ಮಂಜಿನ ನಗರಿ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿಕೊಂಡು 19 ವರ್ಷದ ಯುವತಿ ಸೇರಿದಂತೆ ಮೂವರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದ ನಕಲಿ ದಂಧೆಕೋರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೊಡಗು (ಜು.09): ಮಳೆಗಾಲ ಆರಂಭವಾಗುತ್ತಿದ್ದಂತೆ ಮಂಜಿನ ನಗರಿ ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಕೂರ್ಗ್ ಪ್ರವಾಸಕ್ಕೆ ಬರುವ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿಕೊಂಡು 19 ವರ್ಷದ ಯುವತಿ ಸೇರಿದಂತೆ ಮೂವರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದ ನಕಲಿ ದಂಧೆಕೋರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೌದು, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಗ್ರಾಹಕರನ್ನು ಕರೆಸಿಕೊಂಡು ಮೋಸ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್(29), ಸಂದೀಪ್ ಕುಮಾರ್, ರಾಕೇಶ್.ಸಿ.ಬಿ,(24), ಜಯಲಕ್ಷ್ಮೀ.ಕೆ(29), ಸಹನ.ಎಸ್ (19), ಪಲ್ಲವಿ(30) ಬಂಧಿತ ಆರೋಪಿಗಳು ಆಗಿದ್ದಾರೆ. ಗುಂಪು ಗುಂಪಾಗಿ ಬರುವ ಯುವಕರು ಹಾಗೂ ಇತರೆ ಪುರುಷ ಪ್ರವಾಸಿಗರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ನಿಮಗೆ ಲಾಡ್ಜ್‌ನಲ್ಲಿ ಹುಡುಗಿಯರನ್ನು ಸಪ್ಲೈ ಮಾಡುವುದಾಗಿ ಹೇಳಿ ಅವರಿಂದ ಮಾತನಾಡಿಸಿ ಹಣ ಹಾಕಿಸಿಕೊಂಡು ಪಂಗನಾಮ ಹಾಕುತ್ತಿದ್ದರು. ಪ್ರತಿನಿತ್ಯ ಹತ್ತಾರು ಗ್ರಾಹಕರಿಗೆ ಸಾವಿರಾರು ರೂ. ಹಣವನ್ನು ವಂಚನೆ ಮಾಡಿ ಸುಲಿಗೆ ಮಾಡುತ್ತಿದ್ದರು.
undefined
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ; ಡಿಕೆಶಿ ನಿಯೋಗದಿಂದ ಸಿಎಂಗೆ ಪತ್ರ
ಕುಶಾಲನಗರದ ಖಾಸಗಿ ಲಾಡ್ಜ್ ಹೆಸರು ಹೇಳಿ ನಿಮಗೆ ಹುಡುಗಿಯರನ್ನು ಕಳಿಸುವುದಾಗಿ ಹೇಳಿ ಗ್ರಾಹಕರನ್ನು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದ ತಂಡವು, ಬಳಿಕ ಪದೇ ಪದೇ ದುಡ್ಡು ಹಾಕಿಸಿಕೊಂಡು ಹಲವರಿಗೆ ವಂಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಿನ ಆರು ಜನರು ಸೇರಿದಂತೆ ಒಟ್ಟು 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 2 ಕಾರು 17 ಮೊಬೈಲ್, ಒಂದು ಟ್ಯಾಬ್, ಒಂದು ಲ್ಯಾಪ್‌ಟಾಪ್ ಹಾಗೂ ರೂ. 24,800 ನಗದು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಾರಾಜನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಮಾಡಲಾಗಿದೆ.