ರಾಜ್ಯ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ 2011 ರ ಜನಗಣತಿ ಆಧಾರದಲ್ಲಿ ಶೇ.17 ರಷ್ಟುಮೀಸಲಾತಿಯನ್ನು ಪರಿಶಿಷ್ಟಜಾತಿಯಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿಗೆ ಹಂಚಿಕೆ ಮಾಡಿರುವುದು ಸಮಂಜಸವಾಗಿದೆ. ವಿನಾಕಾರಣ ಇದರಲ್ಲಿ ಕೆಲವರು ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ವೈದ್ಯ ಡಾ.ಲಕ್ಷ್ಮೇಕಾಂತ್ ತಿಳಿಸಿದ್ದಾರೆ.
ತುಮಕೂರು : ರಾಜ್ಯ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ 2011 ರ ಜನಗಣತಿ ಆಧಾರದಲ್ಲಿ ಶೇ.17 ರಷ್ಟುಮೀಸಲಾತಿಯನ್ನು ಪರಿಶಿಷ್ಟಜಾತಿಯಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿಗೆ ಹಂಚಿಕೆ ಮಾಡಿರುವುದು ಸಮಂಜಸವಾಗಿದೆ. ವಿನಾಕಾರಣ ಇದರಲ್ಲಿ ಕೆಲವರು ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ವೈದ್ಯ ಡಾ.ಲಕ್ಷ್ಮೇಕಾಂತ್ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎನ್ನುವುದು ಸಾಮಾಜಿಕ ನ್ಯಾಯದ ಭಾಗವಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಇತರೆ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲು ಅನುಕೂಲವಾಗುವಂತೆ ಮೀಸಲಾತಿಯನ್ನು ಕಲ್ಪಿಸಿದೆ. ಆದರೆ ಇದನ್ನು ಸರಿಯಾಗಿ ಅರ್ಥೈಸದ ಕೆಲ ಸ್ಪೃಶ್ಯ ಜಾತಿಗಳ ಜನರು ಇದರ ವಿರುದ್ದ ಪ್ರತಿಭಟನೆ ನಡೆಸುತ್ತಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
undefined
ಪ್ರಸ್ತುತ ರಾಜ್ಯ ಸರಕಾರ ಮಾಡಿರುವ ಮೀಸಲಾತಿ ಹಂಚಿಕೆ ಮಾಡಿರುವುದು ಅತ್ಯಂತ ವೈಜ್ಞಾನಿಕವಾಗಿದೆ. ಇದರಿಂದ ಮೇಲ್ಜಾತಿಯ ಜನರು ಬೇಡ ಜಂಗಮ ಹೆಸರಿನಲ್ಲಿ ಪಡೆಯುತ್ತಿದ್ದ ಎಸ್ಸಿ ಮೀಸಲಾತಿ ಸೌಲಭ್ಯಕ್ಕೆ ಕಡಿವಾಣ ಬೀಳಲಿದೆ. ಇದುವರೆಗೂ ಪರಿಶಿಷ್ಟರಿಗೆ ಶೇ. 17 ರಷ್ಟುಮೀಸಲಾತಿ ಇದೆ ಎಂದು ಸಾವಿರಾರು ಜನರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದರು. ಆದರೆ ಈಗ ಶೇ 1 ರಷ್ಟುಮೀಸಲಾತಿಯನ್ನು ಅಲೆಮಾರಿ ಸಮುದಾಯಕ್ಕೆ ಸೇರಿದ ಜಾತಿಗಳಿಗೆ ಮೀಸಲಿಟ್ಟಿರುವುದರಿಂದ ವಾಮಮಾರ್ಗದಿಂದ ಜಾತಿ ಪ್ರಮಾಣ ಪತ್ರ ಪಡೆದರೂ ಯಾವುದೇ ಪ್ರಯೋಜನವಾಗದು. ಸರಕಾರದ ಈ ಕ್ರಮದಿಂದ ಪರಿಶಿಷ್ಟರ ಮೀಸಲಾತಿ ಇನ್ನೊಬ್ಬರ ಪಾಲಾಗಲಿದೆ ಎಂಬ ಆತಂಕವೂ ದೂರವಾಗಲಿದೆ ಎಂದು ಡಾ.ಲಕ್ಷ್ಮಿಕಾಂತ್ ನುಡಿದರು.
