ಗದಗ: ಮನೆ ಬಿದ್ದು ವರ್ಷವಾದರೂ ಸಿಕ್ಕಿಲ್ಲ ಪರಿಹಾರ..!

Kannadaprabha News   | Asianet News
Published : Nov 08, 2020, 11:16 AM ISTUpdated : Nov 08, 2020, 11:31 AM IST
ಗದಗ: ಮನೆ ಬಿದ್ದು ವರ್ಷವಾದರೂ ಸಿಕ್ಕಿಲ್ಲ ಪರಿಹಾರ..!

ಸಾರಾಂಶ

ಕಳೆದ ವರ್ಷ ಮಳೆಯ ಹೊಡೆತಕ್ಕೆ ಸಂಪೂರ್ಣವಾಗಿ ಬಿದ್ದಿದ್ದ ಮನೆ| ಎಲ್ಲರಿಗೂ ಸಹಾಯಧನ ಎಂಬಂತೆ 3500 ರು. ಬಿಟ್ಟರೆ, ಈ ಸಂಪೂರ್ಣ ಬಿದ್ದ ಮನೆಗೆ ಹೆಚ್ಚಿಗೆ ಯಾವುದೇ ಪರಿಹಾರ ಬಂದಿಲ್ಲ| ಗದದ ಜಿಲ್ಲೆಯ ಹೊಳೆಆಲೂರ ಸಮೀಪದ ಅಸೂಟಿ ಗ್ರಾಮ| 

ಹೊಳೆಆಲೂರ(ನ.08): 2019ರಲ್ಲಿ ಬೆಣ್ಣೆಹಳ್ಳ, ಮಲಪ್ರಭಾ ನದಿಯ ಪ್ರವಾಹ ಹಾಗೂ ಮಳೆಯ ಅತೀವೃಷ್ಟಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಸುಕ್ಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಪಟ್ಟಿಯನ್ನು ಸೇರದ ಬಿದ್ದ ಮನೆಗಳು ಇನ್ನು ಕಾಣುತ್ತವೆ.

ಪಟ್ಟಿಯಲ್ಲಿ ಹೊಳೆಆಲೂರ ಸಮೀಪದ ಅಸೂಟಿ ಗ್ರಾಮದ ಗದಿಗೆಪ್ಪ ಗುರುಪುತ್ರಪ್ಪ ಬೀರನೂರ ಅವರ ಮನೆ ಸಹ ಒಂದು. ಕಳೆದ ವರ್ಷ ಮಳೆಯ ಹೊಡೆತಕ್ಕೆ ಸಂಪೂರ್ಣ ಮನೆ ಬಿದ್ದು ಹೋಗಿತ್ತು. ಅವರು ಪರೀಶಿಲನೆ ಮಾಡಲು ಬಂದ ತಹಸೀಲ್ದಾರ ಹಾಗೂ ಶಾಸಕರು ಗ್ರಾಮಕ್ಕೆ ಬಂದಾಗ ನೋಡಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಅದಾಗ್ಯೂ ಯಾರೂ ಕಣ್ಣು ತೆಗೆದು ನೋಡಿಲ್ಲ. ಎಲ್ಲರಿಗೂ ಸಹಾಯಧನ ಎಂಬಂತೆ 3500 ರು. ಬಿಟ್ಟರೆ, ಈ ಸಂಪೂರ್ಣ ಬಿದ್ದ ಮನೆಗೆ ಹೆಚ್ಚಿಗೆ ಯಾವುದೇ ಪರಿಹಾರ ಬಂದಿಲ್ಲ.

ಗದಗ: ಅತಿಯಾದ ಮಳೆ, ಒಂದೇ ವಾರದಲ್ಲಿ 635 ಮನೆ ಕುಸಿತ, ಕಂಗಾಲಾದ ಜನತೆ

ಇಲ್ಲಿಗೆ ಜಿಪಿಎಸ್‌ ಹಾಗೂ ಮನೆ ವೀಕ್ಷಣೆ ತಂಡ ಈ ನೋಡಿ ಹೋಗಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮದ ನಾಲ್ಕರಿಂದ ಐದು ಪಾಲಾನುಭವಿಗಳಿಗೆ ಎ ಗ್ರೇಡ್‌ ಹಾಕಿ ಅವರಿಗೆ 5 ಲಕ್ಷ ರು. ಪರಿಹಾರ ಕೂಡಾ ಬಂದಿದೆ. ನಾವು ವರ್ಷದಲ್ಲಿ ರೋಣ ಕಚೇರಿ, ಗ್ರಾಮ ಪಂಚಾಯಿತಿ, ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಪತ್ರ ಕೊಟ್ಟಿದ್ದೇವೆ. ಆದರೂ ನಮಗೆ ಯಾವುದೇ ರೀತಿ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ ಬಿದ್ದ ಮನೆಯವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

2019ರಲ್ಲಿ ಬಿದ್ದ ನಮ್ಮ ಮನೆಯನ್ನು ನಾವು ಬಿಟ್ಟು ವರ್ಷವಾಯಿತು. ನಾವು ಸಾಕಷ್ಟುಬಾರಿ ರೋಣ, ಗದಗ, ಕಚೇರಿಗೆ ಅಲೆದಿದ್ದೇವೆ. ಆದರೂ ಸರ್ಕಾರ ಯಾವುದೇ ಸಹಾಯ ಮಾಡುತ್ತಿಲ್ಲ. ನಮ್ಮ ಗ್ರಾಮದಲ್ಲೇ ಬಿದ್ದ ಮನೆಗಳಿಗೆ ಎ ಗ್ರೇಡ ಪರಿಹಾರ 5 ಲಕ್ಷ ರು. ಪರಿಹಾರ ಬಂದಿದೆ. ದಯವಿಟ್ಟು ಮನೆ ನೋಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಅಸೂಟಿ ಗ್ರಾಮದ ಗದಿಗೆಪ್ಪ ಗುರುಪುತ್ರಪ್ಪ ಬೀರನೂರ ಅವರು ತಿಳಿಸಿದ್ದಾರೆ. 
 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು