ಸಮುದಾಯದ ಧ್ವನಿಯಾಗಿ ನಾನು ನಿಲ್ಲುತ್ತೇನೆ : ಪರಂ

By Kannadaprabha News  |  First Published Apr 9, 2023, 6:15 AM IST

ಸಾದರು ಎಂದರೆ ಸಜ್ಜನರು, ಒಳ್ಳೆಯ ಜನ ಎಂಬ ಉಲ್ಲೇಖಗಳಿವೆ ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಮಾಜಿ ಡಿಸಿಎಂ ಹಾಗು ಶಾಸಕ ಡಾ. ಜಿ ಪರಮೇಶ್ವರ ತಿಳಿಸಿದರು.


  ಕೊರಟಗೆರೆ: ಸಾದರು ಎಂದರೆ ಸಜ್ಜನರು, ಒಳ್ಳೆಯ ಜನ ಎಂಬ ಉಲ್ಲೇಖಗಳಿವೆ ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಮಾಜಿ ಡಿಸಿಎಂ ಹಾಗು ಶಾಸಕ ಡಾ. ಜಿ ಪರಮೇಶ್ವರ ತಿಳಿಸಿದರು.

ಪಟ್ಟಣದ ಹಿಂದೂ ಸಾದರ ಸಮುದಾಯ ಭವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಾದರ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮೂಲತಃ ಜೈನಾ ಸಮುದಾಯಕ್ಕೆ ಸೇರಿದವರು ನೀವು ಜೈನರು ಹಿಂಸೆಯನ್ನು ಮಾಡಿದವರಲ್ಲ. ನೀವು ಆ ಸಮುದಾಯದಿಂದ ಬಂದವರು. ಪರಿವರ್ತನೆಯಲ್ಲಿ ನೀವು ಹಿಂದೂ ಧರ್ಮಕ್ಕೆ ಬಂದದಂತಹ ಸಮುದಾಯ ನಿಮ್ಮದು ಎಂದು ಹೇಳಿದರು.

Latest Videos

undefined

ಜೈನರು, ಹಿಂದೂ,ಮೂರು ಕಡೆ ನಿಮ್ಮ ಗುರುತುಗಳಿಗೆ ಶಾಂತಿಯುತ ಜೀವನ ನಡೆಸುವ ಸಮುದಾಯ ನಿಮ್ಮದಾಗಿದೆ. 1916ರಲ್ಲಿ ಮಂಡಿ ಹರಿಯಣ್ಣಯ್ಯ ಅಸೆಂಬ್ಲಿ ಮೈಸೂರಿನ ರಾಜ್ಯದಲ್ಲಿರಾಗುತ್ತಾರೆ. ಪ್ರತಿನಿಧಿ ಸಭೆಗೆ ಸದಸ್ಯರನ್ನು ಮಾಡುತ್ತಾರೆ. ರಾಜಕೀಯದಲ್ಲಿ ಅಷ್ಟೊಂದು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂದರು.

ರಾಜ್ಯ ಹಿಂದೂ ಸಾದರ ಸಮುದಾಯದ ರಾಜ್ಯಾಧ್ಯಕ್ಷ ರವಿಕುಮಾರ್‌ ಮಾತನಾಡಿ ನಮ್ಮ ಸಮುದಾಯ ಡಾ. ಜಿ ಪರಮೇಶ್ವರ ರವರ ರೀತಿಯಲ್ಲಿ ಸೌಮ್ಯ ಸ್ವಭಾವದವರು. ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಒಂದು ಕೋಟಿ ಅನುದಾನ ನೀಡಿದ್ದರು. ಬೇರೆ ಶಾಸಕರು ವರ್ಗಾವಣೆ ವಿಚಾರದಲ್ಲಿ ಲಕ್ಷಾಂತರ ರು. ನೀಡಬೇಕು. ಆದರೆ ಒಂದೇ ಒಂದು ಮಾತು ಹಾಡದೇ ಬೇರೆಡೆ ವರ್ಗಾವಣೆ ಮಾಡುವ ಸೃಜನಶೀಲ ವ್ಯಕ್ತಿ ಡಾ.ಜಿ ಪರಮೇಶ್ವರ್‌. ನಮ್ಮ ಸಮುದಾಯದ ಅಧಿಕಾರಿಗಳು ಉತ್ತಮ ಕೆಲಸ ಮಾಡಬೇಕಾದರೆ ಡಾ ಜಿ ಪರಮೇಶ್ವರ ಅವರÜಂತಹ ಸಜ್ಜನ ರಾಜಕಾರಣಿ ಬೇಕು. ದಯವಿಟ್ಟು ಈ ಬಾರಿ ಹೆಚ್ಚಿನ ಮತಗಳಿಂದ ಅವರನ್ನು ಆಯ್ಕೆ ಮಾಡಲು ನಮ್ಮ ಸಮಾಜದವರು ಹೆಚ್ಚಿನ ಬೆಂಬಲ ನೀಡೋಣ ಎಂದರು.

