Udupi: ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ

By Sathish Kumar KH  |  First Published Jan 11, 2023, 11:08 PM IST

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿರುವ ಶ್ರೀ ಅಮೃತೇಶ್ವರಿ ದೇವಿ ಹಲವು ಮಕ್ಕಳ ತಾಯಿ ಎಂದೆ ಖ್ಯಾತಿ. ಕೋಟ ರಾಷ್ಟ್ರೀಯ ಹೆದ್ದಾರಿ 66 ರ ಪಶ್ವಿಮ ದಿಕ್ಕಿನಲ್ಲಿರುವ ಅಮೃತೇಶ್ವರಿ ಸನ್ನಿಧಿ ಖರಾಸುರ ದಂಪತಿಗಳಿಂದ ಸ್ಥಾಪಿತವಾಗಿರುವ ಈ ಕ್ಷೇತ್ರದಲ್ಲಿ ಮಕ್ಕಳಿಲ್ಲದವರು ಪ್ರಾರ್ಥನೆ ಸಲ್ಲಿಸಿದರೆ ಮಕ್ಕಳಾಗುತ್ತದೆ ಎನ್ನುವ ಸಾಕಷ್ಟು ನಿದರ್ಶನಗಳಿವೆ.


ಉಡುಪಿ (ಜ.11):  ಅವಳು ಹಲವು ಮಕ್ಕಳ ತಾಯಿ ಎಂದೆ ಖ್ಯಾತಿ ಪಡೆದಿರುವ ಕರಾವಳಿಯ ದೇವಿ. ಕೋಟದಲ್ಲಿ ನೆಲೆ ನಿಂತಿರುವ ಹಲವು ಮಕ್ಕಳ ತಾಯಿ ಅಮೃತೇಶ್ವರಿ ಮುಂದೆ ಮಕ್ಕಳ ಭಾಗ್ಯಕ್ಕಾಗಿ ಸೆರಗೊಡ್ಡಿದರೆ ಖಾಲಿ ಉಳಿದ ಇತಿಹಾಸವೇ ಇಲ್ಲ. ಇಲ್ಲಿ ಮೂರು ದಿನಗಳ ಕಾಲ, ದೇವಿಯ ಕೆಂಡೋತ್ಸವ ಮತ್ತು ಹಾಲುಹಬ್ಬ ಸಂಪನ್ನ ಗೊಂಡಿತ್ತು..

ಹೌದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿರುವ ಶ್ರೀ ಅಮೃತೇಶ್ವರಿ ದೇವಿ ಹಲವು ಮಕ್ಕಳ ತಾಯಿ ಎಂದೆ ಖ್ಯಾತಿ. ಕೋಟ ರಾಷ್ಟ್ರೀಯ ಹೆದ್ದಾರಿ 66 ರ ಪಶ್ವಿಮ ದಿಕ್ಕಿನಲ್ಲಿರುವ ಅಮೃತೇಶ್ವರಿ ಸನ್ನಿಧಿ ಪುರಾಣ ಕಾಲದಿಂದಲೂ ಸಂತಾನ ಪ್ರಾಪ್ತಿಗೆ ಹೆಸರಾದ ಕ್ಷೇತ್ರ.

Tap to resize

Latest Videos

undefined

ಖರಾಸುರ ದಂಪತಿಗಳಿಂದ ಸ್ಥಾಪಿತವಾಗಿರುವ ಈ ಕ್ಷೇತ್ರದಲ್ಲಿ ಮಕ್ಕಳಿಲ್ಲದವರು ಪ್ರಾರ್ಥನೆ ಸಲ್ಲಿಸಿದರೆ ಮಕ್ಕಳಾಗುತ್ತದೆ ಎನ್ನುವ ಸಾಕಷ್ಟು ನಿದರ್ಶನಗಳಿವೆ. ಸಂತಾನ ಪ್ರಾಪ್ತಿಗಾಗಿ ಈ ಕ್ಷೇತ್ರದಲ್ಲಿ ಬೆಳಕಿನ ಸೇವೆ ಯಕ್ಷಗಾನ ಮಾಡಿಸುವ ಹರಕೆ ಸೇವೆಯ ರೂಪದಲ್ಲಿದೆ. ಸಾಕಷ್ಟು ಭಕ್ತರು ಬೆಳಕಿನ ಸೇವೆಯ ಮೂಲಕ ಸಂತಾನ ಪ್ರಾಪ್ತಿ ಪಡೆದಿರುವ ಹಿನ್ನಲೆ ಕ್ಷೇತ್ರದ ಸ್ಥಳ ಸಾನಿಧ್ಯದ ಪ್ರಖ್ಯಾತಿ ಕರಾವಳಿಯಿಂದ ಹಿಡಿದ ರಾಜ್ಯದ ನಾನಾ ಭಾಗಗಳಿಗೂ ಹರಡಿದೆ.  ಪ್ರತಿ ವರ್ಷ ಜನವರಿ 9, 10 ಮತ್ತು 11 ತಾರೀಖಿನಂದು ಇಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ, ದೇಶ ವಿದೇಶದಿಂದಲೂ ಭಕ್ತರು ಆಗಮಿಸಿ ಶ್ರೀದೇವಿ ಯ ದರ್ಶನ ಪಡೆದು ಪುನೀತರಾಗುತ್ತಾರೆ.

