ಚಿಕ್ಕಬಳ್ಳಾಪುರ: ವಕ್ಫ್‌ ಪಾಲಾಗಿದ್ದ ಸರ್‌ಎಂ.ವಿ ಓದಿದ ಶಾಲೆಯ ಆಸ್ತಿ ತಿದ್ದುಪಡಿ

By Kannadaprabha News  |  First Published Nov 9, 2024, 8:02 AM IST

ಸರ್‌ ಎಂ.ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿದ್ದ ಸರ್ಕಾರಿ ಹಿರಿಯ ಶಾಲೆಯ ಆಸ್ತಿ ವಕ್ಫ್‌ ಹೆಸರಿಗೆ ಪರಭಾರೆಯಾಗಿದ್ದ ಬಗ್ಗೆ ಶುಕ್ರವಾರ ‘ಕನ್ನಡಪ್ರಭ’ ವರದಿ ಮಾಡಿತ್ತು. ‘ಭಾರತ ರತ್ನ ಸರ್.​ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್‌​ ಮಂಡಳಿ ಆಸ್ತಿಯಂತೆ’ ಎಂದು ಸುದ್ದಿ ಪ್ರಕಟಿಸಿತ್ತು. ಈ ಬಗ್ಗೆ ಎಚ್ಚೆತ್ತ ಕಂದಾಯ ಅಧಿಕಾರಿಗಳು ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದಾರೆ. 


ಚಿಕ್ಕಬಳ್ಳಾಪುರ(ನ.09): ವಕ್ಫ್‌​ ಮಂಡಳಿ ಪಾಲಾಗಿದ್ದ, ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ನವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಯ ಆಸ್ತಿಯ ಪಹಣಿಯನ್ನು ತಿದ್ದುಪಡಿ ಮಾಡಲಾಗಿದೆ.

ಸರ್‌ ಎಂ.ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿದ್ದ ಸರ್ಕಾರಿ ಹಿರಿಯ ಶಾಲೆಯ ಆಸ್ತಿ ವಕ್ಫ್‌ ಹೆಸರಿಗೆ ಪರಭಾರೆಯಾಗಿದ್ದ ಬಗ್ಗೆ ಶುಕ್ರವಾರ ‘ಕನ್ನಡಪ್ರಭ’ ವರದಿ ಮಾಡಿತ್ತು. ‘ಭಾರತ ರತ್ನ ಸರ್.​ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್‌​ ಮಂಡಳಿ ಆಸ್ತಿಯಂತೆ’ ಎಂದು ಸುದ್ದಿ ಪ್ರಕಟಿಸಿತ್ತು. ಈ ಬಗ್ಗೆ ಎಚ್ಚೆತ್ತ ಕಂದಾಯ ಅಧಿಕಾರಿಗಳು ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದಾರೆ. ಒಟ್ಟು ವಿಸ್ತೀರ್ಣವಾದ 19 ಗುಂಟೆ ಪೈಕಿ 17.12 ಗುಂಟೆ ಜಮೀನು ಶಾಲೆಗೆ ಸೇರಿದ್ದು ಎಂದು ತಿದ್ದುಪಡಿಗೊಳಿಸಿ ಆದೇಶ ಹೊರಡಿಸಿರುವುದಾಗಿ ತಹಸೀಲ್ದಾರ್ ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos

ರೈತರ ಒಂದೇ ಒಂದು ಇಂಚು ಭೂಮಿ ವಕ್ಫ್‌ಗೆ ಕೊಡಲ್ಲ, ನಾನು ವಕ್ಫ್‌ ಪರ ಇಲ್ಲ: ಸಚಿವ ಎಂ.ಬಿ. ಪಾಟೀಲ್

ನಗರದ ಕಂದವಾರ ವಾರ್ಡ್ ನ ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್‌ ಸ್ವತ್ತು ಎಂದು ಬದಲಾವಣೆ ಮಾಡಲಾಗಿತ್ತು. 2015- 16 ರಲ್ಲಿ ಪಹಣಿಯಲ್ಲಿ ಶಾಲೆ ಬದಲು ವಕ್ಫ್‌ ಸ್ವತ್ತು ಎಂದು ನಮೂದಾಗಿದೆ

click me!