ಅಂಬೇಡ್ಕರ್ ಕೇವಲ ಮೀಸಲಾತಿ ಮಾತ್ರ ನೀಡಲಿಲ್ಲ, ಜಾತ್ಯತೀತೆ, ಸಮಾನತೆ, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ನೀಡಿದರು, ಅಂಬೇಡ್ಕರ್‌ರನ್ನು ಸಮಕಾಲಿನಗೊಳಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹುಮುಖಿಯ ಚಿಂತಕ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕೋಲಾರ (ಡಿ.07): ಅಂಬೇಡ್ಕರ್ ಕೇವಲ ಮೀಸಲಾತಿ ಮಾತ್ರ ನೀಡಲಿಲ್ಲ, ಜಾತ್ಯತೀತೆ, ಸಮಾನತೆ, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ನೀಡಿದರು, ಅಂಬೇಡ್ಕರ್‌ರನ್ನು ಸಮಕಾಲಿನಗೊಳಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹುಮುಖಿಯ ಚಿಂತಕ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ರಂಗಮಂದಿರದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ, ಪರಿಶಿಷ್ಟಜಾತಿ/ವರ್ಗಗಳ ಕಲ್ಯಾಣ ಸಂಸ್ಥೆಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್‌ರವರ ಪರಿನಿರ್ವಾಣದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುನರುತ್ಥಾನ-ಪ್ರತಿರೋಧ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ನೆಲದ ನೋಟದಿಂದ ಅಂಬೇಡ್ಕರ್‌ರನ್ನು ನೋಡಬೇಕು ಜೊತೆಗೆ ಸಮಕಾಲಿನಕ್ಕೆ ಒಳಪಡಿಸಿಕೊಳ್ಳಬೇಕು ಎಂಬ ಮಾತು ಬಹಳ ಮುಖ್ಯವಾಗಿದೆ ಅವರು ಇದನ್ನು ಭೌತಿಕಯಾನವಾಗಿ ಪರಿಗಣಿಸಿಕೊಂಡು ಅಂದೋಲವನ್ನಾಗಿಸಬೇಕೆಂಬ ಆಶಯ ಬಹಳ ಮುಖ್ಯವಾಗಿದೆ,
ದಲಿತ ಸಿಎಂಗೆ ಜಾತಿ ವ್ಯವಸ್ಥೆಯೇ ಅಡ್ಡಗಾಲು: ಡಾ.ಪಿ.ಮೂರ್ತಿ ಬೇಸರ
ಅಂಬೇಡ್ಕರ್ ಇಂದು ಎಷ್ಟು ಪ್ರಸ್ತುತ ಎಂಬುವುದು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು. ಮೂಲಭೂತವಾದಿಗಳಾಗಬಾರದು: ಭಾವಕೋಶದಲ್ಲಿ ಬಂದೂಕಿನ ಬೀಜಗಳನ್ನು ಬಿತ್ತಲಾಗುತ್ತಿದೆ, ಬಾಯಿ ಬಂದೂಕು ಮತ್ತು ಬಂದೂಕು ಬಾಯಿಯಾಗಿ ರೂಪಾಂತರವಾಗಿರಿಸಿರುವ ಎರಡು ರೀತಿಯ ಬೀಜಗಳಿದೆ, ಈ ದೇಶದಲ್ಲಿ ಭಯೋತ್ಪಾದನೆ, ದ್ವೇಷೋತ್ಪಾದನೆಗಳಿರುವ ಸಂದರ್ಭದಲ್ಲಿ ನಾವಿದ್ದೇವೆ ಸೈದ್ದಾಂತಿಕವಾಗಿ ಮೂಲಭೂತವಾದಿಗಳಾಗಬಾರದು ಎಂದು ಹೇಳಿದರು.