ಜಾಗೃತಿ ಸಮಾವೇಶದಲ್ಲಿ ವಿಧಾನ ಪರಿಷÜತ್‌ ಮಾಜಿ ಶಾಸಕ ವೇಣುಗೋಪಾಲ್‌, ತಾ.ಅಧ್ಯಕ್ಷ ಮಲ್ಲಪ್ಪ, ಪಪಂ ಸದಸ್ಯ ಎಡಿ ಬಲರಾಮಯ್ಯ, ಜಿಲ್ಲಾ ನಿರ್ದೇಶಕ ಹನುಮಾನ್‌, ಶ್ರೀನಿವಾಸ್‌ಮೂರ್ತಿ, ಶ್ರೀಧರ್‌ ಜೂಜುವಾಡಿ, ಶಶಿಧರ್‌ ಗಂಕರನಹಳ್ಳಿ, ಹತ್ತಿಬೆಲೆ ಮಂಜುನಾಥ್‌, ಪ್ರಭಾಕರ್‌, ಬೆಂಗಳೂರು ಶಿವಶಂಕರ್‌, ಡೈರಿ ಅಧ್ಯಕ್ಷ ನಂಜೇಗೌಡ್ರು, ಕಾಕಿ ಶಿವಣ್ಣ, ಜಯರಾಮ್‌, ಆಟೋಕುಮಾರ್‌, ಪ್ರಕಾಶ್‌, ಲಾರಿ ಗೌಡ, ಲಕ್ಷ್ಮೀಕಾಂತ, ಹರೀಶ್‌ ಸೇರಿದಂತೆ ಸಮದಾಯದ ಮಹಿಳೆಯರು, ಯುವಕರು ಇದ್ದರು.

ರಾಜ್ಯದಲ್ಲಿ ಒಬ್ಬ ಆಟೋ ಡ್ರೈವರಿಗೂ ಬಿಜೆಪಿ ಪಕ್ಷದ 40% ಕಮಿಷನ್‌ ಬಗ್ಗೆ ತಿಳಿದಿದೆ. ಬೆಲೆ ಏರಿಕೆ ರಾಜ್ಯದ ಜನತೆ ಹೈರಾಣಾಗಿದ್ದಾರೆ. ಸಾಮಾನ್ಯ ಜನರಿಗೆ ತಾಲೂಕು ಕಚೇರಿಗೆ ಹೋದರೆ ಪೊಲೀಸ್‌ ಇಲಾಖೆಗೆ ಹೋದರೆ ಹಣ ನೀಡಬೇಕು. ಇಷ್ಟುದುರಾಡಳಿತವನ್ನು ನಾವು ಎಂದಿಗೂ ನೋಡಿಲ್ಲ ಎಂದು ಸಾಮಾನ್ಯ ಜನ ಹೇಳುತ್ತಾರೆ. ಅಲ್ಲದೆ ಜಿಎಸ್‌ಟಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಟ್ಯಾಕ್ಸ್‌, ಮೈಸೂರು-ಬೆಂಗಳೂರಿಗೆ ಹೋದರೆ 1000 ಟೋಲ್‌ ಕಟ್ಟಬೇಕು ಇದು ಬಿಜೆಪಿ ದುರಾಡಳಿತ.

ಡಾ. ಜಿ ಪರಮೇಶ್ವರ, ಮಾಜಿ ಡಿಸಿಎಂ.

2ಎ ಯಲ್ಲಿ ಗೊಂದಲವಿದೆ. ಸುಮಾರು 102 ಜಾತಿಗಳನ್ನು ಸೇರಿಸಿ. ಶೈಕ್ಷಣಿಕ, ಉದ್ಯೋಗ ಈ ರೀತಿ ಗೊಂದಲ ಸೃಷ್ಟಿಮಾಡಿದ್ದಾರೆ. ಪರಮೇಶ್ವರ್‌ ರವರನ್ನು ಕೊರಟಗೆರೆಯ ಎಲ್ಲಾ ಸಮುದಾಯದವರು ಹೆಚ್ಚಿನ ಬೆಂಬಲ ನೀಡಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಎಲ್ಲಾ ಸಮುದಾಯ ಮುಖಂಡರ ಮಹದಾಸೆ ಈಡೇರಿಸಿ. ಜಾತಿ ಮತ ಪಂಥ ಲೆಕ್ಕಿಸದೇ ಅವರನ್ನು ವಿಧಾನಸೌಧದ ಉನ್ನತ ಮಟ್ಟದ ಸ್ಥಾನಕ್ಕೆ ಕೂರಿಸೋಣ ಎಂದು ನಿಮ್ಮಲ್ಲಿ ಮನವಿ ಮಾಡುತ್ತೇವೆ.

ನಿಕೇತ್‌ ರಾಜ್‌ ಮೌರ್ಯ, ಕೆಪಿಸಿಸಿ ಯುವ ವಕ್ತಾರ

click me!