ಅನೇಕ ಅಧಿಕಾರಿಗಳು ತಮ್ಮ ಇಲಾಖೆ ವರದಿಯನ್ನು ಇಂಗ್ಲಿಷ್‌ನಲ್ಲೇ ಕೊಟ್ಟಿದ್ದು, ನನಗೊಬ್ಬನಿಗೆ ತಿಳಿಯುತ್ತದೆ. ಇನ್ನೊಬ್ಬರಿಗೆ ತಿಳಿಯಲು ಕನ್ನಡ ಬಳಸಬೇಕೆಂಬ ಪರಿಜ್ಞಾನ ಬೇಡವೇ ಕಡತಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಕೊಡಬೇಕು ಎಂದು ಇಂಗ್ಲಷ್‌ನಲ್ಲಿ ವರದಿ ನೀಡಿದ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದ ಶಾಸಕ ಬಿ.ಆರ್.ಪಾಟೀಲ.
ಆಳಂದ(ಜೂ.10): ಹಿಂದಿನ ಶಾಸಕರ ಸೀಫಾರಸ್ಸಿನಿಂದ ಬಂದ ಅಧಿಕಾರಿಗಳು ನಿಮ್ಮ ದಾರಿ ನೋಡಿಕೊಳ್ಳಿ, ಇಲ್ಲಾ ನಾನೇ ಜಾಗ ಖಾಲಿ ಮಾಡಿಸುತ್ತೇನೆ ಎಂದು ಹೇಳುವ ಮೂಲಕ ನೂತನ ಶಾಸಕ ಬಿ.ಆರ್.ಪಾಟೀಲ ಅವರು ಇಂದಿಲ್ಲಿ ವಿವಿಧ ಇಲಾಖೆಯ ಅಧಿಕಾರಿ ಸಮೂಹಕ್ಕೆ ಬಿಗ್ ಶಾಕ್ ನೀಡಿದ ಪ್ರಸಂಗ ನಡೆಯಿತು. ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯ ಮಾಣಿಕರಾವ್ ದೇಶಮುಖ ಸಭಾಂಗಣದಲ್ಲಿ ಶುಕ್ರವಾರ ಕರೆದ ಕೆಡಿಪಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿ ಒಟ್ಟು 16 ಅಧಿಕೃತ ಬಾರ್‌ಗಳು ಮತ್ತು 4 ಬಾರ್ ಮತ್ತು ರೆಸ್ಟಾರೆಂಟ್ ಇದ್ದು, ಆದರೆ ಇದಕ್ಕೆ ಹೊರತಾಗಿಯೂ ಗ್ರಾಮೀಣ ಪ್ರದೇಶದ ಹೊಟೆಲ್, ಕಿರಾಣಿ ಅಂಗಡಿ, ಪಾನ್‌ಶಾಪ್‌ಗಳಲ್ಲಿ ಮದ್ಯ ಮಾರಾಟ ನಡೆದಿದೆ. ಕುಡಿತದಿಂದಾಗಿ ಕುಟುಂಬಗಳು ಬೀದಿಪಾಲಾಗುತ್ತಿವೆ. ಜನ ರೋಷಿ ಹೋಗಿದ್ದಾರೆ. ಇದಕ್ಕೆ ಕಡಿವಾಣ ಹಾಕುತ್ತಿಲ್ಲ. ಏನು ಕತ್ತೆ ಕಾಯುತ್ತಿದ್ದಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಅಬ್ಕಾರಿ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ಶಾಸಕರು, ಕೆಲಸ ಮಾಡಲಾಗಿದ್ದರೆ ಜಾಗ ಖಾಲಿ ಮಾಡಿ, ಪರಿಸ್ಥಿತಿ ನೆಟ್ಟಗಿರಲ್ಲ ನಾನೇ ಕ್ರಮ ಜರುಗಿಸಬೇಕಾದಿತು ಎಂದು ಎಚ್ಚರಿಸಿದರು.
undefined
ಕಲಬುರಗಿ: ಬಿತ್ತನೆ ಬೀಜ ತಂದು ಮಳೆ ನಿರೀಕ್ಷೆಯಲ್ಲಿ ರೈತ
ಪೊಲೀಸ್ ಇಲಾಖೆಯಲ್ಲೂ ಅಷ್ಟೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು, ಠಾಣೆಯಲ್ಲಿರುವ ನಾಲ್ವರು ಪೇದೆಗಳನ್ನು ತೆಗೆದುಹಾಕಬೇಕು ಇವರಿಂದಲೇ ಇಲಾಖೆಗೆ ಕೆಟ್ಟಹೆಸರು ಬರುತ್ತಿದೆ ಎಂದು ಹಾಜರಿದ್ದ ಸಿಪಿಐ ಮಹಾದೇವ ಪಂಚಮುಖಿ ಅವರನ್ನು ಹೇಳಿದರು.
