ಎಲ್ಲ ಪಕ್ಷ, ಸರ್ಕಾರಗಳು ರೈತ ವಿರೋಧಿಗಳೇ: ಕೋಡಿಹಳ್ಳಿ ಚಂದ್ರಶೇಖರ್

By Kannadaprabha NewsFirst Published Mar 15, 2024, 1:59 PM IST
Highlights

ಯಾವುದೇ ಪಕ್ಷ ಮತ್ತು ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಎಲ್ಲರೂ ರೈತ ವಿರೋಧಿಗಳೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು. 

ಚಿಕ್ಕಬಳ್ಳಾಪುರ (ಮಾ.15): ಯಾವುದೇ ಪಕ್ಷ ಮತ್ತು ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಎಲ್ಲರೂ ರೈತ ವಿರೋಧಿಗಳೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ರಾಷ್ಟ್ರದಲ್ಲಿ ಉತ್ಪಾದನೆ ಆಗುವ ಎಲ್ಲಾ ವಸ್ತುಗಳಿಗೂ ಬೆಲೆ ನಿಗದಿ ಇದೆ. ಆದರೆ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಲೆ ನಿಗದಿಯೂ ಇಲ್ಲ. ಈ ಕಾರಣದಿಂದಾಗಿ ರೈತರು ಕಷ್ಟ ಮತ್ತು ನಷ್ಟ ಪಡುವಂತಾಗುತ್ತದೆ ಎಂದರು.

ಕೃಷಿ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡಲಿ: ದೆಹಲಿಯಲ್ಲಿ ಪಂಜಾಬ್‌ನಿಂದ ಬಂದ ರೈತರು ಮಾಡಿದ ಹೋರಾಟ ನಿಜಕ್ಕೂ ರೈತರ ಒಗ್ಗಟ್ಟನ್ನು ಪ್ರದರ್ಶಿಸಿದೆ. ಈ ಹೋರಾಟದಿಂದಲಾದರೂ ಸಹ ಕೇಂದ್ರ ಸರ್ಕಾರ ಕಣ್ಣು ತೆರೆದು ರಾಷ್ಟ್ರದಲ್ಲಿ ಬೆಂಬಲ ಬೆಲೆ ನಿಗದಿ ಪಡಿಸಬೇಕು ಇಲ್ಲವಾದರೆ ಕೇಂದ್ರ ಸರ್ಕಾರದ ವಿರುದ್ಧ ರೈತ ಸಮೂಹ ತೀವ್ರ ಹೋರಾಟ ಮಾಡುವ ಅನಿವಾರ್ಯತೆ ಆಗುತ್ತದೆ ಎಂದರು. ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಸ್ಟಾಲಿನ್ ರವರ ಸ್ನೇಹವನ್ನು ಮತ್ತಷ್ಟು ಬೆಸೆದುಕೊಳ್ಳುವ ಸಲುವಾಗಿ ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು.

ಹೃದಯಾಘಾತವಾದ್ರೆ ತಕ್ಷಣವೇ ಸಿಗಲಿದೆ ಇಂಜಕ್ಷನ್: ಪುನೀತ್ ರಾಜಕುಮಾರ್ ಹೆಸರಿನಲ್ಲಿ ಸರ್ಕಾರದಿಂದ ವಿನೂತನ ಯೋಜನೆ ಜಾರಿ

3ನೇ ಹಂತದ ಶುದ್ಧೀಕರಣ: ಬಯಲು ಸೀಮೆಯ ಜನತೆ ತೀವ್ರವಾಗಿ ನೀರಾವರಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಮತ್ತು ಕೆ ಸಿ ವ್ಯಾಲಿ ನೀರು ಕಲುಷಿತವಾಗಿದ್ದು ಅದೇ ರೀತಿ ಎಚ್ ಎನ್ ಯಲ್ಲಿ ನೀರು ಸಹ ಕಲುಷಿತವಾಗಿದೆ. ಈ ಎರಡು ಯೋಜನೆಗಳಲ್ಲಿ ನೀರನ್ನು ಮೂರನೇ ಹಂತದ ಶುದ್ದೀಕರಣ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಈಗಾಗಲೇ ಒತ್ತಾಯ ಮಾಡಿದ್ದೇವೆ ಎಂದರು. ಅದೇ ರೀತಿ ಆಂಧ್ರದ ಗೋದಾವರಿ ನೀರಿನಲ್ಲಿ ಮತ್ತು ಕೃಷ್ಣ ನೀರಿನಲ್ಲಿಯೂ ಸಹ ನಮಗೆ ಭಾಗ ಇದೆ. ರಾಜ್ಯ ಸರ್ಕಾರ ಆಂಧ್ರಪ್ರದೇಶದ ಸರ್ಕಾರದೊಂದಿಗೆ ನೀರು ರಾಜ್ಯಕ್ಕೆ ತರುವ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಈ ಕೋಲಾರ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮುಂದೆ ಬರಡು ಜಿಲ್ಲೆಗಳಾಗಿ ಇಲ್ಲಿನ ಜನತೆ ಗುಳೆ ಹೋಗುವ ಸಂಭವ ಇದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆ ವಾಪಸ್‌ ಪಡೆಯಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯ ಬೇಕೆಂದು ದೆಹಲಿಯಲ್ಲಿ ರೈತರು ಹೋರಾಟ ಮಾಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಖಾರ್ಜುನ ಖರ್ಗೆ ಸಹಾ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯ ಬೇಕೆಂದು ಆಗ್ರಹಿಸಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಆದರೆ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ವಾಪಸ್ ಪಡೆದಿಲ್ಲಾ ಮತ್ತು ಎಪಿಎಂಸಿ ಕಾಯ್ದೆಗೆ ತೇಪೆ ಹಚ್ಚಿದ್ದಾರೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ: ಸಂಸದ ಡಿ.ಕೆ.ಸುರೇಶ್

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಲ್ಲಿ ಬೈರೇಗೌಡ,ಜಿಲ್ಲಾಧ್ಯಕ್ಷ ಎಚ್‌.ಪಿ.ರಾಮನಾಥ್ , ಕಾರ್ಯದರ್ಶಿ ಶಿಡ್ಲಘಟ್ಟ ವೇಣು, ಜಿಲ್ಲಾ ಸಮಿತಿ ಸದಸ್ಯರಾದ ಮುನಿನಂಜಪ್ಪ, ಶ್ರೀನಿವಾಸ್, ಮುನಿಕೃಷ್ಣಪ್ಪ,ರಾಜ್ಯ ಮಹಿಳಾ ಸಂಚಾಲಕ ಉಮಾ, ರಾಜ್ಯ ಸಂಚಾಲಕ ಲಕ್ಷ್ಮಣ್ ರೆಡ್ಡಿ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಗೌರಿಬಿದನೂರು ತಾಲೂಕು ಅಧ್ಯಕ್ಷ ಮಾಳಪ್ಪ,ಚಿಂತಾಮಣಿ ತಾಲೂಕು ಅಧ್ಯಕ್ಷ ರಮಣ ರೆಡ್ಡಿ, ಚೇಳೂರು ತಾಲೂಕು ಅಧ್ಯಕ್ಷ ನಾಗಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮಂಜುನಾಥ್, ಗುಡಿಬಂಡೆ ತಾಲೂಕು ಅಧ್ಯಕ್ಷ ಕೆ.ಎನ್.ಸೋಮಶೇಖರ್, ಹಸಿರು ಸೇನೆ ಜಿಲ್ಲಾ ಸಂಚಾಲಕಿ ತಿರುಮಣಿ ಗಾಯತ್ರಿ ಇದ್ದರು.

click me!