ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.25): ಚಿಕ್ಕಮಗಳೂರು ನಗರಸಭೆ (chikkamagaluru municipal council) ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿಗೆ ಬೇಷರತ್ತು ಬೆಂಬಲ ಘೋಷಿಸಿ ಒಂದೇ ವೇದಿಕೆ ಹಂಚಿಕೊಂಡಿದ್ದ ಜೆಡಿಎಸ್ ನ (JDS) ಇಬ್ಬರು ಸದಸ್ಯರು ಇದೀಗ ಆಡಳಿತಾರೂಢ ಬಿಜೆಪಿ (BJP) ಪಕ್ಷದ ಅಧ್ಯಕ್ಷರು, ಆಯುಕ್ತರ ವಿರುದ್ಧ ಸೆಣಸಾಟಕ್ಕೆ ಆಖಾಡಕ್ಕಿಳಿದ್ದಾರೆ. ಜಾತಿ ನಿಂದನೆ ಕಾಯ್ದೆ ಮೂಲಕ ನಗರಸಭೆ ಅಧ್ಯಕ್ಷರು, ಆಯುಕ್ತರು, ಸದಸ್ಯರ ನಡುವೆ ದೂರು ಪ್ರತಿದೂರು ದಾಖಲಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದ್ವಾರಪಾಲಕರ ನೇಮಕದಿಂದ ಹುಟ್ಟಿಕೊಂಡ ವಿವಾದ ಇದೀಗ ಧರ್ಮಸ್ಥಳದ (dharmasthala) ಧರ್ಮಾತ್ಮನ ಬಳಿ ತಲುಪಿದೆ.
ಅಧ್ಯಕ್ಷರು-ಸದಸ್ಯರ ಹಗ್ಗಜಗ್ಗಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣವಿಲ್ಲ:
ಕಾಫಿನಾಡ ನಗರಸಭೆ ಅಧ್ಯಕ್ಷರು-ಸದಸ್ಯರ ಹಗ್ಗಜಗ್ಗಾಟ ಸದ್ಯಕ್ಕೆ ತಣ್ಣಗಾಗುವಂತೆ ಕಾಣ್ತಿಲ್ಲ. ಒಬ್ಬರ ಮೇಲೋಬ್ಬರು ದೂರು ನೀಡಿ ಪ್ರಕರಣ ದಾಖಲಾದ ಬೆನ್ನಲ್ಲೆ ಅಭಿವೃದ್ಧಿ ಆಡಳಿತದ ವಿವಾದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಾಗಿಲು ಬಡಿದಿದೆ. ಸದಸ್ಯರು ಸರ್ಕಾರದ ಗಾಡಿ ಜನರ ತೆರಿಗೆ ದುಡ್ಡಲ್ಲಿ ಧರ್ಮಸ್ಥಳ-ಸುಬ್ರಹ್ಮಣ್ಯಕ್ಕೆ ಟ್ರಿಪ್ ಯಾಕ್ ಹೋದ್ರು. ಇದು ಅಭಿವೃದ್ಧಿಯಾ ಅಂತ ಪ್ರಶ್ನಿಸಿದ್ರೆ ಅಧ್ಯಕ್ಷರು ನಾನ್ ನನ್ ದುಡ್ಡಲ್ಲಿ ಡಿಸೇಲ್ ಹಾಕಿಸ್ಕೊಂಡು ತಾಂಡು ಹೋಗಿದ್ದೆ ಅಂತಿದ್ದಾರೆ. ದ್ವಾರಪಾಲಕರ ನೇಮಕದಿಂದ ಹುಟ್ಟಿಕೊಂಡ ವಿವಾದ ಇದೀಗ ಧರ್ಮಸ್ಥಳದ ಧರ್ಮಾತ್ಮನ ಬಳಿ ತಲುಪಿದೆ.
Yediyurappa ಒತ್ತಡಕ್ಕೆ ಮಣಿಯದ ಹೈಕಮಾಂಡ್, ಪುತ್ರನಿಗೆ ಟಿಕೆಟ್ ನೀಡದ್ದಕ್ಕೆ ಕಾರಣವೇನು?
ಚಿಕ್ಕಮಗಳೂರು ನಗರಸಭೆಯಲ್ಲಿ ಆಗಿದ್ದು ಇಷ್ಟೆ ನಗರಸಭೆ ಜೆಡಿಎಸ್ ಸದಸ್ಯ ಕುಮಾರ್ಗೌಡ ನಗರಸಭೆ ಪ್ರವೇಶಿಸುವಾಗ ನೀವು ನಿಮ್ಮ ವಾರ್ಡಿನ ಕೆಲಸಗಳನ್ನ ಮಾತ್ರ ಮಾಡಿಸಬೇಕು ಎಂದು ದ್ವಾರಪಾಲಕ ತಡೆದಿದ್ದಾರೆ. ದ್ವಾರಪಾಲಕನ ವರ್ತನೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಆಗ ಮಾತಿಗೆ ಮಾತು ಬೆಳೆದು ಕುಮಾರ್ಗೌಡ ಬೈದರು, ಜಾತಿ ನಿಂದನೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ನಗರದ ಅಭಿವೃದ್ಧಿಗೆ ಎಲ್ಲಿಯ ಕೆಲಸವಾದರೇನು ಎಂದು ಜೆಡಿಎಸ್ ಸದಸ್ಯ ಕುಮಾರ್ ನಗರಸಭೆ ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮದು ಭ್ರಷ್ಟಾಚಾರ ರಹಿತ ಅಭಿವೃದ್ದಿ ಅಂತೀರಲ್ಲ ಎಂದು ಆರ್.ಟಿ.ಐ.ನಲ್ಲಿ ನಗರಸಭೆಯಲ್ಲಿನ ಭ್ರಷ್ಟಾಚಾರದ ದಾಖಲೆಗಳನ್ನ ಕೇಳಿದ್ದಾರೆ. ಅದ್ಯಾವುದನ್ನೂ ನೀಡಿಲ್ಲ. ಈ ಮಧ್ಯೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ನಗರಸಭೆ ಅಧ್ಯಕ್ಷರ ಕಾರಿನಲ್ಲಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಟ್ರಿಪ್ ಹೋಗಿದ್ದಾರೆ. ಇದು ಏನೆಂದು ಪ್ರಶ್ನಿಸಿದ್ದಾರೆ. ಸರ್ಕಾರದ ಗಾಡಿ, ನಮ್ಮ ತೆರಿಗೆ ದುಡ್ಡು ನಗರಸಭೆ ಕೆಲಸಕ್ಕೆ ಮಾತ್ರ ಬಳಸಬೇಕು, ಹೊರಹೋಗಬೇಕಂದ್ರೆ ಕಡತಗಳ ಜೊತೆ ಡಿಸಿ ಅನುಮತಿ ಬೇಕು. ಇವ್ರು ಏನು ಇಲ್ಲದೆ ಸಂಸಾರ ಸಮೇತ ಟ್ರಿಪ್ ಹೋಗಿದ್ದಾರೆ. ಹೊರಗಡೆ ಹೋದಾಗ ಹೆಚ್ಚು-ಕಮ್ಮಿಯಾದರೆ ಇನ್ಸುರೆಸ್ಟ್ ಸಿಗುವುದು ಕಷ್ಟವಾಗುತ್ತೆ. ಜವಾಬ್ದಾರಿ ಯಾರು ಎಂದು ನಗರಸಭೆ ಅಧ್ಯಕ್ಷರಿಗೆ ಜೆಡಿಎಸ್ ನಗರಸಭಾ ಸದಸ್ಯ ಕುಮಾರ್ ಗೌಡ ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಕೈಮುಗಿದಿರುವ ಅಧ್ಯಕ್ಷ
