ಕೆಆರ್‌ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ

By Govindaraj SFirst Published Oct 29, 2022, 1:30 AM IST
Highlights

ವಿಶ್ವ ವಿಖ್ಯಾತ ಕೆಆರ್‌ಎಸ್‌ ಉತ್ತರ ಬೃಂದಾವನದ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ಶ್ರೀರಂಗಪಟ್ಟಣ (ಅ.29): ವಿಶ್ವ ವಿಖ್ಯಾತ ಕೆಆರ್‌ಎಸ್‌ ಉತ್ತರ ಬೃಂದಾವನದ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಶುಕ್ರವಾರ ಅಣೆಕಟ್ಟೆಉತ್ತರ ದ್ವಾರದ ಬಳಿ ಚಿರತೆ ಕಾಣಿಸಿಕೊಂಡಿದೆ. ಇದು ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಶನಿವಾರವಷ್ಟೇ ಚಿರತೆ ಅಣೆಕಟ್ಟೆದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆಮೆಲ್ಭಾಗದಲ್ಲಿ ನಡೆದು ಬಂದು ನಂತರ ಬೃಂದಾವನದ ಕಡೆಗೆ ಹಾರಿ ಹೋಗಿತ್ತು. 

ಸ್ಥಳೀಯ ಅಧಿಕಾರಿಗಳ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರಾಯಲ್ ಆರ್ಕಿಡ್‌ ಹೋಟೆಲ್ ಬಳಿ ಬೋನ್‌ ಇರಿಸಿದ್ದರು. ಆದರೆ, ಯಾವುದೇ ಚಿರತೆ ಬೋನಿನಲ್ಲಿ ಸೆರೆಯಾಗಿರಲಿಲ್ಲ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಕ್ಕೆ ನಿರ್ಬಂಧಿಸಿ, ಚಿರತೆ ಪ್ರತ್ಯಕ್ಷ ಕುರಿತು ಶ್ರೀರಂಗಪಟ್ಟಣ ವಲಯ ಅರಣ್ಯ ಅಧಿಕಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿರತೆ ಸೆರೆ ಹಿಡಿಯಲು ಬೋನ್‌ ಇರಿಸಿ ಅಗತ್ಯ ಕ್ರಮ ವಹಿಸಿದ್ದಾರೆ.

ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ

ಮಸ್ಕಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಮಸ್ಕಿ ಪಟ್ಟಣದ ಪರಾಪೂರ ರಸ್ತೆಯ ಬಸನಗೌಡ ಪೊಲೀಸ್‌ ಪಾಟೀಲ್‌ ಅವರ ತೋಟದಲ್ಲಿ ಶುಕ್ರವಾರ ಬೆಳಗಿನ ಜಾವಾ ಚಿರತೆ ಪ್ರತ್ಯಕ್ಷವಾಗಿದೆ. ತೋಟದಲ್ಲಿ ಚಿರತೆ ತಿರುಗಾಡಿದ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಇವು ಚಿರತೆಯ ಹೆಜ್ಜೆ ಗುರುತುಗಳು ಎಂದು ಲಿಂಗಸೂಗೂರು ವಲಯ ಅರಣ್ಯಾಧಿಕಾರಿ, ಚನ್ನಬಸವರಾಜ ಕಟ್ಟಿಮನಿ, ಉಪ ವಲಯ ಅರಣ್ಯಧಿಕಾರಿ ಹುಸೇನ್‌ ಭಾಷಾ ದೃಢಪಡಿಸಿದ್ದಾರೆ. ಬೆಳಗ್ಗೆ 5 ಗಂಟೆಯ ಸಮಯದಲ್ಲಿ ತೋಟದಲ್ಲಿ ಚಿರತೆ ಬರುತ್ತಿದ್ದಂತೆ ತೋಟದ ನಾಯಿಗಳ ಬೋಗಳುವ ಶಬ್ಧದಿಂದ ತೋಟ ಕಾಯುವವರು ಹಾಗೂ ತೋಟದ ಮಾಲೀಕರು ಎಚ್ಚೇತ್ತು ಹೊರ ಬಂದಿದ್ದಾರೆ. 

ತೋಟಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಚಿರತೆ ಹೋಗುತ್ತಿದ್ದನ್ನು ತೋಟ ಕಾಯುವವರು ನೋಡಿದ್ದಾರೆ. ಕಳೆದ ಎರಡು ದಿನಗಳಿಂದ ತಾಲೂಕಿನ ಹಂಪನಾಳ, ನಾಗರಬೆಂಚಿ, ಮಾರಲದಿನ್ನಿ ತಾಂಡಾದ ಸಮೀಪ ಚಿರತೆ ಪ್ರತ್ಯಕ್ಷ ವಾಗಿದೆ. ಕೆಲವು ಕಡೆ ಆಕಳು ಕರುಗಳು ಚಿರತೆಯ ದಾಳಿಗೆ ಬಲಿಯಾಗಿವೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ಗಳನ್ನು ಅಳವಡಿಸಿದ್ದರು ಸಹ ಚಿರತೆ ಬೋನ್‌ಗೆ ಬಿಳದೆ ಇರುವುದು ಅರಣ್ಯ ಇಲಾಖೆಯ ಸಿಬ್ಬಂದಿಯ ನಿದ್ದೆಗೆಡಿಸಿದೆ.

ಕೆಆರ್‌ಎಸ್‌ನಲ್ಲಿ ಚಿರತೆ ಪ್ರತ್ಯಕ್ಷ : ಸೆರೆಗಾಗಿ ಕಾರ್ಯಾಚರಣೆ ಮುಂದುವರಿಕೆ

ಸಾರ್ವಜನಿಕರಲ್ಲಿ ಆತಂಕ: ಬಸವೇಶ್ವರ ನಗರಕ್ಕೆ ಹೊಂದಿಕೊಂಡಿರುವ ಪರಾಪೂರ ರಸ್ತೆಯ ಅಕ್ಕಪಕ್ಕದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಬೆಳಗಿನ ಜಾವ ಇದೇ ರಸ್ತೆಯಲ್ಲಿ ಮಹಿಳೆಯರು ಸೇರಿದಂತೆ ಸ್ಥಳೀಯರು ವಾಯುವಿಹಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆವ ತಾಲೂಕು ಆಡಳಿತ ಮನವಿ ಮಾಡಿದೆ.

click me!