ದೇವಾಲಯಕ್ಕೆ ಪ್ರವೇಶ ನಿರಾಕರಣೆ: ಅಸ್ಪೃಶ್ಯತರಿಗೆ ಪ್ರವೇಶ ಇಲ್ಲದಕ್ಕೆ ಜೈಲ್‌ಸಿಂಗ್ ದೇವಾಲಯ ಪ್ರವೇಶಿಸಲಿಲ್ಲ, ಇಂದಿರಗಾಂಧಿ ಮುಸ್ಲಿಂರನ್ನು ಮದುವೆಯಾದರೆಂದು, ಜೇಸುದಾಸ್ ಕೈಸ್ತರೆಂದು ದೇವಾಲಯಕ್ಕೆ ಪ್ರವೇಶ ನೀಡದಿರುವ ಬಗ್ಗೆ ಜಾತಿ ವ್ಯವಸ್ಥೆ, ಅಶ್ಪಶ್ಯತೆ ಕುರಿತು ವಿವರಿಸಿದ ಅವರು ೧.೭೮ ಕೋಟಿ ಕೈಯಲ್ಲಿ ಮಲ ಬಾಚುವವರು, ೮ ಕೋಟಿ ಮಲವನ್ನು ತಳ್ಳುವ ಗಾಡಿಯಲ್ಲಿ ವಿಲೇವಾರಿ ಮಾಡುವವರು ಇನ್ನು ಜೀವಂತವಾಗಿದ್ದಾರೆ ಎಂದರು. ಸಾಮಾಜಿಕ ಪ್ರಜಾಪ್ರಭುತ್ವ, ಅರ್ಥಿಕ ಪ್ರಜಾ ಪ್ರಭುತ್ವ ಮತ್ತು ರಾಜಕೀಯ ಪ್ರಜಾ ಪ್ರಭುತ್ವದ ಬಗ್ಗೆ ತಿಳಿಸಿದ ಅವರು ಶೇ ೭೩ರಷ್ಟು ಸಂಪತ್ತು ಶೇ.೧ರಷ್ಟು ಅನುಭವಿಸುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ೧೦.೮ ಲಕ್ಷ ಕೋಟಿ ಸಾಲ ಮನ್ನ ಮಾಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಬಂಡಾವಳ ಶಾಹಿಗಳ ಸಂಪತ್ತು ಶೇ.೩೫ರಷ್ಟು ಹೆಚ್ಚಳ ಮಾಡಿಕೊಂಡಿದ್ದು ಹೇಗೆ ಎಂಬುವುದು ಪ್ರಶ್ನಿಸಿದರು.
ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಜೋಲಿಯೇ ಗತಿ: ಗುಂಡಿಯ ನೀರೇ ಕೊಡಗಿನ ಸೂಳೆಭಾವಿ ಹಾಡಿ ಜನರಿಗೆ ಜೀವಜಲ!
ಮೂಲಭೂತ ಹಕ್ಕು ನೀಡಿದ ಅಂಬೇಡ್ಕರ್: ಅಂಬೇಡ್ಕರ್ ಕೇವಲ ಮೀಸಲಾತಿ ನೀಡಲಿಲ್ಲ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ನೀಡಿದಂತ ಬಹುಮುಖಿಯಾಗಿದ್ದರು, ನಮ್ಮ ಆಧ್ಯತೆಗಳನ್ನು ಜಾತಿವಾದಿಗಳು ಪಲ್ಲಟಗೊಳಿಸಿದ್ದಾರೆ ಇದರ ವಿರುದ್ದ ಹೋರಾಟ ಅಗತ್ಯವಿದೆ ಎಂದರು. ಕಿಸಾಗೋತಮಿ ಫೌಂಡೇಶನ್ ಡಾ.ರಮೇಶ್ ಬೆಲ್ಲಂ ಕೊಂಡ, ಅಂಬೇಡ್ಕರ್ ಸಂಶೋಧನ ಕೇಂದ್ರ ಸಂಶೋಧಕಿ ಎನ್.ವಿ.ಭಾಗ್ಯಲಕ್ಷ್ಮಿ, ಬರಹಗಾರ ಮಾತೂರು ಸತ್ಯ.ಜೆ, ಪತ್ರಕರ್ತ ಎನ್.ಎಸ್.ಶಂಕರ್, ಡಾ.ಶ್ರೀರಾಮಯ್ಯ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಇದ್ದರು.