ಚಿಕ್ಕಮಗಳೂರಲ್ಲಿ ಬರೋಬ್ಬರಿ 16 ವರ್ಷಗಳ ಬಳಿಕ ಗೋಧಿ‌ಸಸಿ ಹಬ್ಬದ‌‌ ಸಂಭ್ರಮ..!

By Girish Goudar  |  First Published May 25, 2022, 1:02 PM IST

*   ಬಯಲುಸೀಮೆಯಲ್ಲಿ ಗೋಧಿ‌ಸಸಿ ಹಬ್ಬದ‌‌ ಸಂಭ್ರಮ
*  ಬಂಜಾರ ಸಮುದಾಯದ ಸಾಂಪ್ರದಾಯಿಕ ಹಬ್ಬದ ಸಿರಿ
*  ಹದಿನಾರು ವರ್ಷಗಳ ನಂತರ ಸಾಕ್ಷಿಯಾದ ಗುಬ್ಬಿಹಳ್ಳಿ ತಾಂಡ್ಯ
 


ವರದಿ: ಆಲ್ದೂರು ಕಿರಣ್ ಏಷ್ಯಾ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಮೇ.25): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಬಯಲುಸೀಮೆ ಮಲೆನಾಡು ಪ್ರದೇಶವನ್ನು ಒಳಗೊಂಡಿರುವಂತಹ ಜಿಲ್ಲೆ. ಇಲ್ಲಿ ಹತ್ತು ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿರುವಂತ ಜಿಲ್ಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿ ಆಚರಿಸುವಂತಹ ಪ್ರತಿ ಹಬ್ಬವೂ ಕೂಡ ಅತ್ಯಂತ ವೈಶಿಷ್ಟತೆ, ಸಂಪ್ರಾದಯ, ಗ್ರಾಮೀಣ ಭಾಗದ ಸಂಭ್ರಮಕ್ಕೂ ಕೂಡ ಕಾರಣವಾಗಿರುತ್ತದೆ. ಮಲೆನಾಡಿನಲ್ಲಿ ಆಚರಿಸುವಂತಹ ಹಬ್ಬದ ಸಂಭ್ರಮದ ಸಿರಿಯ ಜೊತೆಗೆ ಬಯಲುಭಾಗದಲ್ಲಿ ನಡೆಯುವಂತಹ ಹಬ್ಬದ ಸಂಭ್ರಮ ಎಲ್ಲೆ ಮೀರಿರುತ್ತದೆ. ಇದರ ಸಾಲಿಗೆ ಬಯಲುಸೀಮೆ ಭಾಗದ ಗುಬ್ಬಿಹಳ್ಳಿ ತಾಂಡ್ಯದಲ್ಲಿ ನಡೆಯುವಂತಹ ಹಬ್ಬದ ಸಂಭ್ರಮವೂ ಕೂಡ ಹಲವು ವೈಶಿಷ್ಟತೆಗಳಿಂದ ಕೂಡಿರುತ್ತದೆ.

Tap to resize

Latest Videos

16 ವರ್ಷಗಳ ನಂತರ ತಾಂಡಾದಲ್ಲಿ‌ ನಡೆದ ಹಬ್ಬದ‌ ಸಂಭ್ರಮ 

16 ವರ್ಷಗಳ ನಂತರ ಚಿಕ್ಕಮಗಳೂರು ಜಿಲ್ಲೆಯ ಗುಬ್ಬಿಹಳ್ಳಿ ತಾಂಡಾವೂ‌ ಸಾಂಪ್ರದಾಯಿಕ ಹಬ್ಬಕ್ಕೆ‌ ಸಾಕ್ಷಿ ಆಗಿದೆ.ಗುಬ್ಬಿಹಳ್ಳಿ ತ್ಯಾಂಡದಲ್ಲಿ ಸಾಂಪ್ರದಾಯಿಕ ಗೋಧಿ ಸಸಿ(ತೀಜ್) ಹಬ್ಬದ ಆಚರಣೆ‌ಯನ್ನು ಅತ್ಯಂತ ಸಂಭ್ರಮ ಸಡಗರದಿಂದ‌ ಊರಿನ‌ ಜನರು‌ ಆಚರಣೆ ಮಾಡಿದರು.

ಮಿಲ್ಟ್ರಿ ಆಫೀಸರ್ ಅಂತ ಹೇಳಿ ಆಟೋ ಡ್ರೈವರ್‌ಗೆ ಪಂಗನಾಮ ಹಾಕಿದ ನಯವಂಚಕ..!

