ವಿವಿಧ ನ್ಯಾಯಬೆಲೆ ಅಂಗಡಿ ಅಮಾನತು| ಪಡಿತರ ವಿತರಣೆಗೆ ಆಹಾರ ಇಲಾಖೆ ಪರ್ಯಾಯ ವ್ಯವಸ್ಥೆ| ನಗರದ 45, 47, 48, 52, 54 ಸಂಖ್ಯೆಯ ನ್ಯಾಯಬೆಲೆ ಅಂಗಡಿಗಳನ್ನು ದಾಸ್ತಾನು ಹಾಗೂ ಇತರೆ ಕಾರಣಗಳಿಂದ ಅಮಾನತು|ಈ ವ್ಯಾಪ್ತಿಯಲ್ಲಿ ಬರುವ ಪಡಿತರ ಚೀಟಿದಾರರಿಗೆ ಬದಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಒದಗಿಸಲು ಆಹಾರ ಇಲಾಖೆ ಸೂಚನೆ|
ಹೊಸಪೇಟೆ(ಮೇ.10): ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಪಡಿತರ ವಿತರಣೆಗೆ ಆಹಾರ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ನಗರದ 45, 47, 48, 52, 54 ಸಂಖ್ಯೆಯ ನ್ಯಾಯಬೆಲೆ ಅಂಗಡಿಗಳನ್ನು ದಾಸ್ತಾನು ಹಾಗೂ ಇತರೆ ಕಾರಣಗಳಿಂದ ಅಮಾನತುಗೊಳಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಬರುವ ಪಡಿತರ ಚೀಟಿದಾರರಿಗೆ ಬದಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಒದಗಿಸಲು ಆಹಾರ ಇಲಾಖೆ ಸೂಚಿಸಿದೆ.
ಪಟೇಲ್ ನಗರ ಶ್ರೀರಾಮುಲು ಹಿರಿಯ ಪ್ರಾಥಮಿಕ ಶಾಲೆ, 5ನೇ ವಾರ್ಡ್ ರಾಣಿಪೇಟೆ ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ ಡಿಪೋ ಪಕ್ಕದ ಅಜಾದ್ ನಗರದ ಉಜ್ಜನಿ ಜಗದ್ಗುರು ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾರಿ ರಸ್ತೆಯ ಜಗದಂಬಾ ದೇವಸ್ಥಾನ, 11ನೇ ವಾರ್ಡ್, ವರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೈತ ಭವನ ಪಕ್ಕದಲ್ಲಿರುವ ಎ.ವಿ. ತಾಂಡಾ ಮೊದಲಿಯಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 8ರಿಂದ ಪಡಿತರದಾರರು, ಪಡಿತರ ಪಡೆಯಬಹುದಾಗಿದೆ ಎಂದು ತಹಸೀಲ್ದಾರ್ ಎಚ್. ವಿಶ್ವನಾಥ ತಿಳಿಸಿದ್ದಾರೆ.
ಕೊರೋನಾ ಮಧ್ಯೆಯೇ ಮದುವೆ: ನನ್ನ ವಿವಾಹಕ್ಕೆ ಯಾರೂ ಬರಬೇಡಿ ಎಂದ ಮದುಮಗ..!
ಅಮಾನತ್ತುಗೊಂಡ ಅಂಗಡಿ:
ಸ್ಥಳೀಯ ಪಟೇಲ್ ನಗರದ 6ನೇ ಕ್ರಾಸ್‌ನಲ್ಲಿರುವ ಶಂಕರ್ ಸಿಸಿಎಸ್ ನ್ಯಾಯಬೆಲೆ ಅಂಗಡಿ-48, ನಗರದ ಎಸ್‌ವಿಕೆ ಬಸ್ ನಿಲ್ದಾಣದಲ್ಲಿರುವ ನೇತಾಜಿ ಸಿಸಿಎಸ್ ನ್ಯಾಯಬೆಲೆ ಅಂಗಡಿ-54, ಅಜಾದ್ ನಗರದ ನೀಲಕಂಠೇಶ್ವರ ಸಿಸಿಎಸ್ ನ್ಯಾಯಬೆಲೆ ಅಂಗಡಿ-52, ಸಿರಸನಕಲ್ಲು ಉಪ ಹಂಚಿಕೆ ಕೇಂದ್ರ, ಚಿತ್ತವಾಡ್ಗಿ ವರಕೇರಿ ಅಂಗಡಿ-45, ಮೆಡಿನೋವಾ ಆಸ್ಪತ್ರೆ ಹತ್ತಿರದ ನ್ಯಾಯಬೆಲೆ ಅಂಗಡಿ-47 ಇವು ಅಮಾನತುಗೊಂಡ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.