ಈ ಹಂಗಾಮಿನಲ್ಲಿ ಇದೇ ಮೊದಲ ಬಾರಿ ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಿದಂತಾಗಿದೆ. ಮುಂಗಾರು ಬೆಳೆಗಾಗಿ ಈಗಾಗಲೇ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಿಕೆ ಜುಲೈ27 ರಿಂದ ಆರಂಭಗೊಂಡಿದೆ. ನ.23 ರವರೆಗೆ ನೀರು ಹರಿಯಲಿದೆ.
ಆಲಮಟ್ಟಿ(ಆ.17): ಆಲಮಟ್ಟಿ ಜಲಾಶಯ ಬುಧವಾರ ಸಂಪೂರ್ಣ ಭರ್ತಿಯಾಗಿದ್ದು, ತನ್ನ ಗರಿಷ್ಠ ಮಟ್ಟ 519.60 ಮೀ. ತಲುಪಿದೆ. ಇದರಿಂದಾಗಿ ಈ ಹಂಗಾಮಿನಲ್ಲಿ ಇದೇ ಮೊದಲ ಬಾರಿ ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಿದಂತಾಗಿದೆ. ಮುಂಗಾರು ಬೆಳೆಗಾಗಿ ಈಗಾಗಲೇ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಿಕೆ ಜುಲೈ27 ರಿಂದ ಆರಂಭಗೊಂಡಿದೆ. ನ.23 ರವರೆಗೆ ನೀರು ಹರಿಯಲಿದೆ. ಅಲ್ಲಿಯವರೆಗೆ ನೀರಿನ ಕೊರತೆಯಿಲ್ಲ. ಸದ್ಯ ಜಲಾಶಯಕ್ಕೆ 5011 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೆರೆ ಭರ್ತಿ, ಹಿನ್ನೀರಿನ ಬಳಕೆಗಾಗಿ ಜಲಾಶಯದಿಂದ 2153 ಕ್ಯುಸೆಕ್ ನೀರು ಬಳಕೆಯಾಗುತ್ತಿದೆ.
ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!
ನೀರಾವರಿ ಸಲಹಾ ಸಮಿತಿ ಪುನರ್ ರಚನೆ:
ಹೊಸ ಸರ್ಕಾರ ರಚನೆಗೊಂಡ ಮೇಲೆ, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಪುನರ್ ರಚಿಸಲಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರ, ಯಾದಗಿರಿ, ಕಲಬುರಗಿ ಜಿಲ್ಲೆಯ ಸಚಿವರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಕೃಷಿ ಅಧಿಕಾರಿಗಳು ಸೇರಿ 53 ಜನ ವಿಶೇಷ ಆಹ್ವಾನಿತ ಸದಸ್ಯರಾಗಿ, ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರು, ವಿವಿಧ ವಲಯದ ಮುಖ್ಯ ಎಂಜಿನಿಯರ್‌ಗಳು, ಕಾಡಾ ಆಡಳಿತಾಧಿಕಾರಿಗಳು ಸೇರಿ 7 ಜನ ಅಧಿಕಾರಿ ಸದಸ್ಯರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
21 ರಂದು ಸಭೆ:
ನೂತನವಾಗಿ ರಚನೆಗೊಂಡಿರುವ ಯುಕೆಪಿಯ ಐಸಿಸಿ ಸಭೆ ಇದೇ 21 ರಂದು ಬೆಳಿಗ್ಗೆ 11.30 ಕ್ಕೆ ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಚಿವರಾದ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಲಿದೆ.