Weekend Curfew : ವೀಕೆಂಡ್ ಕರ್ಫ್ಯೂ ಯಾಕೆ? ಸುಸೈಡ್ ಮಾಡಿಕೊಳ್ಳಬೇಕಾಗುತ್ತದೆ! ಮದ್ಯ ಮಾರಾಟಗಾರರ ಅಳಲು

Published : Jan 17, 2022, 04:05 PM IST
Weekend Curfew :  ವೀಕೆಂಡ್ ಕರ್ಫ್ಯೂ ಯಾಕೆ?  ಸುಸೈಡ್ ಮಾಡಿಕೊಳ್ಳಬೇಕಾಗುತ್ತದೆ! ಮದ್ಯ ಮಾರಾಟಗಾರರ ಅಳಲು

ಸಾರಾಂಶ

* ವೀಕೆಂಡ್ ಕರ್ಫ್ಯೂವಿನಿಂದ ಬಹಳ ನಷ್ಟವಾಗುತ್ತಿದೆ. * ಮದ್ಯ  ಮಾರಾಟಕ್ಕೆ ಅವಕಾಶ ಮಾಡಿಕೊಡಿ * ಸರ್ಕಾರಕ್ಕೆ ಮದ್ಯ ಮಾರಾಟಗಾರರ ಸಂಘದ ಮನವಿ * ಮಾರಾಟಗಾರರು ಆತ್ಮಹತ್ಯೆಯಂತಹ ದಾರಿ ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ

ಬೆಂಗಳೂರು(ಜ. 17)  ಕೊರೋನಾ ಕಾರಣಕ್ಕೆ ರಾಜ್ಯದೆಲ್ಲಿ ಎರಡು ವಾರದ ವೀಕೆಂಡ್ ಕರ್ಫ್ಯೂ ಮುಕ್ತಾಯವಾಗಿದೆ.  ಇನ್ನು ಮುಂದೆ ಮತ್ತೆ ವೀಕೆಂಡ್ ಕರ್ಫ್ಯೂ ಎಂದರೆ ಸರ್ಕಾರದ ಆದೇಶ ಧಿಕ್ಕರಿಸಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿತ್ತು.

ಇದೆಲ್ಲದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿಗೆ ಮದ್ಯ ಮಾರಾಟಗಾರರ ಸಂಘ ಪತ್ರ ಬರೆದಿದೆ ವೀಕೆಂಡ್ ಕರ್ಫ್ಯೂ ಸ್ಥಗಿತಕ್ಕೆ ಮನವಿ ಮಾಡಿಕೊಂಡಿದೆ. ನೈಟ್ ಕರ್ಫ್ಯೂ ಮುಂದುವರಿಸಿ ಆದರೆ ವೀಕೆಂಡ್ ಕರ್ಫ್ಯೂ ಬೇಡ ಎಂದು ಮನವಿ ಮಾಡಿಕೊಂಡಿದೆ. ಸೋಮವಾರ ಸಿಎಂ ಸಭೆ ಹಿನ್ನೆಲೆಯಲ್ಲಿ ಪತ್ರ ಬರೆದು ಮನವಿ ಮಾಡಿಕೊಂಡಿದೆ.

ಈ ಹಿಂದೆ ಲಾಕ್ ಡೌನ್ ಮಾಡಿದಾಗಲೂ ಮದ್ಯ ಮಾರಾಟಗಾರರುಸಾಕಷ್ಟು ನಷ್ಟ ಅನುಭವಿಸಿದ್ದರು. ಬಂಡವಾಳಕ್ಕಾಗಿ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈಗ ಮತ್ತೆ ಅಂಥದ್ದೇ ನಿಯಮ ತರಲಾಗಿದೆ. ಇದೇ ರೀತಿಯಾದರೆ ಸನ್ನದುದಾರರು ಆತ್ಮಹತ್ಯೆಯಂತಹ ದಾರಿ ಹಿಡಿಯುವಆತಂಕ ಇದೆ.  ಮಾನಸಿಕ ಖಿನ್ನತೆಗೆ ಒಳಗಾಗಬೇಕಾಗುತ್ತದೆ ಎಂದು ಆತಂಕ ತೋಡಿಕೊಂಡಿದೆ.

ಸರ್ಕಾರದ ಬಳಿ  ಇನ್ನೊಂದು ಮನವಿಯನ್ನು ಮಾಡಿದ್ದು ಒಂದು ವೇಳೆ  ವೀಕೆಂಡ್ ಕರ್ಫ್ಯೂ ಹಿಂದಕ್ಕೆ ತೆಗೆದುಕೊಳ್ಳಲುಸಾಧ್ಯವಾಗದಿದ್ದರೆ ಎರಡನೇ ಅಲೆ ಸಂದರ್ಭ ನೀಡಿದ್ದ ಅವಕಾಶದಂತೆ  ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ  2  ಗಂಟೆ ವರೆಗೆ ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗುವ ಅವಕಾಶವನ್ನಾದರೂ ನೀಡಬೇಕು ಎಂದು ಕೋರಿಕೊಂಡಿದೆ.

