದ ಹೇಳಿದ್ದೇನೆ. ಅಮೂಲ್ಯಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ. ದೈಹಿಕ ಸಮಸ್ಯೆ ಇಲ್ಲ, ಯಾವುದೋ ಒಂದು ಕೊರತೆ ಇದೆ. ಬೆಂಗಳೂರಿನಲ್ಲಿ ಡಾಕ್ಟರ್ ಭೇಟಿ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಅಮೂಲ್ಯಗೆ ಸೂಕ್ತ ಚಿಕಿತ್ಯೆ ಬೇಕು , ಚಿಕಿತ್ಯೆ ಕೊಡಿಸಲು ಅಮೂಲ್ಯ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಸಭೆಗಳಲ್ಲಿ ಮೈಕ್ ಸಿಕ್ಕ ತಕ್ಷಣ ಪ್ರಚೋದನೆಗೆ ಒಳಾಗುತ್ತಾಳೆ. ದೇಶವಿರೋಧಿ ಘೋಷಣೆ ತಪ್ಪು, ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಲಿ. ಸುವರ್ಣ ನ್ಯೂಸ್ ಅಮೂಲ್ಯ ತಂದೆ ವಾಜಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಹೇಳಿದ್ದಾರೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!