Child Marriage : ವಿವಾಹ ವಯಸ್ಸು 21: ಬಾಲ್ಯ ವಿವಾಹ ಹೆಚ್ಚಾಗುವ ಆತಂಕ

By Kannadaprabha News  |  First Published Dec 28, 2021, 7:03 AM IST
  • ವಿವಾಹ ವಯಸ್ಸು 21: ಬಾಲ್ಯ ವಿವಾಹ ಹೆಚ್ಚಾಗುವ ಆತಂಕ
  • ಬಾಗೇಪಲ್ಲಿ, ಗೌರಿಬಿದನೂರಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣ ದಾಖಲು
     

 ಚಿಕ್ಕಬಳ್ಳಾಪುರ (ಡಿ.28) :   ಹೆಣ್ಣು ಮಕ್ಕಳ ವಿವಾಹ (Marriage( ವಯಸ್ಸು ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಜಿಲ್ಲೆಯಲ್ಲಿ ಸಾಕಷ್ಟುಪರ, ವಿರೋಧ ಚರ್ಚೆಯ ಬೆನ್ನಲೇ ಕೇಂದ್ರ ಈ ನಿರ್ಧಾರದಿಂದ ಜಿಲ್ಲಾದ್ಯಂತ ಬಾಲ್ಯ ವಿವಾಹ (Child Marriage)  ಪ್ರಕರಣಗಳು ಹೆಚ್ಚಾಗುವ ಆತಂಕ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.  ಹೌದು, ಈ ಮೊದಲೇ ಬಾಲ್ಯ ವಿವಾಹ ಪ್ರಕರಣಗಳಲ್ಲಿ ರಾಜ್ಯದ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆದರಲ್ಲೂ ಆಂಧ್ರದ ಗಡಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ (Girls)  ವಿವಾಹ ವಯಸ್ಸು ಹೆಚ್ಚಳವಾದರೆ ಬಾಲ್ಯ ವಿವಾಹ ಪ್ರಕರಣಗಳು ಇನ್ನಷ್ಟುಹೆಚ್ಚಾಗುವ ಸಾಧ್ಯತೆ ಇದೆ.

ಯೋಜನೆಯ ಅನುಷ್ಠಾನ ಕಷ್ಟ

Tap to resize

Latest Videos

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ವಿವಾಹ ವಯಸ್ಸುನ್ನು 21ಕ್ಕೆ ಏರಿಕೆ ಮಾಡುವ ಕುರಿತು ಮಾಡಿರುವ ಪ್ರಸ್ತಾಪಕ್ಕೆ ಪರ ವಿರೋಧ ವ್ಯಕ್ತವಾಗುತ್ತಿದೆ. ಒಂದು ಕಡೆ ಹೆಣ್ಣು ಮಕ್ಕಳ ಆರೋಗ್ಯದ (Health) ದೃಷ್ಟಿಯಿಂದ ಸರ್ಕಾರ ನಿರ್ಧಾರ ಒಳ್ಳೆಯದು ಎನ್ನುತ್ತಿದ್ದರೂ ಎಲ್ಲೂ ಒಂದು ಕಡೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತವೆ. ಈ ಕಾಯ್ದೆ ರೂಪಗೊಂಡರೂ ಅನುಷ್ಠಾನಗೊಳಿಸುವುದು ಕಷ್ಟಎನ್ನಲಾಗಿದೆ. ಬಡತನ, ಅನಕ್ಷರತೆ, ಮೂಢನಂಬಿಕೆ, ಪೋಷಕರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಾಲ್ಯ ವಿವಾಹ ಸಾಕಷ್ಟುಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೇ ವರದಿಯಾಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ವಿವಾಹವಾಗುವ ವಯಸ್ಸು ವಿಸ್ತರಿಸಿದರೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತವೆಯೆ ಹೊರತು ಕಡಿಮೆ ಆಗುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಗಡಿಭಾಗದಲ್ಲಿ ಪ್ರಕರಣಗಳು ಹೆಚ್ಚು

ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಇದುವರೆಗೂ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅರ್ಧದಷ್ಟುಜಿಲ್ಲೆಯ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ, ಗೌರಿಬಿದನೂರು ತಾಲೂಕುಗಳಲ್ಲಿ ದಾಖಲಾಗಿವೆ. ಆದರಲ್ಲೂ ಕೊರೋನಾ (Corona) ಸಂದರ್ಭದಲ್ಲಿ ಸಾಕಷ್ಟುಬಾಲ್ಯ ವಿವಾಹ ಪ್ರಕರಣಗಳನ್ನು ಅಧಿಕಾರಿಗಳು ಸಮಯೋಜಿತ ದಾಳಿಯಿಂದ ತಡೆಯಲಾಗಿದೆ. ಕೆಲ ಪೋಷಕರು ಕದ್ದು ಮುಚ್ಚಿ ಪೋಷಕರು ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ವಿವಾಹ 18 ರಿಂದ 21ಕ್ಕೆ ಏರಿಸುವುದು ಒಳ್ಳೆಯ ಉದ್ದೇಶವಾದರೂ ಕದ್ದುಮುಚ್ಚಿ ನಡೆಯುವ ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಹೇಗೆ ಎನ್ನುವ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.

6 ವರ್ಷದಲ್ಲಿ 660 ಪ್ರಕರಣ

ಜಿಲ್ಲೆಯಲ್ಲಿ ಬರೋಬ್ಬರಿ 6 ವರ್ಷದಲ್ಲಿ 660 ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು ಆ ಪೈಕಿ 57 ಬಾಲ್ಯ ವಿವಾಹಗಳು ನಡೆದು  ಆ ಪೈಕಿ 603 ವಿವಾಹಗಳನ್ನು ಅಧಿಕಾರಿಗಳು, ಪೊಲೀಸರು (Police) ಕಾರ್ಯಾಚರಣೆ ನಡೆಸಿ ತಡೆಯಲಾಗಿದೆ. ಒಟ್ಟು 660 ಪ್ರಕರಣಗಳಲ್ಲಿ ಗೌರಿಬಿದನೂರಲ್ಲಿ 207 ಪ್ರಕರಣ ದಾಖಲಾದರೆ, ಬಾಗೇಪಲ್ಲಿಯಲ್ಲಿ ಒಟ್ಟು 196 ಪ್ರಕರಣ ದಾಖಲಾಗಿದೆ. ಆದರಾಚೆಗೂ ಗೌರಿಬಿದನೂರಲ್ಲಿ 6 ವರ್ಷದಲ್ಲಿ 60 ಬಾಲ್ಯ ವಿವಾಹ ನಡೆದಿದ್ದರೆ ಬಾಗೇಪಲ್ಲಿ ತಾಲೂಕಿಲ್ಲಿ 12 ಬಾಲ್ಯ ವಿವಾಹಗಳು ನಡೆದಿವೆ. ಇನ್ನೂ ಚಿಕ್ಕಬಳ್ಳಾಪುರದಲ್ಲಿ 7 ಬಾಲ ವಿವಾಹ ನಡೆದರೆ 50 ತಡೆಯಲಾಗಿದೆ. ಚಿಂತಾಮಣಿಯಲ್ಲಿ 4 ಬಾಲ್ಯ ವಿವಾಹ ನಡೆದರೆ 51 ತಡೆಯಲಾಗಿದೆ. ಗುಡಿಬಂಡೆಯಲ್ಲಿ 7 ಬಾಲ್ಯ ವಿವಾಹ ನಡೆದರೆ 37 ತಡೆಯಲಾಗಿದೆ. ಶಿಡ್ಲಘಟ್ಟದಲ್ಲಿ 7 ಬಾಲ್ಯ ವಿವಾಹ ನಡೆದಿದ್ದು 94 ತಡೆಯಲಾಗಿದೆಯೆಂದು ಜಿಲ್ಲೆಯ ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಅಶ್ವತಮ್ಮ ತಿಳಿಸಿದ್ದಾರೆ

  • ವಿವಾಹ ವಯಸ್ಸು 21: ಬಾಲ್ಯ ವಿವಾಹ ಹೆಚ್ಚಾಗುವ ಆತಂಕ
  • ಬಾಗೇಪಲ್ಲಿ, ಗೌರಿಬಿದನೂರಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣ ದಾಖಲು
click me!