ಗ್ರಾಮದಲ್ಲಿ‌ ಮನೆ ಮಾಡಿದ ಸಂಭ್ರಮ 

ಗುಬ್ಬಿಹಳ್ಳಿತ್ಯಾಂಡ ಇಡೀ ಜಿಲ್ಲೆಯಲ್ಲಿ ಮಾದರಿಯ ತಾಂಡಾ. ಬಂಜಾರ ಸಮುದಾಯದ ದೇವಸ್ಥಾನವನ್ನು ಹೊಂದಿರುವ ಇಡೀ ರಾಜ್ಯದಲ್ಲೇ ಮಾದರಿ ಗ್ರಾಮ ಎನ್ನುವುದರ ಜೊತೆಗೆ ಡಿಜಿಟಲ್ ಗ್ರಂಥಾಲಯವನ್ನು ಕೂಡ ಹೊಂದಿರುವ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿದೆ. ಇಲ್ಲಿನ ಜನರು ಆಧುನಿಕತೆಯ ಸ್ಪರ್ಶದ ಜೊತೆಗೆ ತಮ್ಮ ಸಂಪ್ರದಾಯವನ್ನು  ಇಂದಿಗೂ ಕೂಡ ಜೀವಂತವಾಗಿ ಇರಿಸಿಕೊಂಡಿದ್ದಾರೆ. ಇದರ ಭಾಗವಾಗಿ ಕಳೆದ 16 ವರ್ಷಗಳಿಂದ ನಿಂತುಹೋಗಿದ್ದ ತಾಂಡ್ಯದ ಸಂಪ್ರದಾಯದ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡುವ ಮೂಲಕ ತಮ್ಮ ಹಿಂದಿನ ಪರಂಪರೆಯನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ ಇಲ್ಲಿನ ಗ್ರಾಮಸ್ಥರು. 

ಕಳೆದ‌16 ವರ್ಷಗಳಿಂದ ಕಾರಣಾಂತರಗಳಿಂದ ಗೋದಿ ಸಸಿ(ತೀಜ್ ಹಬ್ಬಕ್ಕೆ) ತಿಲಾಂಜಲಿ ಮಾಡಲಾಗಿತ್ತು. ಆದರೆ ಗ್ರಾಮದ ಹಿರಿಯರು, ಮುಖಂಡರು ಗ್ರಾಮಸ್ಥರು ಸಭೆ ಸೇರಿ ಬಂಜಾರ ಸಮುದಾಯದ ಸಾಂಪ್ರದಾಯಿಕ ಹಬ್ಬವನ್ನು ಮತ್ತೊಮ್ಮೆ ತಾಂಡಾದಲ್ಲಿ ಆಚರಣೆ ಮಾಡುವ ಮೂಲಕ ತಮ್ಮ ಹಿಂದಿನ ಪರಂಪರೆಯನ್ನು ಮುಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. 16 ವರ್ಷಗಳ ನಂತರ ನಡೆದ ಹಬ್ಬವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದರು. ಗ್ರಾಮದಲ್ಲಿ ಹಬ್ಬದ ಸಂಭ್ರಮ ಸಡಗರ ಎಲ್ಲೆ ಮೀರಿತ್ತು. ಪ್ರತಿಯೊಂದು ಮನೆಯನ್ನು ಕೂಡ  ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಹಬ್ಬಕ್ಕಾಗಿ ಗ್ರಾಮಸ್ಥರು ಕಳೆದ 15 ದಿನಗಳಿಂದ ತಯಾರಿ ನಡೆಸಿದ್ದರು.

