Mandya: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಡೇಟ್ ಫಿಕ್ಸ್: ರೈತರು, ಭೂ ವಿಜ್ಞಾನಿಗಳ ವಿರೋಧ

Published : Jul 22, 2022, 03:03 PM ISTUpdated : Jul 24, 2022, 04:30 PM IST
Mandya: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಡೇಟ್ ಫಿಕ್ಸ್: ರೈತರು, ಭೂ ವಿಜ್ಞಾನಿಗಳ ವಿರೋಧ

ಸಾರಾಂಶ

ಬೇಬಿ ಬೆಟ್ಟದ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ (KRS) ಜಲಾಶಯಕ್ಕೆ ಕಲ್ಲು ಗಣಿಗಾರಿಕೆ ಕಂಟಕವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮಂಡ್ಯ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ಮೊರೆ ಹೋಗಿದೆ. 

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಜು.22): ಬೇಬಿ ಬೆಟ್ಟದ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ (KRS) ಜಲಾಶಯಕ್ಕೆ ಕಲ್ಲು ಗಣಿಗಾರಿಕೆ ಕಂಟಕವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮಂಡ್ಯ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ಮೊರೆ ಹೋಗಿದೆ. ಸರ್ಕಾರದ ಒಪ್ಪಿಗೆ ಪಡೆದು ಜುಲೈ 25 ರಿಂದ 31ರವರೆಗೆ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ದತೆಗಳು ನಡೆದಿದ್ದು, ಇದಕ್ಕೆ ರೈತರು, ಭೂ ವಿಜ್ಞಾನಿಗಳು ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿದೆ. 

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿದೆ. ಜಾರ್ಖಂಡ್ ಮೂಲದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಪರೀಕ್ಷಾರ್ಥ ಬ್ಲಾಸ್ಟಿಂಗ್ ನಡೆಸಲಿದ್ದು, ಟ್ರಯಲ್ ಬ್ಲಾಸ್ಟ್ ವರದಿ ಮೂರು ತಿಂಗಳೊಳಗಾಗಿ ಬರಲಿದೆ. ಕೆಆರ್‌ಎಸ್ (ಡ್ಯಾಂ)ಗೆ ಗಣಿಗಾರಿಕೆಯಿಂದ ಯಾವುದೇ ಅಪಾಯ ಇಲ್ಲ ಎಂಬ ವರದಿ ಬಂದರೆ ಮತ್ತೆ ಬೇಬಿ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಹಾಗಾಗಿ ರೈತರು, ಬೇಬಿ ಗ್ರಾಮಸ್ಥರು ಹಾಗೂ ಕೆಲ ಭೂ ವಿಜ್ಞಾನಿಗಳು ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಕೆಆರ್ ಪೇಟೆಯಲ್ಲಿ 1700 ಕೋಟಿ ವೆಚ್ಚದ ಕಾಮಗಾರಿ‌ : ಅಭಿವೃದ್ಧಿ ಹೆಸರಲ್ಲಿ ನಾರಾಯಣಗೌಡ ಶಕ್ತಿ ಪ್ರದರ್ಶನ

ಕಳೆದ 3 ವರ್ಷಗಳಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಂಡದೆ. ಗಣಿ ಮಾಲೀಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ನಿರ್ಧಾರ ಮಾಡಿದ್ದಾರೆ. ವಿಜ್ಞಾನಿಗಳು ಪರೀಕ್ಷೆ ವೇಳೆ ಅಲ್ಪ ಪ್ರಮಾಣದ ಸ್ಪೋಟಕ ಬಳಸುತ್ತಾರೆ. ಆದರೆ ಗಣಿಗಾರಿಕೆ ಮಾಡುವ ವೇಳೆ ಭಾರೀ ಸ್ಪೋಟಕ ಬಳಸಲಾಗುತ್ತದೆ. ಹಾಗಾಗಿ ಟ್ರಯಲ್ ಬ್ಲಾಸ್ಟ್‌ನಿಂದ ವಾಸ್ತವ ವರದಿ ಬರಲಾರದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಭೂ ವಿಜ್ಞಾನಿ ಪ್ರೊ.ಹೆಚ್.ಟಿ. ಬಸವರಾಜಪ್ಪ ವರದಿ ನೀಡಿದ್ದಾರೆ. 

ಕಾವೇರಿಗೆ ಸಿಎಂ ಬೊಮ್ಮಾಯಿ ಬಾಗಿನ, 8 ತಿಂಗ್ಳಲ್ಲಿ 2ನೇ ಬಾರಿ ಅರ್ಪಿಸಿರುವುದು ವಿಶೇಷ

ಸಂಸದೆ ಸುಮಲತಾ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಕಳೆದ ಜ.10ರಂದು ವರದಿ ನೀಡಿರುವ ಬಸವರಾಜಪ್ಪ ಬೇಬಿ ಬೆಟ್ಟದಲ್ಲಿ ನಡೆಯುವ ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ. ಅಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧ ಮಾಡಬೇಲು. ಟ್ರಯಲ್ ಬ್ಲಾಸ್ಟ್ ಮಾಡುತ್ತಿರುವುದಕ್ಕೆ ವಿರೋಧವಿದೆ. ಪರೀಕ್ಷಾರ್ಥ ಬ್ಲಾಸ್ಟ್ ಮಾಡುವುದರಿಂದಲೂ ಡ್ಯಾಂಗೆ ಅಪಾಯ ಆಗಬಹುದು. ಡ್ಯಾಂಗೆ ಅಪಾಯ ಆದ್ರೆ ಯಾರು ಹೊಣೆ ಎಂದು ಹೆಚ್.ಟಿ.ಬಸವರಾಜಪ್ಪ ಪ್ರಶ್ನೆಸಿದ್ದಾರೆ. ಸರ್ಕಾರ ಕೂಡಲೇ ಟ್ರಯಲ್ ಬ್ಲಾಸ್ಟಿಂಗ್ ರದ್ದು ಪಡಿಸುವಂತೆ ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?