ಅನೇಕ ಅಧಿಕಾರಿಗಳು ತಮ್ಮ ಇಲಾಖೆ ವರದಿಯನ್ನು ಇಂಗ್ಲಿಷ್‌ನಲ್ಲೇ ಕೊಟ್ಟಿದ್ದು, ನನಗೊಬ್ಬನಿಗೆ ತಿಳಿಯುತ್ತದೆ. ಇನ್ನೊಬ್ಬರಿಗೆ ತಿಳಿಯಲು ಕನ್ನಡ ಬಳಸಬೇಕೆಂಬ ಪರಿಜ್ಞಾನ ಬೇಡವೇ ಕಡತಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಕೊಡಬೇಕು ಎಂದು ಇಂಗ್ಲಷ್‌ನಲ್ಲಿ ವರದಿ ನೀಡಿದ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.
ಹಾಜರಿದ್ದ ಸಹಾಯಕ ಕೃಷಿ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ಅವರು ವರದಿ ಮಂಡಿಸುವಾಗ ಚರ್ಚಿಸಿದ ಶಾಸಕರು, ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮುಂಗಾರು ಹಂಗಿಮಿನ ಹೊಸ್ತಲಿಲ್ಲಿದ್ದೇವೆ. ಯಾವುದೇ ಕಾರಣಕ್ಕೂ ರೈತರಿಗೆ ಬೀಜ, ರಸಗೊಬ್ಬರ ಕೊರತೆ ಕಾಡಬಾರದು. ಕಳಪೆ ಬೀಜ, ರಸಗೊಬ್ಬರ ಪೂರೈಕೆಯಾಗದಂತೆ ಕ್ರಮ ಕೈಗೊಳ್ಳಿ ಹೆಸರು, ಉದ್ದು, ಸೊಯಾಬಿನ್, ಅಲಸಂದಿ ಬೀಜ, ಅದಕ್ಕೆ ಬೇಕಾಗುವ ಅಗತ್ಯ ಪೋಷಕಾಂಶ, ರಸಗೊಬ್ಬರ ದಾಸ್ತಾನು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಬೇಕು. ಬೀಜೋಪಚಾರಗಳ ಕುರಿತು ಗÜಮನ ಹರಿಸಬೇಕು. ಬಿತ್ತನೆ ಬೀಜ ಕೊಡುವಾಗಲೇ ರೈತರಿಗೆ ಬೀಜೋಪಚಾರ ಮಾಡುವಂತೆ ಹೇಳಬೇಕು. ಕಳೆದ ಬಾರಿ ನೆಟೆ ರೋಗದಿಂದ ತೊಗರಿ ಭಾರೀ ಪ್ರಮಾಣದಲ್ಲಿ ಹಾಳಾಗಿದೆ. ತಾಲೂಕಿನಲ್ಲಿಯೇ ಹೆಚ್ಚಿನ ಹಾನಿಯಾಗಿರುವುದು ಗೊತ್ತಿರುವ ವಿಚಾರ. ಈ ಬಾರಿ ನೆಟೆರೋಗ ಬಾರದಂತೆ ತಡೆಯುವ ತೊಗರಿ ಬೀಜ ಮಾರಾಟಕ್ಕೆ ತನ್ನಿ ಎಂದು ಅವರು ಸೂಚಿಸಿದರು.
ಡಿಎಪಿ, ಯೂರಿಯಾ, ಕಾಂಪ್ಲೆಕ್ಸ್ ಗೊಬ್ಬರಗಳ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚಿನ ದಾಸ್ತಾನು ಇರುವಂತೆ ನೋಡಿಕೊಳ್ಳಿ. ರೈತರಿಗೆ ಕೊನೆಯ ಗಳಿಗೆಯಲ್ಲಿ ಪಹಣಿ ತನ್ನಿ, 2 ಚೀಲ, ಒಂದು ಚೀಲ ಕೊಂಡೊಯ್ಯಿರಿ ಎಂದು ಸತಾಯಿಸುತ್ತೀರಿ. ಅದು ಆಗಬಾರದು. ಖಾಸಗಿಯಲ್ಲಿಯೂ ಮಳಿಗೆ ಮಾಲಿಕರು ರೈತರಿಗೆ ಹೆಚ್ಚಿನ ಬೆಲೆಗೆ ಯೂರಿಯಾ, ಡಿಎಪಿ ಮಾರುವ ದೂರುಗಳಿವೆ. ಆ ಕುರಿತು ಪರಿಶೀಲನೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು. ಕಿಣ್ಣಿಸುಲ್ತಾನ ಮತ್ತು ಕೊಡಲಹಂಗರಗಾ ಗ್ರಾಪಂ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ಏಕೆ ಬಂದಿಲ್ಲ ಬರುವಂತೆ ಕೆಲಸ ಮಾಡಿ ಎಂದರು.
