ಸರ್ವರೋಗಕ್ಕೂ ಅಗ್ನಿಹೋತ್ರ ಹೋಮ ಮದ್ದು : ಗುರೂಜಿ

By Kannadaprabha News  |  First Published Aug 2, 2023, 4:52 AM IST

ಸನಾತನ ಕಾಲದಿಂದಲೂ ರೂಢಿಸಿಕೊಂಡು ಬಂದಿರುವ ಹೋಮಗಳಲ್ಲಿ ಅಗ್ನಿಹೋತ್ರ ಹೋಮ ಒಂದಾಗಿದ್ದು, ಇದು ಸರ್ವರೋಗಕ್ಕೂ ಮದ್ದು ಎಂದು ಗೋವೋತ್ಪನ್ನದ ವೈದ್ಯರಾದ ಶ್ರೀ ಗುರೂಜಿ ತಿಳಿಸಿದರು.


 ತಿಪಟೂರು :  ಸನಾತನ ಕಾಲದಿಂದಲೂ ರೂಢಿಸಿಕೊಂಡು ಬಂದಿರುವ ಹೋಮಗಳಲ್ಲಿ ಅಗ್ನಿಹೋತ್ರ ಹೋಮ ಒಂದಾಗಿದ್ದು, ಇದು ಸರ್ವರೋಗಕ್ಕೂ ಮದ್ದು ಎಂದು ಗೋವೋತ್ಪನ್ನದ ವೈದ್ಯರಾದ ಶ್ರೀ ಗುರೂಜಿ ತಿಳಿಸಿದರು.

ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗೋ ಸೇವಾಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಹಾಗೂ ಶ್ರೀ ಗುರು ಗೋ ಸೇವಾ ಪರಿವಾರದ ಸಹಯೋಗದೊಂದಿಗೆ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಪಂಚಗವ್ಯ ಔಷಧಗಳ ಸಲಹಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಸನಾತದ ಕಾಲದಿಂದಲೂ ಹೋಮ, ಹವನಾದಿಗಳನ್ನು, ಯಜ್ಞ, ಯಾಗಾದಿಗಳನ್ನು ಮಾಡಿಕೊಂಡು ಬರಲಾಗಿದೆ. ಹೋಮ ಯಾಗಗಳೆಂದರೆ ಕೇವಲ ನಮ್ಮ ಬಯಕೆ, ಆಸೆ, ಆಕಾಂಕ್ಷೆಗಳನ್ನು ದೇವರ ಮುಂದಿಟ್ಟು ನೆರವೇರಿಸು ಎಂದು ಬೇಡಿಕೊಳ್ಳುವುದಲ್ಲ. ಜೀವನದಲ್ಲಿ ದೇವರು ನೀಡಿದ ಪ್ರತಿಯೊಂದು ವಸ್ತುಗಳು ಎಲ್ಲವೂ ನಿನ್ನದೆ ಹಾಗಾಗಿ ಎಲ್ಲವನ್ನು ನಿನಗೆ ಅರ್ಪಿಸುತ್ತೇನೆಂದು ತ್ಯಾಗ ಮಾಡುವ ಮನೋಭಾವವನ್ನು ಹೊಂದಬೇಕು. ವೈದಿಕ ಪರಂಪರೆಯಲ್ಲಿ ಯಾವಾಗಲೂ ಯಾಗ, ಹೋಮ, ಹವನಾದಿಗಳು ನಡೆಯುತ್ತಿತ್ತು. ಆದರೆ ದಿನಕಳೆದಂತೆ ಯಜ್ಞ, ಹೋಮಗಳನ್ನು ಮಾಡಲು ಸಮಯವಿಲ್ಲವೆಂದು ಅಲ್ಲಗಳೆಯುತ್ತಿದ್ದೇವೆ. ಆದರೆ ಈ ಅಗ್ನಿಹೋತ್ರ ಹೋಮವನ್ನು ನೀವು ಯಾವುದೇ ಬ್ರಾಹ್ಮಣರ ಸಹಾಯವಿಲ್ಲದೇ ಅತ್ಯಂತ ಸರಳ ಮತ್ತು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಬಹುದಾಗಿದ್ದು, ಈ ಹೋಮದ ಮಹತ್ವ, ಪ್ರಯೋಜನವನ್ನು ಕೇಳಿ ತಿಳಿದರೆ ನೀವು ಮನೆಯಲ್ಲಿ ಮಾಡದೇ ಇರುವುದಿಲ್ಲ ಎಂದು ತಿಳಿಸಿದರು.

Tap to resize

Latest Videos

ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕ ಮನೋಭಾವ ಕಡಿಮೆಯಾಗುತ್ತಿದ್ದು ಹೋಮ, ಹವನಗಳನ್ನು ಮಾಡಿಸುವವರ ಸಂಖ್ಯೆ ವಿರಳವಾಗುತ್ತಿದೆ. ಈ ಅಗ್ನಿಹೋತ್ರ ಹೋಮ ತುಂಬಾ ಶ್ರೇಷ್ಠವಾಗಿದ್ದು ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ಎಲ್ಲರ ಒಳಿತಿಗಾಗಿ ನಮ್ಮ ದೇವಸ್ಥಾನದಲ್ಲಿ ಈ ಹೋಮವನ್ನು ಮಾಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯುವ ಜನ ಸಂಘದ ನವೀನ್‌, ವಾಸವಿ ಸ್ನೇಹ ವೃಂದದ ಶೀತಲ್‌ ಪ್ರವೀಣ್‌ ಸೇರಿದಂತೆ ಆರ್ಯ ವೈಶ್ಯ ಮಂಡಳಿ ಮತ್ತು ವಾಸವಿ ಸ್ನೇಹ ವೃಂದ ಪದಾಧಿಕಾರಿಗಳಿದ್ದರು. ಉಚಿತ ಆರೋಗ್ಯ ತಪಾಸಣೆ ಹಾಗೂ ದೇಸೀ ಗವ್ಯೋತ್ಪನ್ನದ ಪರಿವಾರದ ವತಿಯಿಂದ ಗವ್ಯೋತ್ಪನ್ನಗಳ ಪ್ರದರ್ಶನ ನಡೆಯಿತು.

ಅಂಜನಾದ್ರಿಗೆ ಹರಿದು ಬಂದ ಹಣ

ಕೊಪ್ಪಳ (ಜು.24): ಕಳೆದ ಆರು ವರ್ಷಗಳ ಹಿಂದಷ್ಟೇ ನಾಡಿನ ಜನರಿಗೆ ಹೆಚ್ಚು ಪರಿಚಿತವಿರದ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಿದ್ದಾರೆ. ಆಗ ಕೇವಲ 247 ರೂ. ಇದ್ದ ದೇವರ ಹುಂಡಿಯಲ್ಲಿ ಈಗ 6 ಕೋಟಿ ರೂ. ದೇಣಿಗೆ ಸಂಗ್ರಹವಾಗುತ್ತಿದೆ. ರಾಜಕಾರಣಿಗಳು ಅಂಜನಾದ್ರಿ ಪರ್ವತವನ್ನು ಚುನಾವಣೆಗೆ ಬಳಕೆ ಮಾಡಿಕೊಂಡರೆ, ಭಕ್ತರು ಇಡೀ ಪರ್ವತವನ್ನೇ ಅಪ್ಪಿಕೊಂಡು ತನು, ಮನ, ಧನವನ್ನು ಅರ್ಪಿಸಿ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಆಂಜನೇಯನ ಜನ್ಮಸ್ಥಳವಾಗಿದೆ. ಕಳೆದ ಆರು ವರ್ಷಗಳ ಹಿಂದಷ್ಟೇ ಯಾರಿಗೂ ಪ್ರಸಿದ್ಧಿಯಾಗದ ಹಾಗೂ ಜನರು ಹೋಗಲೂ ಬಯಸದ ತಾಣದಲ್ಲಿ ಈಗ ಭಕ್ತರ ದಂಡೇ ತುಂಬಿ ತುಳುಕುತ್ತಿದೆ. ಕಳೆದೆರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಂಜನಾದ್ರಿ ಬೆಟ್ಟವನ್ನು ರಾಜಕೀಯ ದಾಳಕ್ಕೆ ಉಪಯೋಗಿಸಿಕೊಂಡರು. ಇದಾದ, ನಂತರ ಆಂಜನೇಯನ ಜನ್ಮಸ್ಥಳದ ಮಹತ್ವ ಜನರಿಗೆ ತಿಳಿದಿದ್ದು, ಈಗ ಲಕ್ಷಾಂತರ ಭಕ್ತರು ಭೇಟಿ ಮಾಡುತ್ತಿದ್ದಾರೆ. ಹಾಗಾದ್ರೆ ಬನ್ನಿ ಅಂಜನಾದ್ರಿಗೆ ಎಷ್ಟೇಲ್ಲ ದೇಣಿಗೆ ಬಂದಿದೆ ಅನ್ನೋದನ್ನ ನೋಡೋಣ ಈ ರಿಪೋರ್ಟ್ ನಲ್ಲಿ.

ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..

ಐತಿಹಾಸಿಕ ಹಿನ್ನಲೆಯ ಅಂಜನಾದ್ರಿ ಪರ್ವತ: ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕ ರಾಂಪೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಪರ್ವತವು ರಾಮಾಯಣದಲ್ಲಿ ಬರುವ ಹನುಮಂತ ಜನಿಸಿದ ಸ್ಥಳ ಎಂದು ಕರೆಯಲಾಗುತ್ತಿದೆ. ಹಂಪಿಯ ಸಮೀಪದಲ್ಲಿ ಇರುವ ಅಂಜನಾದ್ರಿ ಪರ್ವತಕ್ಕೆ ಸಾಕಷ್ಟು ಇತಿಹಾಸ ಇರುವುದರಿಂದ ಸ್ಥಳೀಯ ಭಕ್ತರು ಸೇರಿದಂತೆ ದೇಶ, ವಿದೇಶಗಳಿಂದ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೂ ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಪರ್ವತಕ್ಕೆ ಆಗಮಿಸಿ, ಆಂಜನೇಯಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಅಯೋದ್ಯೆಯಷ್ಟೇ ಪವಿತ್ರತೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು ಕಳೆದ ಆರು ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದು, ಭಕ್ತರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

click me!