ವೆಂಕಟಯ್ಯನ ಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ನೇತೃತ್ವದ ತಂಡ ಜಯಗಳಿಸಿದೆ.
ಚಾಮರಾಜನಗರ: ವೆಂಕಟಯ್ಯನ ಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ನೇತೃತ್ವದ ತಂಡ ಜಯಗಳಿಸಿದೆ.
ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 11ಮಂದಿ ಬಿಜೆಪಿ ಬೆಂಬಲಿತರು ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಮತ್ತೆ ವೆಂಕಟಯ್ಯನ ಛತ್ರ ಡೇರಿ ಆಡಳಿತವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಯಶಸ್ವಿಯಾದರು.
undefined
ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು(434 ಮತಗಳು), ಶಿವರಾಜು( 380 ಮತಗಳು) ಸಂಪತ್ತುಕುಮಾರ್( 349 ಮತಗಳು) ಮಹದೇವಸ್ವಾಮಿ ಎನ್( 359 ಮತಗಳು) ಮಹದೇವಸ್ವಾಮಿ ಬಿ.ಎನ್.(343 ಮತಗಳು) ನಾಗರಾಜು ವಿ.ಬಿ.( 357 ಮತಗಳು) ಕೃಷ್ಣೇಗೌಡ (382 ಮತಗಳು) ಬಂಗಾರು( 331 ಮತಗಳು) ಪದ್ಮರಾಜು( 326 ಮತಗಳು) ರೇಣುಕಾ (356 ಮತಗಳು) ಜಯಮ್ಮ ( 369 ಮತಗಳು) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ಸುಭಾಷಿಣಿ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿ ಸಂಘದ ಸಿಇಒ ಪುನೀತ್
ಕಾರ್ಯನಿರ್ವಹಿಸಿದರು.
ಹೈನುಗಾರರ ಅಭಿವೃದ್ಧಿಗೆ ಹೆಚ್ಚಿನ ಒತ್ತು
ಬಿಜೆಪಿ ಬೆಂಬಲಿತರು ಆಯ್ಕೆಯಾಗುತ್ತಿದ್ದಂತೆ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಣೆ ಮಾಡಿದರು. ಗ್ರಾಮದ ದೇವತೆ ಚೆಂಗೂರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವಿ. ಸೋಮಣ್ಣ, ಶಮಿತ್‌ಕುಮಾರ್, ಮಾಜಿ ಸದಸ್ಯ ಆಶೋಕ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಗಿರಿಮಲ್ಲು, ಮುಖಂಡರಾದ ಪುಟ್ಟಸ್ವಾಮಿ, ಹೊಸೂರು ನಟೇಶ್, ಮಹೇಶ್ ಇದ್ದರು.
ಗ್ರಾಮದ ಡೇರಿ ಚುನಾವಣೆಯಲ್ಲಿ ಸಂಘದ ಸದಸ್ಯರು ನಮ್ಮ ಆಡಳಿತವನ್ನು ಮೆಚ್ಚಿ ಮತ್ತೇ ಅಧಿಕಾರ ಹಿಡಿದಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋುಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಪಡಿಸುವ ಜೊತೆಗೆ ವೆಂಕಟಯ್ಯನಛತ್ರ ಡೇರಿಯನ್ನು ಮಾದರಿ ಡೇರಿಯನ್ನಾಗಿ ಮಾಡುವ ಜೊತೆಗೆ ಚಾಮುಲ್ ಮತ್ತು ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸವಲತ್ತುಗಳನ್ನು ಸಂಘದ ಸದಸ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನಮ್ಮ ತಂಡ 11 ಮಂದಿ ಗೆಲುವಿಗೆ ಸಹಕಾರ ನೀಡಿದ ಎಲ್ಲರಿಗೂ ಸಹ ಅಭಾರಿಯಾಗಿರಲಿದೆ.
-ಎಚ್.ಎಸ್. ಬಸವರಾಜು, ನಿರ್ದೇಶಕ, ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