Chikkamagaluru: ದೂರುದಾರನಿಗೆ ಆಮೀಷವೊಡ್ಡಿ ಕೇಸ್ ವಾಪಸ್ ತೆಗೆಸಿದ್ರಾ ಶೃಂಗೇರಿ ಶಾಸಕ ರಾಜೇಗೌಡ?

By Suvarna NewsFirst Published Dec 22, 2022, 9:42 PM IST
Highlights

ನವೆಂಬರ್ 18ರಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೇಲೆ ಲೋಕಾಯುಕ್ತ ದೂರು. ಅಕ್ರಮ ತೋಟ ಖರೀದಿಗೆ 100 ಕೋಟಿಗು ಅಧಿಕ ಹಣ ಎಲ್ಲಿಂದ ಬಂತು ಅಂತ ದೂರು. ದೂರು ನೀಡಿದ ಐದೇ ದಿನಕ್ಕೆ ಕೇಸ್ ಹಿಂಪಡೆದ ದೂರುದಾರ ವಿಜಯಾನಂದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿರೋ ಪ್ರಕರಣ. ವಿಜಯಾನಂದ ಹೆಸರಲ್ಲಿ ಛಾಪಾಕಾಗದ ಪಡೆದ ಶಾಸಕ ರಾಜೇಗೌಡರ ಸಂಬಂಧಿ ಪಿ.ಎ.  

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.22): ಕಾಫಿನಾಡ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಟಿ ಡಿ ರಾಜೇಗೌಡ ವರ್ಸಸ್ ಮಾಜಿ ಶಾಸಕ ಡಿ ಎನ್ ಜೀವರಾಜ್  ನಡುವೆ ನಡೆಯುತ್ತಿರುವ ಶೀತಲ ಸಮರ ಮುಗಿಯುವ ಲಕ್ಷಣಗೋಚರವಾಗುತ್ತಿಲ್ಲ,.ಹಾಲಿ ಶಾಸಕ ಟಿ ಡಿ ರಾಜೇಗೌಡ ಖರೀದಿ ಮಾಡಿರುವ 123 ಕೋಟಿ ಆಸ್ತಿ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್  ಪಡೆದುಕೊಳ್ಳುತ್ತಿದೆ. ಶಾಸಕರ ವಿರುದ್ದ ಲೋಕಾಯುಕ್ತದಲ್ಲಿ ಕೇಸ್ ದಾಖಲು ಮಾಡಿದ ದೂರುದಾರ ವಿಜಯಾನಂದ ಐದೇ ದಿನಕ್ಕೆ ಕೇಸ್ ಹಿಂಪಡೆಯುವ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೋಂದು ಆರೋಪ ಹೊರಬರುವ ಮೂಲಕ ಆಸ್ತಿ ಖರೀದಿ ಮಾಡಿರುವ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. 

ಶಾಸಕರ ಸಂಬಂಧಿ ಪಿ.ಎ. ಹೆಸರಲ್ಲಿ ಛಾಪಕಾಗದ ತೆಗೆದಿರುವುದು ವೈರಲ್: 
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ನಾನು ಯಾರಿಗೂ ಮೋಸ ಮಾಡಿಲ್ಲ. ಅನ್ಯಾಯ ಮಾಡಿಲ್ಲ. ಕಾನೂನಾತ್ಮಕವಾಗೇ ವ್ಯವಹಾರ ನಡೆಸಿರೋದು ಎಂದು ಎಲ್ಲಿ ಬೇಕಾದ್ರು ಹೇಳ್ತೀನಿ. ರಾಜಕೀಯಕ್ಕಾಗಿ ನನ್ನ ಮೇಲೆ ಆರೋಪ ಮಾಡ್ತಿರೋ ಮಾಜಿ ಶಾಸಕ ಡಿ.ಎನ್.ಜೀವರಾಜ್ ದೇವಾಲಯಕ್ಕೆ ಬರಲಿ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದ್ದರು. ಕಾರಣ ಇಷ್ಟೆ, ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಶಬಾನ ರಂಜಾನ್ ಟ್ರಸ್ಟ್ ಮೂಲಕ 123 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದು ಅದಕ್ಕೆ ಹಣ ಎಲ್ಲಿಂದ ಬಂತು ಎಂದು ಕೊಪ್ಪ ತಾಲೂಕಿನ ವಿಜಯಾನಂದ ಎಂಬುವರು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದರು.

ಆದರೆ, ನಾಲ್ಕೇ ದಿನಕ್ಕೆ ಕೇಸ್ ವಾಪಸ್ ಪಡೆದಿದ್ದರು. ಆಗ ಬಿಜೆಪಿ ಹಣ ನೀಡಿ, ಬೆದರಿಸಿ ಕೇಸ್ ಹಿಂಪಡೆದಿದ್ದಾರೆ ಎಂದು ಆರೋಪಿಸಿತ್ತು. ಆಗಲೂ ಶಾಸಕ ರಾಜೇಗೌಡ ಎಲ್ಲಾ ಆರೋಪವನ್ನ ತಳ್ಳಿ ಹಾಕಿದ್ದರು. ಅದರೆ, ವಿಜಯಾನಂದ ಕೇಸ್ ಹಿಂಪಡೆಯಲು ತೆಗೆದ ಬಾಂಡ್ ಪೇಪರ್ನಲ್ಲಿ ಶಾಸಕ ರಾಜೇಗೌಡರ ಸಂಬಂಧಿಯ ಪಿ.ಎ. ಫೋನ್ ನಂಬರ್, ಸಹಿ ಏಕೆ-ಹೇಗೆ ಬಂತು ಎಂದು ಬಿಜೆಪಿ ಮತ್ತೆ ಪ್ರಶ್ನಿಸಿದೆ. ಅಂದರೆ, ಅಲ್ಲಿಗೆ ಶಾಸಕರ ಕಡೆಯವರೇ ಕೇಸ್ ಹಿಂಪಡೆಸಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾದಂತಿದೆ ಎಂದು  ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ  ಮಂಜುನಾಥ್ ಗೌಡ ಆರೋಪಿಸಿದ್ದಾರೆ. 

