ಶಿಕ್ಷಕ ದಿನಾಚರಣೆಯಂದೆ ಮರೆಯಾದ ಆದರ್ಶ ಬಿ.ಜಿ.ಅಣ್ಣಿಗೇರಿ

By Web DeskFirst Published Sep 5, 2019, 10:32 PM IST
Highlights

ಶಿಕ್ಷಕರ ದಿನಾಚರಣೆಯಂದೆ ಹಿರಿಯ ಶಿಕ್ಷಕ ನಿಧನ/ ಮರೆಯಾದ ಹಿರಿಯ ಶಿಕ್ಷಕ ಗದಗದ ಬಿ.ಜಿ.ಅಣ್ಣಿಗೇರಿ(89)/ ಉತ್ತರ ಕರ್ನಾಟಕದ ಸಾವಿರಾರು ಮಕ್ಕಳಿಗೆ ಜ್ಞಾನಾರ್ಜನೆ ಮಾಡಿದ್ದ ಚೇತನ

ಗದಗ[ಸೆ. 05]  ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನೀಡುತ್ತಾ ಅಕ್ಷರ ದಾಸೋಹ ನಡೆಸುತ್ತಿದ್ದ ಬಡ ಮಕ್ಕಳ ಆಶಾ ಕಿರಣ... ನಿವೃತ್ತ ಶಿಕ್ಷಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಜಿ.ಅಣ್ಣಿಗೇರಿ(89) ಅವರು ಶಿಕ್ಷಕ ದಿನಾಚರಣೆಯಂದೇ ಕೊನೆ ಉಸಿರೆಳೆದಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿಯೇ ಮದುವೆಯಾಗದೇ ಗದಗ ನಗರದಲ್ಲಿ ಆಶ್ರಮ ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳ ಭವಿಷ್ಯನ ಉಜ್ವಲ ಮಾಡಿದ್ದ ಹಿರಿಯರು ಆದರ್ಶಗಳನ್ನು ಬಿಟ್ಟು ನಡೆದಿದ್ದಾರೆ.

ಬಿ.ಜಿ.ಅಣ್ಣಿಗೇರಿ ಅವರ ನಿಧನದ ವಾರ್ತೆ ಕೇಳಿ ಮಕ್ಕಳು ರೋದಿಸುತ್ತಿರುವ ದೃಶ್ಯ ಮನಕಲಕುವಂತೆ ಇತ್ತು. ಗದಗ ಮಾತ್ರವಲ್ಲ ಉತ್ತರ ಕರ್ನಾಟಕ ಹಲವಾರು ಜಿಲ್ಲೆಗಳ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಉಜ್ವಲ ಭವಿಷ್ಯವನ್ನು ರೂಪಿಸಿದ ಕಲಿಯುಗದ ಶಿಕ್ಷಣ ದಾಸೋಹಿ  ಬಿ.ಜಿ.ಅಣ್ಣಿಗೇರಿ ಎಂದರೆ ಉತ್ತರ ಕರ್ನಾಟಕದಲ್ಲಿ ಮನೆ ಮಾತು.  1930ರ ಜುಲೈ 23 ರಂದು ಜನಿಸಿದ್ದ  ಶಿಕ್ಷಣ ಪ್ರೇಮಿ ಇಂದು ನಮ್ಮೊಂದಿಗೆ ಇಲ್ಲ.

ಶಿಕ್ಷಕರ ಸಂಬಳ ಕೇಳಿ ತಮಾಷೆ ಮಾಡಿದ ಸಿದ್ದರಾಮಯ್ಯ!

ಗದಗ ಜಿಲ್ಲೆಯ ರೋಣ ತಾಲೂಕಿನ ಮುದೇನಗಡಿ ಅವರ ಸ್ವಂತ ಗ್ರಾಮ. ಗದಗ ನಗರದಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ್ದ ಅಣ್ಣಿಗೇರಿ  1954ರಿಂದ ಬಡ ಮಕ್ಕಳಿಗೆ ನಿರಂತರ ವಸತಿ ಮತ್ತು ಶಿಕ್ಷಣ (ಟ್ಯೂಷನ್) ನೀಡುತ್ತಾ ಬಂದರು. ತಮ್ಮ ವೇತನ ಹಾಗೂ 1988 ರಲ್ಲಿ ನಿವೃತ್ತಿ ಯಾದ ನಂತರ ಇಲ್ಲಿಯವರೆಗೂ ತಮ್ಮ ನಿವೃತ್ತಿ ವೇತನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಹಿರಿಯ ಚೇತನ ಮರೆಯಾಗಿದೆ.

click me!