ನಮ್ಮ ಮೆಟ್ರೋದ ‘ನೀಲಿ ಮಾರ್ಗ’ದ ಕೆ.ಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಚಿಕ್ಕಜಾಲದ ಬಳಿ ‘ಯು ಗರ್ಡರ್’ ಅಳವಡಿಕೆ ಮಾಡುತ್ತಿದೆ.
ಬೆಂಗಳೂರು (ಏ.20): ನಮ್ಮ ಮೆಟ್ರೋದ ‘ನೀಲಿ ಮಾರ್ಗ’ದ ಕೆ.ಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಚಿಕ್ಕಜಾಲದ ಬಳಿ ‘ಯು ಗರ್ಡರ್’ ಅಳವಡಿಕೆ ಮಾಡುತ್ತಿದೆ. ಈ ಮಾರ್ಗದ ಕಾಮಗಾರಿಯಲ್ಲಿ ವಯಡಕ್ಟ್ಗಾಗಿ (ಮೇಲ್ಸೇತುವೆ ) ಮೊದಲ ಬಾರಿ ‘ಯು ಗರ್ಡರ್’ಗಳನ್ನು ಅಳವಡಿಸಲಾಗುತ್ತಿದೆ. ಸಮಯ ಹಾಗೂ ನಿರ್ಮಾಣ ವೆಚ್ಚ ಕಡಿಮೆ ಮಾಡಲು ಈ ಮಾದರಿಯ ಗರ್ಡರ್‌ಗಳ ಬಳಸಲಾಗುತ್ತಿದೆ.
ನಮ್ಮ ಮೆಟ್ರೊ ಕಳೆದ ವರ್ಷ ಜೂನ್‌ನಲ್ಲಿ ಹೊರವರ್ತುಲ ರಸ್ತೆ-ಏರ್‌ಪೋರ್ಟ್ ಮಾರ್ಗದಲ್ಲಿ ಮೊದಲ ಬಾರಿಗೆ ‘ಯು ಗರ್ಡರ್’ಗಳ ಬಳಕೆ ಮಾಡಿತ್ತು. ಯಲಹಂಕ ಐಎಎಫ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ 15.1 ಕಿ.ಮೀ. ಈ ಮಾರ್ಗದಲ್ಲಿ 784 ಯು ಗರ್ಡರ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಪ್ರತಿಯೊಂದು ಯು ಗರ್ಡರ್‌ಗಳು 28 ಮೀ. ಉದ್ದವಿದ್ದು, 165 ಟನ್ ತೂಕ ಇರುತ್ತವೆ. ಇವುಗಳನ್ನು ಕ್ರೇನ್ ಮೂಲಕ ಪಿಲ್ಲರ್ ಮೇಲೇರಿಸಲಾಗುತ್ತಿದೆ.
ಕನಕಪುರದ ಜನರಿಗೆ ಸ್ವಾತಂತ್ರ್ಯ ಸಿಗಬೇಕಿದೆ: ಸಚಿವ ಅಶ್ವತ್ಥ ನಾರಾಯಣ
ಯು ಗರ್ಡರ್: ದೊಡ್ಡಜಾಲದ ಮೆಟ್ರೋ ಶೆಡ್‌ನಲ್ಲಿ ‘ಯು ಗರ್ಡರ್ ರೂಪಿಸಲಾಗಿದೆ. ಸಾಮಾನ್ಯವಾಗಿ 2.2 ಮೀಟರ್‌ನಿಂದ 2.5 ಮೀಟರ್ ಉದ್ದದ ‘ಬಾಕ್ಸ್ ಗರ್ಡರ್’ಗಳನ್ನು ನಮ್ಮ ಮೆಟ್ರೊ ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಬಳಸಲಾಗುತ್ತಿದೆ, ಆದರೆ, ಯು ಗರ್ಡರ್ ಇವುಗಳಿಗಿಂತ ಸಾಕಷ್ಟುಉದ್ದವಾಗಿವೆ. ಎರಡು ಪಿಲ್ಲರ್‌ಗಳ ನಡುವೆ ಯು-ಗರ್ಡರ್ ಅಳವಡಿಸಬಹುದು. ಪದೇಪದೇ ಬಾಕ್ಸ್ ಗರ್ಡರ್‌ಗಳನ್ನು ಅಳವಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಇದರ ಬದಲು ಯು-ಗರ್ಡರನ್ನು ಬಳಸಿದರೆ ಕಾಮಗಾರಿ ವೆಚ್ಚವೂ ಕಡಿಮೆಯಾಗುತ್ತದೆ. ರಾತ್ರಿ ವೇಳೆ ಈ ಕಾಮಗಾರಿ ಸುಲಲಿತವಾಗಿ ಮುಗಿಸಬಹುದು. ಈ ಮಾರ್ಗದಲ್ಲಿ ಒಟ್ಟಾರೆ 2172 ಪಿಲ್ಲರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಈವರೆಗೆ 1619 ಪಿಲ್ಲರನ್ನು ಪೂರ್ಣವಾಗಿ ನಿರ್ಮಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸುತ್ತಾರೆ.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ: ನಳಿನ್ ಕುಮಾರ್ ಕಟೀಲ್
38.44 ಕಿ.ಮೀ. ಮಾರ್ಗ: ಕೆ.ಆರ್.ಪುರ-ಹೆಬ್ಬಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ 38.44 ಕಿಮೀ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಒಟ್ಟು . 2,200 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ಮೂರು ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ. ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ. 30 ನಿಲ್ದಾಣಗಳು ಇಲ್ಲಿ ನಿರ್ಮಾಣ ಆಗುತ್ತಿವೆ.