Udupi: 2 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನ-ಬೆಳ್ಳಿ ಕದ್ದಿದ್ದ ಕಾರ್ಕಳ ಮನೆಗಳ್ಳರ ಬಂಧನ

ಆಸ್ತಿ ಖರೀದಿ ಮೂಲ ತಿಳಿಸುವಂತೆ ಬಿಜೆಪಿ ಒತ್ತಾಯ: 
ದೂರು ನೀಡಿದ ನಾಲ್ಕೇ ದಿನಕ್ಕೆ ಕೇಸ್ ಹಿಂಪಡೆದ ವಿಜಯಾನಂದ ಲೋಕಾಯುಕ್ತಕ್ಕೆ ಬಾಂಡ್ ನೀಡುವ ಮುನ್ನ ಫಾರಂ ಫಿಲ್ ಮಾಡಿ ಬಾಂಡ್ ಪಡೆಯೋದು ಕಾನೂನಿಯ ನಿಯಮ. ಆ ಫಾರಂನಲ್ಲಿ ಹೆಸರು ವಿಜಯಾನಂದ ಎಂದು ಇದೆ. ಆದರೆ, ಫೋನ್ ನಂಬರ್, ಸಹಿ ಮಾತ್ರ ಶಾಸಕ ರಾಜೇಗೌಡರ ಪತ್ನಿಯ ತಂಗಿಯ ಗಂಡನ ಪಿ.ಎ. (ಆಪ್ತ ಸಹಾಯಕ) ನದ್ದು. ವಿಜಯಾನಂದ ಹೆಸರಿದ್ದ ಮೇಲೆ ಅವರ ಸಹಿ-ಫೋನ್ ನಂಬರ್ ಇರಬೇಕು. ಮಹಮದ್ ಪಾಷನದ್ದು ಏಕೆ ಬಂತು ಎಂದು ಬಿಜೆಪಿ ಮತದಾರರು-ದೇವರಿಗೆ ಸುಳ್ಳು ಹೇಳುತ್ತಿದ್ದೀರಾ ಎಂದು ರಾಜೇಗೌಡ ವಿರುದ್ಧ ಕಿಡಿಕಾರಿದ್ದಾರೆ. 

HAVERI: ಕಿರಿಯ ಮಗ ಪ್ರೀತಿಸಿದ ತಪ್ಪಿಗೆ ಮನೆಯ ಮೂವರು ನೇಣಿಗೆ ಶರಣು!

ನೀವು 123 ಕೋಟಿ ಆಸ್ತಿ ಬಿಟ್ಟು 500 ಕೋಟಿ ಆಸ್ತಿ ಖರೀದಿ ಮಾಡಿ. ಆದರೆ, ಆ ಹಣ ಎಲ್ಲಿಂದ ಬಂತು ಎಂದು ಬಿಜೆಪಿಗರಿಗೆ ಬೇಡ, ಮತದಾರರಿಗೆ ಹೇಳಿ ಎಂದು ಸವಾಲಾಕಿದೆ. 2018ರ ಚುನಾವಣೆ ವೇಳೆ ಆಸ್ತಿ ಘೋಷಣೆಯಲ್ಲಿ ವಾರ್ಷಿಕ 35 ಲಕ್ಷ ಆದಾಯ ತೋರಿಸಿರೋ ನೀವು, ನಾಲ್ಕೇ ವರ್ಷಕ್ಕೆ 123 ಕೋಟಿ ಆಸ್ತಿಯ ಜಮೀನು ಖರೀದಿ ಹೇಗೆ ಅದನ್ನ ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ.ಒಟ್ಟಾರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡ ಶೃಂಗೇರಿಯಲ್ಲಿ 123 ಕೋಟಿ ಆಸ್ತಿ ಖರೀದಿ ಪ್ರಕರಣ ದಿನದಿಂದ ದಿನಕ್ಕೆ ಸದ್ದು ಮಾಡುತ್ತಿದೆ. ನ್ಯಾಯಕ್ಕಾಗಿ ದೂರು ನೀಡಿದ್ದ ವ್ಯಕ್ತಿ ನಾಲ್ಕೇ ದಿನಕ್ಕೆ ಕೇಸ್ ಹಿಂಪಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೆ ಕೊಪ್ಪದ ದಿನೇಶ್ ಎಂಬುವರ ಮತ್ತೆ ದೂರು ನೀಡಿದ್ರು. 123 ಕೋಟಿ ಆಸ್ತಿ ಪ್ರಕರಣ ಸದ್ಯ ಲೋಕಾಯುಕ್ತ ಅಂಗಳದಲ್ಲಿ ಇದ್ದು  ಅಧಿಕಾರಿಗಳ ನಿಷ್ಪಕ್ಷಪಾತವಾದ ತನಿಖೆಯಿಂದ ಸತ್ಯ ಹೊರಬರಬೇಕಿದೆ.

click me!