ವಿಷಯ ಇಷ್ಟಕ್ಕೆ ಮುಗಿಯಲಿಲ್ಲ. ನಿಲ್ಲಲೂ ಇಲ್ಲ. ಈ ಪ್ರಕರಣದ ಬೆನ್ನಲ್ಲೆ ನಗರಸಭೆ ಜೆಡಿಎಸ್ ಸದಸ್ಯ ಗೋಪಿ ಎಂಬುವರು ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮೇಲೆ ಜಾತಿ ನಿಂದನೆ ಕೇಸ್ ನೀಡಿದ್ದಾರೆ. ನಗರಸಭೆಯ ಅಫಿಯಲ್ಸ್ ವಾಟ್ಸಾಪ್ ಗ್ರೂಪಿನಿಂದ ನನ್ನನ್ನ ರಿಮೂವ್ ಮಾಡಿದ್ದರು. ಹಾಗಾಗಿ, ಅದರ ಬಗ್ಗೆ ಹಾಗೂ ನನ್ನ ವಾರ್ಡಿನ ಕೆಲಸದ ನಿಮಿತ್ತ ಅಧ್ಯಕ್ಷರ ಬಳಿ ಚರ್ಚಿಸಲು ಹೋಗಿದ್ದೆ. ಆಗ ಅಧ್ಯಕ್ಷರು ಹಾಗೂ ಆಯುಕ್ತರು ನೀನು ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಏನು ಬೇಕಾದ್ರು ಮಾಡಿಕೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಈಗ ಎಲ್ಲರ ಮೇಲೂ ದೂರು ದಾಖಲಾಗಿದೆ.
SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ರಾಮನಗರದಲ್ಲಿ ಓರ್ವ ಅರೆಸ್ಟ್
ಈ ಮಧ್ಯೆ ಸರ್ಕಾರದ ವಾಹನದಲ್ಲಿ ಟೂರ್ ಹೋಗಿಬಂದ ಅಧ್ಯಕ್ಷ ವೇಣುಗೋಪಾಲ್, ನಾನ್ ಟೂರ್ ಹೋಗಿದ್ದು ನಿಜ. ಆದರೆ, ನನ್ನ ದುಡ್ಡಲ್ಲಿ ಡಿಸೇಲ್ ಹಾಕಿಸಿಕೊಂಡು ಹೋಗಿದ್ದೆ ಎಂದು ಸಮಾಜಾಯಿಷಿ ನೀಡಿದ್ದಾರೆ. ಜೊತೆಗೆ, ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಅದಕ್ಕೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಅವರನ್ನ ನೀವೇ ನೋಡಿಕೊಳ್ಳಿ ಎಂದು ಕೈಮುಗಿದು ಬಂದಿದ್ದಾರೆ.ಒಟ್ಟಾರೆ, ಅತ್ತ ಜನಪ್ರತಿನಿಧಿಯನ್ನ ಓರ್ವ ಕಾವಲುಗಾರ ನಗರಸಭೆ ಒಳಹೋಗದಂತೆ ತಡೆದದ್ದು ತಪ್ಪು. ಅಭಿವೃದ್ಧಿಗೆ ಯಾವ ವಾರ್ಡು-ಏರಿಯಾ ಆದರೇನು. ಅಭಿವೃದ್ಧಿ ಎಲ್ಲರ ಗುರಿ. ಇತ್ತ ಡಿಸೇಲ್ ಸ್ವಂತದ್ದೋ-ಸರ್ಕಾರದ್ದೋ, ಸರ್ಕಾರದ ಗಾಡಿಯಲ್ಲಿ ಫ್ಯಾಮಿಲಿ ಟ್ರಿಪ್ ಮಾಡಿದ್ದು ತಪ್ಪು. ಇದು ಮೇಲ್ನೋಟಕ್ಕೆ ಅಭಿವೃದ್ಧಿಯ ಜಗಳ ಎಂಬಂತೆ ಕಾಣುತ್ತಿಲ್ಲ. ಜೆಡಿಎಸ್ ವರ್ಸಸ್ ಬಿಜೆಪಿ ಎಂಬಂತೆ ಗೋಚರವಾಗ್ತಿದೆ.