ಜಲಜೀವನ ಮಿಷನ್:
ಜಲ್‌ಜೀವನ್ ಮಿಷನ್ ಕಾಮಗಾರಿ ಮಾಹಿತಿ ಕಲೆಹಾಕಿದ ಶಾಸಕರು, ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕುರಿತು ಸರಿಪಡಿಸಬೇಕು ಎಂದು ಎಇಇ ಚಂದ್ರಮೌಳಿ ಅವರನ್ನು ಸಲಹೆ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ಹದಗೆಟ್ಟಿದೆ. ಪಂಚಾಯಿತಿಯಿಂದಲೇ ನಿರ್ವಹಣೆ ಮಾಡಬೇಕು ಎಂದು ಶಾಸಕರು ಸೂಚಿಸಿದರು.
ಶಿಕ್ಷಣ ಇಲಾಖೆ:
ಶಾಲೆಗಳು ಅರಂಭವಾಗಿವೆ. ಅದೆಷ್ಟುಶಾಲೆಗಳ ಕೋಣೆಗಳು ಶಿಥಿಲಗೊಂಡಿವೆ. ದುರಸ್ಥಿ ಕೈಗೊಂಡ ಕ್ರಮಗಳೇನು? ಬಹಳ ಕಡೆಗೆ ಇಂತಹ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ತಕ್ಷಣ ಶಿಥಿಲ ಕೋಣೆಗಳ ದುರಸ್ಥಿಗೆ ಮುಂದಾಗಬೇಕು. ಖುದ್ದು ಹೋಗಿ ಭೇಟಿ ನೀಡಿ ವರದಿ ಸಿದ್ಧಮಾಡಿರಿ. ಮಕಳ ಸುರಕ್ಷತೆ ಮುಖ್ಯವಾಗಿದೆ, ಶಾಲೆಗೆ ಹೋಗದ ಶಿಕ್ಷಕರ ಮೇಲೆ ನಿರ್ಧಾಕ್ಷ್ಯಿಣವಾಗಿ ಕ್ರಮ ಜರುಗಿಸಬೇಕು ಎಂದು ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ ಅವರಿಗೆ ಸೂಚಿಸಿದರು.
ಶಾಲಾ ಮಕಳ ಸಮವಸ್ತ್ರ ಪಠ್ಯಪುಸ್ತಕ ವಿತರಣೆಯಲ್ಲಿ ತೊಂದರೆಯಾಗಬಾರದು. ತಕ್ಷಣ ಗಮನಹರಿಸಿ ಎಲ್ಲವೂ ಸರಿಯಾಗಿ ಹಂಚಿಕೆಯಾಗಬೇಕು. ಬಿಸಿಯೂಟದಲ್ಲಿಯೂ ತೊಂದರೆ ಕಾಣದಂತೆ ಕ್ರಮ ಕೈಗೊಳ್ಳಿ. ಶಾಲೆ ಆರಂಭವಾಗುವುದರ ಜೊತೆಗೆ ಬಿಸಿಯೂಟವೂ ಆರಂಭಗೊಳ್ಳಬೇಕು ಎಂದು ಅವರು ಹೇಳಿದರು.
ಕಲಬುರಗಿ: 940 ಕೋಟಿ ಖರ್ಚಾದರೂ ಸಿಗುತ್ತಿಲ್ಲ ನೀರು
ಸಭೆಯ ಮಧ್ಯಾಹ್ನ ಆಯೋಜಿಸಿದ್ದರಿಂದ ಸಮಯಕೊರತೆಯಾಗಿ ಇನ್ನೂಳಿದ ಇಲಾಖೆಯ ವಿಸ್ತತವಾಗಿ ಪರದಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು, ಸರ್ಕಾರಿ ಯೋಜನೆ ಮತ್ತು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಪಾರದರ್ಶಕ ಮತ್ತು ಗುಣಮಟ್ಟತೆ ಕಾಪಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ತಾಪಂ ಇಒ ವಿಲಾಸರಾಜ್ ಪ್ರಸನ್, ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಜಿಪಂ ಎಇಇ ನಾಗಮುರ್ತಿ ಶೀಲವಂತ, ಎಇ ಲಿಂಗರಾಜ ಪೂಜಾರಿ, ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ, ಮಿನುಗಾರಿಕೆ ವಿಭಾಗಿಯ ಅಧಿಕಾರಿ ಶಂಕರ ಗೊಂದಳಿ, ಪ್ರಾದೇಶಿಕ ಅರಣ್ಯಾಧಿಕಾರಿ ಜಗನಾಥ ಕೊರಳ್ಳಿ, ತೋಟಗಾರಿಕೆ ಅಧಿಕಾರಿ ಶಂಕರಗೌಡ ಪಾಟೀಲ, ಬಿಸಿಎಂ ಅಧಿಕಾರಿ ಬಸವರಾಜ ಕಾಳೆ, ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಸಂಜಯ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಯಶೋಧ, ಸಹಾಯಕ ಅಭಿಯಂತರ ಜಗದೀಶ ಹಿರೇಮಠ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.