 ಸಾಲ ಇದೆ, ಬಾಡಿಗೆ ಕಟ್ಬೇಕು, ನಮ್ಮ ಜೀವ ಉಳಿಸಿ; ಸಿಡಿದೆದ್ದ ಮಾಲಿಕರು

ಮೊದಲ ಸಾರಿಯ ಲಾಕ್ ಡೌನ್ ನಲ್ಲಿ ಪರಿತಪಿಸಿದ್ದ ಮದ್ಯ ಪ್ರಯರು: ದೇಶದಲ್ಲಿ ಮೊದಲ ಸಾರಿ ಲಾಕ್ ಡೌನ್ ಘೋಷಣೆಯಾದಾಗ ಸುಮಾರು 45  ದಿನಗಳ ಕಾಲ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿತ್ತು. ಈ ವೇಳೆ ಮದ್ಯಪ್ರಿಯರು ಪರಿತಪಿಸಿದ್ದರು. ಕೆಲವರು ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊರೋನಾ ಒಂದು ಹಂತದ ನಿಯಂತ್ರಣಕ್ಕೆ ಬಂದ ಮೇಲೆ ಮೊದಲಿಗೆ ಎಂಬಂತೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 

ಹೊಸ ವರ್ಷ ಆರಂಭವಾಗಿದ್ದು ಈ ಕ್ಯಾಲೆಂಡರ್ ನಲ್ಲಿಯೂ ಹಲವು ದಿನ ಮದ್ಯ ಲಭ್ಯವಾಗುವುದಿಲ್ಲ. ಪಟ್ಟಿಯನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. 
2022 ರ ಮದ್ಯ ನಿಷೇಧ ದಿನಗಳು

ಜನವರಿ 26 , ಬುಧವಾರ,ಗಣರಾಜ್ಯೋತ್ಸವ
ಜನವರಿ 30 , ಭಾನುವಾರ: ಮಹಾತ್ಮ ಗಾಂಧಿಯವರ ಪುಣ್ಯತಿಥಿ (ಶಹೀದ್ ದಿವಸ್)
ಫೆಬ್ರವರಿ 19 , ಶನಿವಾರ: ಛತ್ರಪತಿ ಶಿವಾಜಿ, ಮಹಾವೀರ ಜಯಂತಿ
ಫೆಬ್ರವರಿ 26 , ಶನಿವಾರ: ಸ್ವಾಮಿ ದಯಾನಂದ ಸರಸ್ವತಿ ಜಯಂತಿ
ಮಾರ್ಚ್ 01 , ಮಂಗಳವಾರ: ಮಹಾ ಶಿವರಾತ್ರಿ
ಮಾರ್ಚ್ 18 , ಶುಕ್ರವಾರ: ಹೋಳಿ
ಏಪ್ರಿಲ್ 10, ಭಾನುವಾರ: ರಾಮ ನವಮಿ
ಏಪ್ರಿಲ್ 14, ಗುರುವಾರ: ಮಹಾವೀರ ಜಯಂತಿ ಮತ್ತು ಅಂಬೇಡ್ಕರ್ ಜಯಂತಿ
ಏಪ್ರಿಲ್ 15 , ಶುಕ್ರವಾರ: ಶುಭ ಶುಕ್ರವಾರ
ಮೇ 01 , ಶನಿವಾರ: ಮಹಾರಾಷ್ಟ್ರ ದಿನ (ಮಹಾರಾಷ್ಟ್ರ)
ಮೇ 03 , ಮಂಗಳವಾರ: ಈದ್ ಉಲ್-ಫಿತರ್
ಜುಲೈ 10, ಭಾನುವಾರ: ಆಷಾಢ ಏಕಾದಶಿ
ಜುಲೈ 13 , ಬುಧವಾರ: ಗುರು ಪೂರ್ಣಿಮೆ
ಆಗಸ್ಟ್ 08, ಸೋಮವಾರ: ಮೊಹರಂ
ಆಗಸ್ಟ್ 15 , ಸೋಮವಾರ: ಸ್ವಾತಂತ್ರ್ಯ ದಿನ
ಆಗಸ್ಟ್ 19, ಶುಕ್ರವಾರ: ಜನ್ಮಾಷ್ಠಮಿ
ಆಗಸ್ಟ್ 31, ಬುಧವಾರ: ಗಣೇಶ ಚತುರ್ಥಿ
ಸೆಪ್ಟೆಂಬರ್ 09,  ಶುಕ್ರವಾರ: ಅನಂತ ಚತುರ್ದಶಿ
ಅಕ್ಟೋಬರ್ 02 , ಭಾನುವಾರ: ಗಾಂಧಿ ಜಯಂತಿ
ಅಕ್ಟೋಬರ್ 05 , ಬುಧವಾರ: ದಸರಾ
ಅಕ್ಟೋಬರ್ 09 , ಭಾನುವಾರ: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 24 , ಸೋಮವಾರ: ದೀಪಾವಳಿ ಸೋಮವಾರ
ನವೆಂಬರ್ 04 , ಶುಕ್ರವಾರ: ಕಾರ್ತಿಕಿ ಏಕಾದಶಿ
ನವೆಂಬರ್ 08 , ಮಂಗಳವಾರ: ಗುರುನಾನಕ್ ಜಯಂತಿ
ಡಿಸೆಂಬರ್ 25 , ಭಾನುವಾರ: ಕ್ರಿಸ್ಮಸ್

 

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!