Chamarajanagara: ಕೊಳ್ಳೇಗಾಲದ ಸಿದ್ದಪ್ಪಾಜಿಗೆ ಕದ್ದುಮುಚ್ಚಿ ಮದ್ಯ, ಮಾಂಸ ನೈವೇದ್ಯ: ಪಂಕ್ತಿ ಸೇವೆ

ಎಂಟು ವರ್ಷಗಳ ಹಿಂದೆ ದೇವಳ ಜೀರ್ಣೋದ್ಧಾರ: ಸುಮಾರು ಎಂಟು ವರ್ಷಗಳ ಹಿಂದೆ ಶ್ರೀ ದೇವಳವು ಜೀರ್ಣೋದ್ಧಾರ ಗೊಂಡು ಪುನರ್ ಪ್ರತಿಷ್ಠೆ  ನಡೆದ ಬಳಿಕ ಇನ್ನಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಕೋರೋನಾ ಕಾರ್ಮೋಡ ಕವಿದ ಹಿನ್ನಲೆಯಲ್ಲಿ ದೇವಳದ ಜಾತ್ರೆಗೆ ನಿಷೇಧ ಹೇರಲಾಗಿತ್ತು. ಕೇವಲ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಸೀಮಿತವಾಗಿ ಜಾತ್ರೆ ಆಚರಿಸಿಲಾಗಿತ್ತು. ಈ ಬಾರಿ ಕೊರೋನಾ ಕಳೆದಿರುವ ಹಿನ್ನಲೆಯಲ್ಲಿ ಉತ್ಸಾಹದಿಂದ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಜಾತ್ರೆಯ ಅಂಗವಾಗಿ ಮೊದಲದಿನ ಸೋಮವಾರ ದೇವಳದ ಧಾರ್ಮಿಕ ಕಾರ್ಯಕ್ರಮ ನಡೆಯಿತು, ಮಂಗಳವಾರದಂದು ರಾತ್ರಿ ದೇವಿಯ ವೈಭವದ ಕೆಂಡ ಸೇವೆ, ಹಾಲಿಟ್ಟು ಸೇವೆ ನಡೆದಿದ್ದು, ಇಂದು ಜಾತ್ರೆಯ ಮೂರನೆ ದಿನದ ಅಂಗವಾಗಿ ಪೂವಾಹ್ನ ಢಕ್ಕೆಬಲಿ ಸೇವೆ ನಂತರ ತುಲಾಭಾರ ಸೇವೆಗಳು ನಡೆಯಿತು.

ಸಿದ್ದರಾಮಯ್ಯ ಆಡಳಿತದಲ್ಲಿ ಒಂದೇ ಸಮುದಾಯದ 23 ಜನರ ಹತ್ಯೆಯಾಗಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ಲಾಸ್ಟಿಕ್‌ ಮುಕ್ತ ಜಾತ್ರೆ: ವಿಶೇಷವಾಗಿ ಈ ಬಾರಿ ಪ್ಲಾಸ್ಟಿಕ್‌ ಮುಕ್ತ ಜಾತ್ರೆಯಾಗುವ ಉದ್ದೇಶದಿಂದ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಬಟ್ಟೆ ಚೀಲಗಳ ವಿತರಣೆ ಕೂಡ ನಡೆಯಿತು.ಒಟ್ಟಾರೆಯಾಗಿ, ಕೋಟ ಭಾಗದ ಹಲವು ಮಕ್ಕಳು ತಾಯಿ ಸಂತಾನ ಭಾಗ್ಯವಿಲ್ಲದವರ ಪಾಲಿನ ಆಶಾಕಿರಣವಾಗಿದ್ದಾಳೆ. ಬೇಡಿ ಬರುವ ಭಕ್ತರ ಆಶೋತ್ತರಗಳನ್ನು ಈಡೇರಿಸುವ ಈ ಕ್ಷೇತ್ರ ಮಹಿಮೆ ತಿಳಿದಹ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ಷೇತ್ರದ ಮಹಿಮೆಯನ್ನು ತಿಳಿಸುತ್ತದೆ.

click me!