ಕಾಫಿನಾಡಿನಲ್ಲಿ ಸರಳ ಸಾಮೂಹಿಕ ವಿವಾಹ, ದಲಿತರ ಸಾಂಸ್ಕೃತಿಕ ವೈಭವದ ಅನಾವರಣ

ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಸಡಗರ 

ಗ್ರಾಮದಲ್ಲಿ ಹಲವು ವರ್ಷಗಳ ಬಳಿಕ ಹಬ್ಬ ಸಂಭ್ರಮದ ಹಿನ್ನೆಲೆಯಲ್ಲಿ ಸಂತಸ ಮನೆಮಾಡಿತ್ತು. ದೂರದ ಊರುಗಳಿಂದ ಸಂಬಂಧಿಕರು ಆಗಮಿಸಿದ್ದರು. ಹಬ್ಬದ ನೆಪದಲ್ಲಾದರೂ ಕೂಡ ಹತ್ತಿರದ ಸಂಬಂಧಿಕರೆಲ್ಲರೂ ಕೂಡ ಒಂದೆಡೆ ಸೇರುವಂತಾಯಿತು. 16 ವರ್ಷಗಳ ನಂತರ ಹಬ್ಬವನ್ನು ಸಂಭ್ರಮದಿಂದ ಗ್ರಾಮಸ್ಥರು ಆಚರಣೆ ಮಾಡಿದರು. ಹಬ್ಬದ ಅಂಗವಾಗಿ ಗ್ರಾಮಸ್ಥರು‌‌ ತಮ್ಮ‌ ಸಂಪ್ರದಾಯವನ್ನು ಮತ್ತೊಮ್ಮೆ ಮೆಲಕು ಹಾಕುವ ಪ್ರಯತ್ನವನ್ನು ಕೂಡ ನಡೆಸಿದರು.
ಬಂಜಾರ ಸಮುದಾಯದಲ್ಲಿ ನಡೆಯುವಂತ ಈ ವಿಶಿಷ್ಠ ಹಬ್ಬದ ಸಂಭ್ರಮ 8 ದಿನಗಳ ಮುಂಚೆಯೇ ನಿಗದಿ ಆಗಿರುತ್ತೇದೆ. ಕಳೆದ 8 ದಿನಗಳಿಂದಲೂ ಗ್ರಾಮದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗೆ ಸುಣ್ಣ-ಬಣ್ಣ ಹೊಡೆದು ಪರಿಶುದ್ಧವಾಗಿ ಹಬ್ಬವನ್ನು ಆಚರಣೆ ಮಾಡಲು ಸಿದ್ಧರಾಗುತ್ತಾರೆ.ಮದುವೆ ಆಗದ ಹೆಣ್ಣು ಮಕ್ಕಳು ದೇವಸ್ಥಾನದಲ್ಲಿ ಇದೇ ತಿಂಗಳು 15 ರಂದು ಹಬ್ಬದ ಅಂಗವಾಗಿ ಗ್ರಾಮದ ದೇವಸ್ಥಾನದಲ್ಲಿ ಗೋದಿ ಬೀಜವನ್ನು ನಾಟಿ ಮಾಡುತ್ತಾರೆ. ನಾಟಿ ಮಾಡಿದ ಗೋದಿಯೂ ಎಂಟು ದಿನಗಳ ನಂತರ  ಸಸಿ ಆಗಿರುತ್ತೇದೆ. ಗ್ರಾಮದ ಹೆಣ್ಣುಮಕ್ಕಳು ಬಂಜಾರ ಸಮುದಾಯದ ಸಂಪ್ರದಾಯದಂತೆ ಎಂಟು ದಿನಗಳ ನಂತರ ಕುಯಿಲು ಮಾಡುವ ಮೂಲಕ ಗೋಧಿ ಸಸಿ(ತೀಜ್ )ಹಬ್ಬದ ಸಂಭ್ರಮ ಸಂಪನ್ನವಾಗುತ್ತದೆ .ಹಬ್ಬದ ಅಂಗವಾಗಿಗ್ರಾಮದಲ್ಲಿ ದೇವರು ಮೆರವಣಿಗೆ ನಡೆಸಲಾಗುತ್ತದೆ.

ಸಂತ ಸೇವಾಲಾಲ್, ಕಳಸೇಶ್ವರಿ, ಮಾರಿಯಮ್ಮ ಪಟ್ಟಣದಮ್ಮ ದೇವರ ಮೆರವಣೆಗೆಯನ್ನು‌ ಗ್ರಾಮದಲ್ಲಿ‌ಮಾಡಲಾಗುತ್ತೇದೆ. ದೇವರಿಗೆ ಸಿಹಿ ಮತ್ತು ಖಾರದ ಅಡುಗೆಯನ್ನು ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ.ಹಬ್ಬವನ್ನು ಗ್ರಾಮಸ್ಥರು‌ ಆಚರಣೆ ಮಾಡುವುದರಿಂದ ಗ್ರಾಮದಲ್ಲಿ ಮದುವೆಯಾಗದ ಹೆಣ್ಣು ಮಕ್ಕಳ ಬದುಕು ಹಸನವಾಗುವುದು, ಭಕ್ತರ ಬೇಡಿಕೆಗಳು ಕೂಡ ಇಷ್ಟಾರ್ಥಗಳು ಕೂಡ ಸಿದ್ಧಿಯಾಗುವುದು ಎನ್ನುವ ಸಂಪ್ರದಾಯ ರೂಢಿಯಲ್ಲಿದೆ. ಹಬ್ಬಕ್ಕೆ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಬಂಜಾರ ಗುರುಪೀಠದ ಚಿತ್ರದುರ್ಗ ಸ್ವಾಮೀಜಿಗಳು ಆಶೀರ್ವಾದ ನೀಡಿದರು. ಗ್ರಾಮದ ಮುಖಂಡರು, ಜನಪ್ರತಿನಿಧಿಗಳ ಹಬ್ಬಕ್ಕೆ ‌ಸಾಕ್ಷಿಯಾದರು.
 

click me!