ಗ್ರೀನ್‌ ಝೋನ್‌ನಲ್ಲಿದ್ದ ಸಿಎಂ ತವರು ಜಿಲ್ಲೆಗೆ ವಕ್ಕರಿಸಿದ ಕೊರೋನಾ...!

Published : May 10, 2020, 02:47 PM ISTUpdated : May 10, 2020, 03:00 PM IST
ಗ್ರೀನ್‌ ಝೋನ್‌ನಲ್ಲಿದ್ದ ಸಿಎಂ ತವರು ಜಿಲ್ಲೆಗೆ ವಕ್ಕರಿಸಿದ ಕೊರೋನಾ...!

ಸಾರಾಂಶ

ವೈರಸ್​ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್​ ಝೋನ್​) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಇದೀಗ ಕೊರೋನಾ ವಕ್ಕರಿಸಿದೆ.

ಶಿವಮೊಗ್ಗ, (ಮೇ.10): ಕರ್ನಾಟಕಕ್ಕೆ ಕೊರೋನಾ ಮಹಾಮಾರಿ ದಾಂಗುಂಡಿ ಇಟ್ಟಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗದ ಶಿವಮೊಗ್ಗದಲ್ಲಿ ಇಂದು (ಭಾನುವಾರ) 8 ಪ್ರಕರಣಗಳು ಪತ್ತೆಯಾಗಿವೆ. 

ವೈರಸ್​ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್​ ಝೋನ್​) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಶಿಕಾರಿಪುರದಲ್ಲಿ 7 ಹಾಗೂ ತೀರ್ಥಹಳ್ಳಿಯಲ್ಲಿ ಒಂದು ಪ್ರಕರಣಗಳು ಬೆಳಕಿವೆ ಬಂದಿವೆ. 

21 ತಬ್ಲಿಘಿಗಳು ಸೇರಿ 136 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗ ಜಿಲ್ಲೆಯ ಹೊಳಲ್ಕೆರೆ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 

ಈ ಪೈಕಿ 8 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಇವರೆಲ್ಲಾ ಸಿಎಂ ಬಿಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದವರೇ ಆಗಿದ್ದಾರೆ. 

ಸದ್ಯ 8 ಮಂದಿ ಕೊರೋನಾ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

PREV
click me!

Recommended Stories

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು