ಸೇನೆ ಸೇರ ಬಯಸುವವರಿಗೆ ಉಚಿತ ತರಬೇತಿ, ರಾಜ್ಯಕ್ಕೆ ಮಾದರಿ ಉಡುಪಿ ಯುವಕರ ಅಗ್ನಿಸೇತು ಯೋಜನೆ

By Gowthami KFirst Published Sep 6, 2022, 5:26 PM IST
Highlights

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಪರ ವಿರೋಧ ವಾದ ವಿವಾದಗಳು ನಡೆಯುತ್ತಲೇ ಇದೆ. ಅದೇನೇ ಇರಲಿ ಉಡುಪಿಯಲ್ಲಿ ಮಾತ್ರ ಸೈಲೆಂಟಾಗಿ ಯುವಕರ ತಂಡವೊಂದು ವಿಶಿಷ್ಟ ಕಾರ್ಯದಲ್ಲಿ ನಿರತವಾಗಿದೆ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.6): ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಪರ ವಿರೋಧ ವಾದ ವಿವಾದಗಳು ನಡೆಯುತ್ತಲೇ ಇದೆ. ಅದೇನೇ ಇರಲಿ ಉಡುಪಿಯಲ್ಲಿ ಮಾತ್ರ ಸೈಲೆಂಟಾಗಿ ಯುವಕರ ತಂಡವೊಂದು ವಿಶಿಷ್ಟ ಕಾರ್ಯದಲ್ಲಿ ನಿರತವಾಗಿದೆ. ಅಗ್ನಿಪಥ್ ಯೋಜನೆಗೆ ಯುವಕರನ್ನು ಆಕರ್ಷಿಸಲು ಅಗ್ನಿಸೇತು ತರಬೇತಿ ಕಾರ್ಯಕ್ರಮ ಆರಂಭಿಸಿದೆ. ದೇಶಭಕ್ತ ಯುವಕರನ್ನು ಸೈನ್ಯಕ್ಕೆ ಸೆಳೆಯಲು ಅಗ್ನಿಪಥ್ ಯೋಜನೆ ಆರಂಭಿಸುವುದಾಗಿ ಕೇಂದ್ರ ಸರಕಾರ ಘೋಷಿಸಿತ್ತು. ಈ ಘೋಷಣೆಯಾದ ಬೆನ್ನಲ್ಲೇ ಅನೇಕ ಟೀಕೆಗಳು ಎದುರಾಗಿತ್ತು. ಅನೇಕ ಮಂದಿ ಪರವಿರೋಧ ವಾದ ವಿವಾದ ಆರಂಭಿಸಿದ್ದರು. ಆದರೆ ಉಡುಪಿಯ ಟೀಮ್ ನೇಶನ್ ಫಸ್ಟ್ ತಂಡದವರು ಮಾತಿಗಿಂತ ಕೃತಿ ಮೇಲು ಎಂದು ಸೈಲೆಂಟಾಗಿ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ್ದಾರೆ. ಅಗ್ನಿಪಥ್ ಯೋಜನೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗ್ನೀವೀರರಾಗಲು ಬಯಸುವ ಯುವಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ನಾಡಿನ ವಿವಿಧ ಭಾಗಗಳಿಂದ ಬಂದ 44 ಮಂದಿ ಯುವಕರ ತಂಡ ಹಗಲಿರಳು ತರಬೇತಿ ಪಡೆಯುತ್ತಿದೆ.

ಕೇವಲ ಉಡುಪಿ ಮಾತ್ರವಲ್ಲದೆ ರಾಜ್ಯದ ನಾನಾ ಜಿಲ್ಲೆಗಳಿಂದ ಯುವಕರನ್ನು ಕರೆಸಿಕೊಳ್ಳಲಾಗಿದೆ. ನಿವೃತ್ತ ಯೋಧರನ್ನು ತರಬೇತಿಗೆ ವ್ಯವಸ್ಥೆ ಗೊಳಿಸಲಾಗಿದೆ. ಆಟೋಟ ಸ್ಪರ್ಧೆ ದೈಹಿಕ ಕ್ಷಮತೆ ಹಾಗೂ ಥಿಯರಿ ಪರೀಕ್ಷೆ ಎದುರಿಸಲು ಬೇಕಾದ ಎಲ್ಲಾ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಅಗ್ನಿಪಥ್ ಯೋಜನೆಗೆ ಯುವಕರನ್ನು ತಯಾರಿಗೊಳಿಸುವ ಸೇತುವೆಯಾಗಿ ಈ ಅಗ್ನಿಸೇತು ಕಾರ್ಯಕ್ರಮ ರೂಪಗೊಂಡಿದೆ

 

 ನೀವು ವೀರ್‌ ಆಗಿರಬಹುದು, ಅಗ್ನಿವೀರ್‌ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್‌!

ಕರಾವಳಿ ಭಾಗದ ಯುವಕರು ಸೈನ್ಯಕ್ಕೆ ಸೇರ್ಪಡೆಯಾಗುವುದಿಲ್ಲ ಎನ್ನುವ ಆರೋಪವಿದೆ. ಈ ಆರೋಪವನ್ನು ಹೋಗಲಾಡಿಸುವುದು ಈ ತರಬೇತಿ ಶಿಬಿರದ ಮೂಲ ಉದ್ದೇಶ. ಕರಾವಳಿ ಭಾಗದ ಯುವಕರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಸಲುವಾಗಿ ನೇಷನ್ ಫಸ್ಟ್ ತಂಡ ಈ ಮಹತ್ವದ ಕಾರ್ಯ ಕೈಗೊಂಡಿದೆ. 

Haveri Agnipath Rally; ಅಗ್ನಿವೀರರ ನೇಮಕಕ್ಕೆ ಭರ್ಜರಿ ಸಿದ್ಧತೆ, ಸಾರಿಗೆ ವ್ಯವಸ್ಥೆ

ವಿದ್ಯಾರ್ಥಿ ಜೀವನದಲ್ಲಿ ಎಸ್‌ಸಿಸಿ ತರಬೇತು ಪಡೆದ ಯುವಕರಲ್ಲಾ ಸೇರಿ ಈ ನೇಶನ್ ಫಸ್ಟ್ ಎನ್ನುವ ತಂಡ ಕಟ್ಟಿಕೊಂಡಿದ್ದಾರೆ. ಶಿಕ್ಷಣದ ನಂತರವೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ಈ ತಂಡ ರೂಪಗೊಂಡಿದೆ. ದೇಶಭಕ್ತ ಯುವಕರನ್ನು ಒಟ್ಟು ಗೂಡಿ ನಾನಾ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಈ ಕಾರಣದಿಂದ ಅಗ್ನಿಸೇತು ತರಬೇತಿ ಶಿಬಿರವು ರಾಜ್ಯಕ್ಕೆ ಮಾದರಿಯ ಎನಿಸಿದೆ. ಈ ಬಾರಿ ಅತ್ಯಂತ ಯಶಸ್ವಿಯಾಗಿ ಶಿಬಿರ ನಡೆದಿದ್ದು ಮುಂದಿನ ವರ್ಷಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯನ್ನು ತಂಡ ಹೊಂದಿದೆ.

ಇನ್ನು ಇದಕ್ಕೆ ಪೂರಕ ಎಂಬಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಯುವಕರಿಗೆ ಸೈನಿಕ ಪೂರ್ವ ತರಬೇತಿ ನೀಡಲು ಉಡುಪಿಯಲ್ಲಿ ಕೋಟಿ ಚೆನ್ನಯ್ಯ ತರಬೇತಿ ಶಾಲೆ, ದ.ಕನ್ನಡ ಜಿಲ್ಲೆಯಲ್ಲಿ ವೀರ ರಾಣಿ ಅಬ್ಬಕ್ಕ ತರಬೇತಿ ಶಾಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಂಜಾ ನಾಯ್ಕ್ ತರಬೇತಿ ಶಾಲೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ವೀರವ್ಯಕ್ತಿಗಳ ಹೆಸರಿನಲ್ಲಿ ಉಚಿತ ಊಟ - ವಸತಿಯೊಂದಿಗೆ ತರಬೇತಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದಿದ್ದಾರೆ. ಅವರು ಸೆ.5 ರಂದು ಕೋಟಿ ಚೆನ್ನಯ - ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಉದ್ಘಾಟಿಸಿ ಈ ವಿಚಾರವನ್ನು ಬಹಿರಂಗಪಡಿಸಿದ್ದರು.

click me!