ಹೊಸಪೇಟೆ: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

By Kannadaprabha News  |  First Published Nov 8, 2020, 11:34 AM IST

ಕಳೆದ ಒಂದು ವಾರದಿಂದ ಕೆರೆತಾಂಡಾದ ಬಳಿ ಬೊರಯ್ಯ ಹಾಗೂ ಓಬಯ್ಯ ಅವರ ಜಮೀನಿನ ಬಳಿ ಕಾಣಿಸಿಕೊಂಡ ಚಿರತೆ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಹೊರವಲಯದ ಕೆರೆತಾಂಡಾ| 


ಹೊಸಪೇಟೆ(ನ.08): ತಾಲೂಕಿನ ಕಮಲಾಪುರದ ಹೊರವಲಯದ ಕೆರೆತಾಂಡಾದ ಸಮೀಪದಲ್ಲಿ ವಾರದಿಂದ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಚಿರತೆ ನೋಡಿದ ರೈತರು ಭಯಭೀತರಾಗಿ ಜಮೀನಿಗೆ ಹೋಗುವುದನ್ನೇ ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಸಂಜೆ ವೇಳೆ ಕೆರೆತಾಂಡಾದ ಬಳಿ ಬೊರಯ್ಯ ಹಾಗೂ ಓಬಯ್ಯ ಅವರ ಜಮೀನಿನ ಬಳಿ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಕೆರೆತಾಂಡಾದ ಬಳಿ ಜಮೀನುಗಳಲ್ಲಿ ಚಿರತೆ ಪದೇ ಪದೆ ಕಾಣಿಸಿಕೊಳ್ಳುತ್ತಿದ್ದು, ಜಮೀನಿಗೆ ಹೋಗುವುದಕ್ಕೆ ಭಯಪಡುವಂತಾಗಿದೆ. ಸಕಾಲಕ್ಕೆ ವಿದ್ಯುತ್‌ ಇಲ್ಲದೆ ಬೆಳೆಗಳು ಬಾಡುತ್ತಿವೆ. ವಿದ್ಯುತ್‌ ಬಂದಾಗ ಈ ನೀರನ್ನಾದರೂ ಬಿಟ್ಟು ಬೆಳೆ ಉಳಿಸಿಕೊಳ್ಳಲು ಹೋಗಬೇಕೆಂದರೆ ಈ ಚಿರತೆ ಹಾವಳಿಯಿಂದ ಜಮೀನಿಗೆ ಹೋಗುವುದಕ್ಕೆ ಹೆದರುವಂತಾಗಿದೆ. ರೈತರ ಜೀವಕ್ಕೆ ಅಪಾಯವಾಗುವ ಮುನ್ನ ಕೂಡಲೇ ಅರಣ್ಯಾಧಿಕಾರಿಗಳು ಗಮನ ಹರಿಸಿ ಚಿರತೆ ಕಾಣಿಸಿಕೊಂಡ ಜಮೀನುಗಳಲ್ಲಿ ಬೋನಿಟ್ಟು ಚಿರತೆಯನ್ನು ಹಿಡಿಯುವುದಕ್ಕೆ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.

Tap to resize

Latest Videos

'ಹಿಂಬಾಗಿಲ ಮೂಲಕ ಅಧಿ​ಕಾರ ಪಡೆ​ಯಲು ಸಂಚು ರೂಪಿ​ಸಿದ್ದ ಬಿಜೆ​ಪಿಗೆ ತಕ್ಕ ಪಾಠ'

ಕೆರೆತಾಂಡಾ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬುದಕ್ಕೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಜನರು ಒಂಟಿಯಾಗಿ ಓಡಾಡದೇ ಜಾ​ಗ್ರತರಾಗಿರಬೇಕು ಎಂದು ಕಮಲಾಪುರ ಡಿಆರ್‌ಎಫ್‌ಒ ಪರಶುರಾಮ ಎಂದು ತಿಳಿಸಿದ್ದಾರೆ. 
 

click me!