ರಾಜ್ಯದಲ್ಲಿ ಮೀಸಲಾತಿ ವರ್ಗೀಕರಣಕ್ಕೆ ಕಾಂಗ್ರೆಸ್ ಮೊದಲು ಹಿಂದೇಟು ಹಾಕಿದರೂ, ಬಿಜೆಪಿ ಪಕ್ಷ ಪರಿಶಿಷ್ಟರಿಗೆ ಮೀಸಲಾತಿ ಹಂಚಿಕೆ ಮಾಡಲು ಮುಂದಾದಾಗ ಸಹಮತ ವ್ಯಕ್ತಪಡಿಸಿದೆ. ಹಾಗಾಗಿ ಸಾಮಾಜಿಕ ನ್ಯಾಯದ ಅನ್ವಯ, ಸಂವಿಧಾನದ 9ನೇ ಅನುಚ್ಛೇದಕ್ಕೆ ಸೇರಿಸಲು ಇದ್ದ ಎಲ್ಲಾ ಅಡ್ಡಿಗಳನ್ನು ನಿವಾರಿಸಿ,ಅಸ್ಪೃಶ್ಯ ಜಾತಿಯ ಎಡಗೈ, ಬಲಗೈ, ಸ್ಪೃಶ್ಯ ಹಾಗೂ ಅಲೆಮಾರಿ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಿದೆ. ಇದರಲ್ಲಿ ಯಾರಿಗೂ ಮೋಸವಾಗಿಲ್ಲ ಎಂದು ಡಾ.ಲಕ್ಷ್ಮಿಕಾಂತ್ ಸ್ಪಷ್ಟಪಡಿಸಿದರು.
ಪರಿಶಿಷ್ಟಜಾತಿಯ 101 ಜಾತಿಗಳು ಸೇರಿ 2011ರ ಜನಗಣತಿ ಅನ್ವಯ ಸುಮಾರು 1.04 ಕೋಟಿ ಜನಸಂಖ್ಯೆಯಿದೆ. ಇಷ್ಟುಜನಸಂಖ್ಯೆಗೆ ಶೇ 17 ರ ಮೀಸಲಾತಿ ಹಂಚಿಕೆ ಮಾಡಿದರೆ 6.10 ಲಕ್ಷ ಜನರಿಗೆ ಶೇ1 ಮೀಸಲಾತಿ ಹಂಚಿಕೆಯಾಗಲಿದೆ. ಇದರ ಪ್ರಕಾರ ರಾಜ್ಯದಲ್ಲಿ 32.60 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮಾದಿಗರಿಗೆ ಶೇ 6, ಪರಿಶಿಷ್ಟರಲ್ಲಿ 32.57 ಲಕ್ಷ ಜನಸಂಖ್ಯೆ ಇರುವ ಹೊಲೆಯರಿಗೆ ಶೇ 5.5, 11 ಲಕ್ಷ ಬೋವಿ, 12 ಲಕ್ಷ ಲಂಬಾಣಿ, 2.50 ಕೊರಚ, 60 ಸಾವಿರ ಕೊರಮ ಸೇರಿ ಒಟ್ಟು 26.51ಜನಸಂಖ್ಯೆಹೊಂದಿರುವ ಸ್ಪೃಶ್ಯ ಜಾತಿಗಳಿಗೆ ಶೇ 4.5 ನೀಡಿದರೆ, ಉಳಿದಂತೆ 10 ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ 89 ಸಣ್ಣ ಜಾತಿಗಳಿಗೆ ಶೇ 1 ರ ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಮಾಧುಸ್ವಾಮಿ ನೇತೃತ್ವದ ಸಮಿತಿ ಹಂಚಿಕೆ ಮಾಡಿರುವ ಮೀಸಲಾತಿ ಹಂಚಿಕೆಯಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಆದರೆ ನ್ಯಾ.ಸದಾಶಿವ ವರದಿಯಲ್ಲಿ ಜಾತಿ ಪ್ರಮಾಣ ಪತ್ರದ ಗೊಂದಲದಿಂದಾಗಿ 10.20ಲಕ್ಷ ಮಾದಿಗರನ್ನು ಬಲಗೈಗೂ, 5.70 ಲಕ್ಷ ಹೊಲೆಯರನ್ನು ಎಡಗೈಗೂ ಸೇರಿಸಲಾಗಿದೆ. ಇದನ್ನು ಸರಿಪಡಿಸಿದರೆ ಮೈಸೂರು ಕರ್ನಾಟಕ ಮತ್ತು ಮಧ್ಯಕರ್ನಾಟಕ ಜಿಲ್ಲೆಗಳಲ್ಲಿನ ಜಾತಿ ಪ್ರಮಾಣದ ಗೊಂದಲ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಮುಂದಿನ ಸರಕಾರ ಕ್ರಮ ಕೈಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರದ ಆಟೋ ಶಿವಕುಮಾರ್, ಮಾಜಿ ಶಾಸಕ ಗಂಗಹನುಮಯ್ಯ, ಜಗದೀಶ್, ರಂಗಧಾಮಯ್ಯ, ನಿವೃತ್ತ ತಹಶೀಲ್ದಾರ್ ದಾಸಪ್ಪ, ಹನುಮಂತಪ್ಪ ಇತರರಿದ್ದರು.