ರಿಂಗ್‌ ರೋಡ್‌, ಕಡಬಗೆರೆ ಮೆಟ್ರೋಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ, 15,611 ಕೋಟಿ ರೂ ವೆಚ್ಚ ಮೀಸಲು

By Suvarna News  |  First Published Mar 15, 2024, 1:41 PM IST

ಬೆಂಗಳೂರು ನಗರಕ್ಕೆ ₹15,611 ಕೋಟಿ ವೆಚ್ಚದಲ್ಲಿ 44.65 ಕಿ.ಮೀ. ಉದ್ದದ ಮೂರನೇ ಹಂತದ ಮೆಟ್ರೋ ಯೋಜನೆ ಸೇರಿದಂತೆ ಸಾಲು ಸಾಲು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.


ಬೆಂಗಳೂರು (ಮಾ.15): ಬೆಂಗಳೂರು ನಗರಕ್ಕೆ ₹15,611 ಕೋಟಿ ವೆಚ್ಚದಲ್ಲಿ 44.65 ಕಿ.ಮೀ. ಉದ್ದದ ಮೂರನೇ ಹಂತದ ಮೆಟ್ರೋ ಯೋಜನೆ ಸೇರಿದಂತೆ ಸಾಲು ಸಾಲು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮೆಟ್ರೋ ಸೂಕ್ತ ಪರಿಹಾರ. ಭವಿಷ್ಯದ ಅವಶ್ಯಕತೆಗೆ ಅನುಗುಣವಾಗಿ ಮೆಟ್ರೋ ಮೂರನೇ ಹಂತಕ್ಕೆ ಒಪ್ಪಿಗೆ ನೀಡಲಾಗಿದೆ. ಇದರಡಿ ಹೊರ ವರ್ತುಲ ರಸ್ತೆಯಲ್ಲಿ (ಹೆಬ್ಬಾಳದಿಂದ ಜೆ.ಪಿ‌ನಗರ) 32.15 ಕಿ.ಮೀ. ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.5 ಕಿ.ಮೀ. ಉದ್ದದ ಮೆಟ್ರೋ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ₹15,611 ಕೋಟಿ ವೆಚ್ಚವಾಗಲಿದ್ದು, ಶೇ.80ರಿಂದ 85ರಷ್ಟು ಹಣವನ್ನು ರಾಜ್ಯ ಸರ್ಕಾರ ಹೊಂದಿಸಲಿದೆ. ಈಗಾಗಲೇ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಿ ಕೇಂದ್ರದ ಅನುಮೋದನೆಯನ್ನೂ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

Tap to resize

Latest Videos

undefined

ಇನ್ನು ಮೆಟ್ರೋ ಮೂರನೇ ಹಂತದ ಯೋಜನೆಯನ್ನು 2028ರ ವೇಳೆಗೆ ಪೂರ್ಣಗೊಳಿಸುವುದಾಗಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭೂಸ್ವಾಧೀನ ಮತ್ತಿತರ ಕಾರಣಗಳಿಗೆ ಹೆಚ್ಚು ಕಡಿಮೆ ಆಗಬಹುದು. ಮೆಟ್ರೋ ಮೂರನೇ ಹಂತದ ಯೋಜನೆಯಿಂದ ಹೊರ ವರ್ತುಲ ರಸ್ತೆ ಸಂಪೂರ್ಣ ಮೆಟ್ರೋ ಸೇವೆ ವಿಸ್ತರಣೆಯಾಗಲಿದೆ. ಹೆಬ್ಬಾಳದಿಂದ ಗೊರಗುಂಟೆ ಪಾಳ್ಯ ವೃತ್ತ, ಸುಮ್ಮನಹಳ್ಳಿ ವೃತ್ತ, ಮೈಸೂರು ರಸ್ತೆ, ಕನಕಪುರ ರಸ್ತೆ ಮಾರ್ಗವಾಗಿ ಜೆ.ಪಿ.ನಗರವರೆಗೆ 32.15 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು.

ನಮ್ಮ ಮೆಟ್ರೋ 3ನೇ ಹಂತಕ್ಕೆ ಡಬಲ್‌ ಡೆಕ್ಕರ್‌: ವರದಿಗಾಗಿ ಟೆಂಡರ್‌

ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ಡೆಲ್ಟಾ ಹೆಸರು:
ಬೊಮ್ಮಸಂದ್ರ ಮೆಟ್ರೋ ರೈಲು ನಿಲ್ದಾಣ ನಿರ್ಮಾಣ ವೆಚ್ಚದ ₹65 ಕೋಟಿ ಮೊತ್ತವನ್ನು ಭರಿಸಲು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಂದೆ ಬಂದಿದೆ. ಈ ಮೊತ್ತವನ್ನು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಪಾವತಿಸುವ ಮೂಲಕ 30 ವರ್ಷ ‘ಡೆಲ್ಟಾ ಎಲೆಕ್ಟ್ರಾನಿಕ್‌ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ’ ನಾಮಕರಣ ಹಕ್ಕನ್ನು ಪಡೆಯಲಿದೆ.

ಕೋಟ್ಯಂತರ ಸಾಲದಲ್ಲಿ ಮುಳುಗಿರುವ ಅನಿಲ್ ಅಂಬಾನಿಯ ಈ ಸಂಸ್ಥೆಗೆ ಶೀಘ್ರದಲ್ಲೇ 4000 ಕೋಟಿ ರೂ ಸಿಗಲಿದೆ!

ಈ ಕುರಿತ ಒಪ್ಪಂದಕ್ಕೆ ಬಿಎಂಆರ್‌ಸಿಎಲ್‌ ಹಾಗೂ ಡೆಲ್ಟಾ ಗುರುವಾರ ಒಡಂಬಡಿಕೆ ಮಾಡಿಕೊಂಡಿದ್ದು, ಮೊದಲ ಕಂತಾಗಿ ₹10 ಕೋಟಿಯನ್ನು ನಮ್ಮ ಮೆಟ್ರೋಗೆ ನೀಡಿತು. ಡೆಲ್ಟಾ ಎಲೆಕ್ಟ್ರಾನಿಕ್ಸ್ ತ್ರೈವಾನ್ ದೇಶದ ಉತ್ಪಾದನಾ ಕಂಪನಿಯಾಗಿದ್ದು, ಪರಿಸರ ಸುಸ್ಥಿರತೆಗೆ ಬದ್ಧತೆ ಹೊಂದಿದೆ. ಒಪ್ಪಂದದ ವೇಳೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಬೆಂಜಮಿನ್ ಲಿನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಉಪಸ್ಥಿತರಿದ್ದರು.

ಈ ಒಪ್ಪಂದದ ಮೂಲಕ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಕಂಪನಿಗಳ ಜೊತೆ ಮಾಡಿಕೊಂಡ ಮೂರನೇ ಒಡಂಬಡಿಕೆ ಇದಾಗಿದೆ. ಈ ಹಿಂದೆ ಕೋನಪ್ಪನ ಅಗ್ರಹಾರ ಮತ್ತು ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ಕುರಿತು ಕ್ರಮವಾಗಿ ಇನ್ಫೋಸಿಸ್ ಫೌಂಡೇಶನ್ ಮತ್ತು ಬಯೋಕಾನ್ ಫೌಂಡೇಶನ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

click me!