'ಇದೊಂದು ಗಂಭೀರ ಘಟನೆ : ಶಾಸಕ ಮಹೇಶ್‌ ಮಂಪರು ಪರೀಕ್ಷೆಯಾಗಲಿ'

By Kannadaprabha News  |  First Published Dec 11, 2020, 2:01 PM IST

ಕೊಳ್ಳೆಗಾಲದಲ್ಲಿ ನಡೆದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.


ಕೊಳ್ಳೆಗಾಲ (ಡಿ.11):ಡಿ.2ರಂದು ಶಾಸಕ ಮಹೇಶ್‌ ಅವರು ತಮ್ಮ ಬೆಂಬಲಿಗರನ್ನು ಬಿಟ್ಟು ದಲಿತರ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆ ವೇಳೆ ಅನ್ಯ ಧರ್ಮಿಯರನ್ನು ಬಳಸಿಕೊಂಡಿರುವುದನ್ನು ಗಮನಿಸಿದರೆ ಈ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯ ಸತ್ಯಾಸತ್ಯತೆ ಬಯಲಿಗೆ ಬರಬೇಕಾದರೆ ಶಾಸಕ ಮಹೇಶ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಜೊತೆಗೆ ಅಮಾಯಕರ ಮೇಲೆ ಹಾಡಹಗಲೆ ಹಲ್ಲೆಗೈದವರನ್ನು ಗಡೀಪಾರಿಗೆ ಶಿಫಾರಸು ಮಾಡಬೇಕು ಎಂದು ತಾಲೂಕು ಅಂಬೇಡ್ಕರ್‌ ಸಂಘಟನೆಗಳ ಸಂಚಾಲಕ ಶೇಖರ್‌ ಬುದ್ದ ಹೇಳಿದರು.

ಅವರು ನಗರದಲ್ಲಿ ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.2ರಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದವರ ಮೇಲೆ ಶಾಸಕರು ತಮ್ಮ ಬೆಂಬಲಿಗರಾದ ನಾಸೀರ್‌ ಪಾಶಾ, ಜಕಾವುಲ್ಲಾರನ್ನು ಬಿಟ್ಟು ಹಲ್ಲೆ ಮಾಡಿಸಿದ್ದು ಸರಿಯಲ್ಲ, ಇದರಲ್ಲಿ ಏನೋ ಒಳಸಂಚಿದೆ. ಈ ಗಲಭೆಯಲ್ಲಿ ಯಾರ ಕೈವಾಡ ಇದೆ ಅಂತಹವರಿಗೆ ನಿಜಕ್ಕೂ ಶಿಕ್ಷೆಯಾಗಬೇಕು, ಜೊತೆಗೆ ಹಲ್ಲೆಗೈದು ಗಲಭೆಗೆ ಕಾರಣಕರ್ತರಾದ ಮಲ್ಲಿಕಾರ್ಜುನಸ್ವಾಮಿ, ನಾಸೀರ್‌ ಪಾಶಾ, ಹಾಗೂ ಜಕಾವುಲ್ಲಾರನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಗಡಿಪಾರಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಶಾಸಕ ಎನ್‌ ಮಹೇಶ್ ವಿರುದ್ಧ ಗರಂ ಆದ ಕೈ ಮುಖಂಡ : ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ...

ಶಾಸಕರ ಪಿತೂರಿ ಇದೆ: ಡಿಸೆಂಬರ್‌ ತಿಂಗಳಲ್ಲಿ ನನ್ನ ಶಕ್ತಿ ಏನು ಎಂದು ತೋರಿಸುವೆ ಎಂಬ ಹೇಳಿಕೆಯನ್ನು ಶಾಸಕ ಮಹೇಶ್‌ ಅವರು ಆಗಿಂದಾಗ್ಗೆ ನೀಡುತ್ತಿದ್ದು. ಇವರ ಹೇಳಿಕೆಯಲ್ಲಿ ಕ್ಷೇತ್ರದ ಅಭಿವ್ದದ್ಧಿ ಅಡಗಿದೆ ಎಂಬದು ನಾವೆಲ್ಲ ಭಾವಿಸಿದ್ದೆವು, ಆದರೆ ಅವರ ಅಭಿಮಾನಿ ಬಳಗ ದಲಿತ ಸಮುದಾಯದವರ ಮೇಲೆ ಡಿ. 2ರಂದೆ ಹಲ್ಲೆ ನಡೆಸಿರುವುದನ್ನ ಗಮನಿಸಿದರೆ ಈ ಪ್ರಕರಣದಲ್ಲಿ ಮಹೇಶ್‌ ಪಿತೂರಿ ಖಂಡಿತ ಇದೆ. ಈ ಹಲ್ಲೆ, ಗಲಭೆ ಪ್ರಕರಣದಲ್ಲಿ ಕ್ಷೇತ್ರದ ಜನರನ್ನು ಹಾಗೂ ಪ್ರಶ್ನಿಸುವವರನ್ನು ಹೆದರಿಸುವ ಷಡ್ಯಂತ್ರ ಅಡಗಿದ್ದು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ್ಢಗಿOಎ ಛಿಐಈಒಖಿಊಋಊOಒಎ.

ಅಮಾಯಕರಿಗೆ, ದಲಿತರಿಗೆ ತೊಂದರೆಯಾದರೆ ಹೋರಾಟ:

ಕ್ಷೇತ್ರದಲ್ಲಿ ಅಭಿವೃದ್ಧಿ ಕುರಿತು ಪ್ರಶ್ನಿಸುವ ದಲಿತ ಸಮುದಾಯ ಹಾಗೂ ಅಮಾಯಕರಿಗೆ ತೊಂದರೆ ನೀಡಲು ಶಾಸಕರ ಅಭಿಮಾನಿ ಬಳಗ ಮುಂದಾದರೆ ನಾವು ಗಂಭೀರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತದೆ. ಶಾಸಕರಿಗೆ ಮತ ನೀಡಿದವರು ಪ್ರಶ್ನಿಸುವುದು ಸರಿ, ಆದರೆ ಪ್ರಶ್ನಿಸಿದವರನ್ನು ಹಲ್ಲೆ ಮಾಡಿಸುವುದು ಸರಿಯಲ್ಲ, ಈ ಪ್ರಕರಣದ ಸತ್ಯಾಸತ್ಯತೆಯನ್ನು ಸರ್ಕಾರ ಪರಿಗಣಿಸಬೇಕು ಎಂದರು. ಈ ಪ್ರಕರಣದಲ್ಲಿ ನೈಜ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಲಿತ ಅಭಿವೃದ್ಧಿ ಸಂಘದ ಅಧ್ಯಕ್ಷ ಉತ್ತಂಬಳ್ಳಿ ಲಿಂಗಣ್ಣ, ಬಿಎಸ್‌ಪಿ ಮುಖಂಡ ಮಣಿ ಇನ್ನಿತರರು ಇದ್ದರು

click me!