ಮದ್ಯಪಾನ ಜೀವನ, ಜೀವವನ್ನು ಹಾಳು ಮಾಡುತ್ತದೆ : ರಾಜಣ್ಣ ಕೊರವಿ

By Kannadaprabha News  |  First Published Jan 14, 2024, 12:23 PM IST

ಮದ್ಯಪಾನ ಮಾಡುವುದರಿಂದ ತಮ್ಮ ಜೀವನ ಮತ್ತು ಜೀವವನ್ನು ಹಾಳು ಮಾಡಿ ಸಂಸಾರವನ್ನು ನರಕ ಕೂಪಕ್ಕೆ ತಳ್ಳುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.


  ಹುಲ್ಲಹಳ್ಳಿ :  ಮದ್ಯಪಾನ ಮಾಡುವುದರಿಂದ ತಮ್ಮ ಜೀವನ ಮತ್ತು ಜೀವವನ್ನು ಹಾಳು ಮಾಡಿ ಸಂಸಾರವನ್ನು ನರಕ ಕೂಪಕ್ಕೆ ತಳ್ಳುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.

ಗ್ರಾಮದಲ್ಲಿ ಡಾ. ಡಿ ವೀರೇಂದ್ರ ಹೆಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗಡೆ ಅವರ ಆಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಾಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ ಉಜಿರೆ ಇವರ ವಿಸ್ತೀರ್ಣ ಕಾರ್ಯಕ್ರಮ ವಿಸ್ತೀರ್ಣ ಕಾರ್ಯಕ್ರಮದ 1,782ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಮುಖ್ಯಅತಿಥಿಗಳಾಗಿ ಅವರು ಮಾತನಾಡಿರು.

Latest Videos

undefined

ಕುಟುಂಬದ ನೆಮ್ಮದಿ ಹಾಳು ಮಾಡುತ್ತಿರುವ ಮದ್ಯ ವ್ಯಸನದಿಂದ ಮುಕ್ತಗೊಡಿಸುವ ಇಂತಹ ಕಾರ್ಯಕ್ರಮಗಳು ಸದ್ಬಳಕೆಯಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ. ವರದರಾಜ ವಹಿಸಿದ್ದರು. ಜಿಲ್ಲಾ ಜನಜಾಗೃತಿಯ ಅಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಜಿಲ್ಲಾ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲಿತಾಯ, ತಾಲೂಕು ಯೋಜನಾಧಿಕಾರಿ ಗಣೇಶ್ ನಾಯಕ್, ಬಸವರಾಜು, ಶಿಬಿರಾಧಿಕಾರಿ ದೇವಿಪ್ರಸಾದ್, ಮಾಧವ ನಾಯಕ್, ಆರೋಗ್ಯ ಸಹಾಯಕ ಡಾ. ವೆಂಕಟೇಶ್, ನವೀನ್, ಮಧುಸೂದನ್, ಪ್ರದೀಪ್ ಭಾಗವಹಿಸಿದ್ದರು.

ಮದ್ಯಪಾನ ನಿಷೇಧದ ಕೊಂಚ ಸಡಿಲಿಕೆ

ಅಹಮದಾಬಾದ್: ಪಾನ್ ನಿಷೇಧ ಇರುವ ಗುಜರಾತ್‌ನಲ್ಲಿ ನಿಯಮವನ್ನು ಕೊಂಚ ಸಡಿಲಿಸಲಾಗಿದೆ. ಗಾಂಧಿನಗರದ ಬಳಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಔದ್ಯಮಿಕ ನಗರವಾದ 'ಗಿಫ್ಟ್‌ಸಿಟಿ'ಯಲ್ಲಿ (ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌ ಸಿಟಿ) ಮದ್ಯಸೇವನೆಗೆ ಅನುಮತಿ ನೀಡಲಾಗಿದೆ. ಗಿಫ್ಟ್‌ ಸಿಟಿಯಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಜಾಗತಿಕ ಪರಿಸರವನ್ನು ಸೃಷ್ಟಿ ಮಾಡುವುದಕ್ಕಾಗಿ ಈ ಅನುಮತಿ ನೀಡಲಾಗಿದೆ. ಆದರೆ ಈ ನಗರದ ಹೊರಭಾಗದಲ್ಲಿ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗಿದೆ.

ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಗಿಫ್ಟ್‌ ಸಿಟಿಯ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಲ್ಲಿ ಮದ್ಯ ಸೇವಿಸಬಹುದಾಗಿದೆ. ಒಂದು ಹೊರ ರಾಜ್ಯದ ಉದ್ಯೋಗಿಗಳು/ ಉದ್ಯಮಪತಿಗಳು ಗಿಫ್ಟ್‌ ಸಿಟಿಗೆ ಭೇಟಿ ನೀಡಿದರೆ ಇಲ್ಲಿರುವ ಉದ್ಯೋಗಿಗಳ ಜೊತೆ ಮಾತ್ರ ಮದ್ಯ ಸೇವನೆಗೆ ಅವಕಾಶ ಒದಗಿಸಲಾಗಿದೆ.

Bengaluru : ಪಾರ್ಟಿಯಲ್ಲಿ ಎಣ್ಣೆ ಜಾಸ್ತಿ ಬೇಡವೆಂದ ಗೆಳೆಯನನ್ನೇ ಕೊಲೆಗೈದ ಸ್ನೇಹಿತ!

ಆಕ್ಷೇಪ-ಸಮರ್ಥನೆ:

ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಗಿಫ್ಟ್‌ ಸಿಟಿಯಲ್ಲಿ ಮದ್ಯ ನಿಷೇಧ ತೆರವು ಮಾಡಿರುವುದಾಗಿ ಘೋಷಿಸಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಏಕತಾ ಪ್ರತಿಮೆಯ ಬಳಿ ಹಾಗೂ ಸೂರತ್‌ನ ಡೈಮಂಡ್‌ ನಗರಗಳ ಬಳಿ ಮದ್ಯ ನಿಷೇಧವನ್ನು ತೆರವು ಮಾಡುತ್ತಾರೆ. ಇದು ರಾಜ್ಯದ ಯುವಕರನ್ನು ಹಾಳು ಮಾಡುತ್ತದೆ ಎಂದು ಕಿಡಿಕಾರಿವೆ.

ಆದರೆ ವಿದೇಶದಿಂದ ಹಾಗೂ ಹೊರರಾಜ್ಯಗಳಿಂದ ಗಿಫ್ಟ್‌ ಸಿಟಿಗೆ ಹೆಚ್ಚು ಜನರು ಬರುತ್ತಾರೆ. ಅವರ ದೇಶ/ರಾಜ್ಯಗಳಲ್ಲಿ ಮದ್ಯ ನಿಷೇಧ ಇರುವುದಿಲ್ಲ ಹಾಗೂ ಅವರು ಮದ್ಯ ಸೇವನೆಗೆ ಒಗ್ಗಿಕೊಂಡಿರುತ್ತಾರೆ. ಹೀಗಾಗಿ ಅವರ ಅನುಕೂಲಕ್ಕೋಸ್ಕರ ಗಿಫ್ಟ್‌ ಸಿಟಿಗೆ ಸೀಮಿತವಾಗಿ ಮದ್ಯ ನಿಷೇಧ ತೆರವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಜರಾತ್ ಸರ್ಕಾರ ಸ್ಪಷ್ಟಪಡಿಸಿದೆ.

click me!