ಮುಂದಿನ 2 ವರ್ಷಗಳಲ್ಲಿ ಖರ್ಗೆ ಪ್ರಧಾನಿ ಆಗ್ತಾರೆ: ಮಾಜಿ ಸಚಿವ ಚಿಂಚನಸೂರು ಭವಿಷ್ಯ!

By Ravi Janekal  |  First Published Jul 9, 2024, 4:22 PM IST

ಮುಂದಿನ ಎರಡು ವರ್ಷಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗ್ತಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭವಿಷ್ಯ ನುಡಿದಿದ್ದಾರೆ.


ಯಾದಗಿರಿ (ಜು.9): ಮುಂದಿನ ಎರಡು ವರ್ಷಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗ್ತಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭವಿಷ್ಯ ನುಡಿದಿದ್ದಾರೆ.

ಇಂದು ಯಾದಗಿರಿ(yadgir) ಜಿಲ್ಲೆಯ ಗುರುಮಠಕಲ್‌(Gurumatkal)ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ ಮುಂದಿನ ಎರಡು ವರ್ಷಗಳಲ್ಲಿ ಬದಲಾವಣೆಯಾಗಲಿದೆ. ಆ ಮೂಲಕ ಮಲ್ಲಿಕಾರ್ಜುನ ಖರ್ಗೆ(Mallikarjun kharge)  ಪ್ರೈಮ್ ಮಿನಿಷ್ಟರ್ ಆಫ್ ಇಂಡಿಯಾ ಆಗುವ ಯೋಗವಿದೆ ಎಂದಿದ್ದಾರೆ.

Tap to resize

Latest Videos

 

ಗ್ರಾಮ ಪಂಚಾಯತಿಗಳಿಗೆ ರಾಜ್ಯ ಸರ್ಕಾರ ಡೆಂಘೀ ಅಲರ್ಟ್: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾದರೆ ಕಲ್ಯಾಣ ಕರ್ನಾಟಕ(Kalyana karnataka)ದ ಭಾಗ ಅಭಿವೃದ್ಧಿಯಾಗಲಿದೆ. ಅಲ್ಲದೆ ಕನ್ನಡಿಗರೊಬ್ಬರು ಪ್ರಧಾನಿಯಾದರೆ ರಾಜ್ಯಕ್ಕೆ ಸಂತೋಷದ ವಿಚಾರ. ಪ್ರಸ್ತುತ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(pm Narendra modi) ನೇತೃತ್ವದ ಸರ್ಕಾರ ಕೇವಲ ಎರಡು ವರ್ಷದ ಸರ್ಕಾರ ಮಾತ್ರ. ಮುಂದಿನ ಎರಡು ವರ್ಷಗಳಲ್ಲಿ ಪತನವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ.

click me!