ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಎಂ ಚಂದ್ರಪ್ಪ

By Kannadaprabha News  |  First Published Oct 22, 2022, 10:58 AM IST

ಕ್ಷೇತ್ರದ ಮತದಾರರಿಗೆ ತೊಂದರೆತಾಗಬಾರದೆಂಬ ಅರಿವಿಟ್ಟುಕೊಂಡು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.


ಹೊಳಲ್ಕೆರೆ (ಅ.22) : ಕ್ಷೇತ್ರದ ಮತದಾರರಿಗೆ ತೊಂದರೆತಾಗಬಾರದೆಂಬ ಅರಿವಿಟ್ಟುಕೊಂಡು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಇಲ್ಲಿ ಸಣ್ಣ ಆಸ್ಪತ್ರೆಯಿತ್ತು. ಯಾರು ನನಗೆ ಅರ್ಜಿ ಕೊಟ್ಟು ಆಸ್ಪತ್ರೆ ಕಟ್ಟಿಸಿಕೊಡಿ ಎಂದು ಕೇಳಲಿಲ್ಲ. ಆದರೆ ಕ್ಷೇತ್ರದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಜನ ನನ್ನ ಮೇಲೆ ಪ್ರೀತಿ ವಿಶ್ವಾಸ ಅಭಿಮಾನವಿಟ್ಟಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ. ತಾಳ್ಯದಿಂದ ಮತಿಗಟ್ಟದವರೆಗೆ ಟಾರ್‌ರೋಡ್‌ ಮಾಡಿಸಿದ್ದೇನೆ. ಹಿಂದೆ ಈ ರಸ್ತೆಗೆ 5 ಕೋಟಿ ರು. ಹಾಕಿದ್ದೆ ಗುತ್ತಿಗೆದಾರ ಅರ್ಧಂಬರ್ಧ ಕೆಲಸ ಮಾಡಿ ಪರಾರಿಯಾದ. ಮತ್ತೆ ಡಬ್ಬಲ್‌ ರಸ್ತೆಗೆ ಎರಡು ಕೋಟಿ ರು.ನೀಡಿದ್ದೇನೆ. 10 ಕೋಟಿ 80 ಲಕ್ಷ ರು.ರಸ್ತೆಗೆ ಮಂಜೂರು ಮಾಡಿಸಿದ್ದೇನೆ. ಪಂಡರಹಳ್ಳಿ, ಬೆಂಕಿಕೆರೆಯಿಂದ ದೊಡ್ಡಲೈನ್‌ ಬರುತ್ತಿದೆ. 30 ಮೆಗಾವ್ಯಾಟ್‌ ಇದ್ದದ್ದನ್ನು ಈಗ ಎಪ್ಪತ್ತು ಮೆಗಾವ್ಯಾಟ್‌ಗೆ ಜೋಡಿಸಿದ್ದೇನೆ. ಇನ್ನೂ 25 ವರ್ಷಗಳ ಕಾಲ ಪ್ರತಿದಿನ ಏಳು ಗಂಟೆ ವಿದ್ಯುತ್‌ ನೀಡುವುದಾಗಿ ಭರವಸೆ ನೀಡಿದರು.\

ಜನೋಪಯೋಗಿ ಕೆಲಸ ಮಾಡೋದು ರಾಜಕಾರಣದ ಮೂಲ ಗುರಿ; ಶಾಸಕ ಎಂ.ಚಂದ್ರಪ್ಪ

Latest Videos

undefined

250 ಕೋಟಿ ರೂ.ವೆಚ್ಚದಲ್ಲಿ ನೇರವಾಗಿ ಜೋಗಾಫಾಲ್ಸ್‌ ವಿದ್ಯುತ್‌ ತರುವ ಯೋಜನೆ ಆರಂಭಗೊಂಡಿದೆ. ಇದರಿಂದ 220 ಮೆಗಾವ್ಯಾಟ್‌ ಕರೆಂಟ್‌ ಸಿಗುತ್ತದೆ. ತಾಳ್ಯ ಹೋಬಳಿಗೆ ತೊಂದರೆಯಾಗಬಾರದೆಂದು ಹೊಳಲ್ಕೆರೆ ಚಿಕ್ಕಕೆರೆಯಲ್ಲಿ ಮೂರು ಪಂಪ್‌ ಅಳವಡಿಸಿದ್ದು, 106 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಮಲಸಿಂಗನಹಳ್ಳಿಯಿಂದ ನೇರವಾಗಿ ನಂದನಹೊಸೂರು, ತಾಳ್ಯ, ಎಚ್‌ಡಿಪುರಕ್ಕೆ ನೀರು ಒದಗಿಸುವ ಯೋಜನೆ ಶುರುವಾಗಿದೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಎಲ್ಲಾ ಊರುಗಳಿಗೂ ದಿನದ 24 ಗಂಟೆ ನೀರು ಪೂರೈಸುವುದಕ್ಕಾಗಿ 36 ಕೋಟಿ ರು.ಗಳನ್ನು ಮಂಜೂರು ಮಾಡಿಸಿದ್ದೇನೆ. ಗಟ್ಟಿಹೊಸಹಳ್ಳಿ ಗುಡ್ಡದ ಮೇಲೆ ಎಪ್ಪತ್ತು ಲಕ್ಷ ರು.ಗಳ ಫಿಲ್ಟರ್‌ ಅಳವಡಿಸಲಾಗಿದೆ. ಇದರಿಂದ ಎಲ್ಲರೂ ಶುದ್ದ ನೀರು ಕುಡಿಯುವಂತಾಗುತ್ತದೆ. ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 102 ಕೋಟಿ ರು.ಗಳನ್ನು ಹೆಚ್ಚಿಗೆ ನೀಡಿದ್ದೇನೆಂದರು.

Chitradurga: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬೆಂಬಲಿಗನಿಂದ ದರ್ಪ: ಮಾರಣಾಂತಿಕ ಹಲ್ಲೆ ಆರೋಪ

ಮಾಜಿ ಶಾಸಕ ಮಂಜುನಾಥ್‌, ತಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ್‌, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಗೌರಮ್ಮ, ಬಸಣ್ಣ, ಪ್ರಕಾಶ್‌, ಶಿಕ್ಷಕರುಗಳಾದ ಹನುಮಂತಪ್ಪ, ಮಾರುತೇಶ್‌, ನಿತಿನ್‌, ಗುತ್ತಿಗೆದಾರ ರಾಜಶೇಖರ್‌ ಹಾಗೂ ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

click me!