ವಿಜಯಪುರದಲ್ಲಿ ಮತ್ತೆ ಭೂಕಂಪ​ನ: ಜನರಲ್ಲಿ ಹೆಚ್ಚಿದ ಆತಂಕ

By Kannadaprabha News  |  First Published Oct 3, 2021, 10:07 AM IST

*   ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ನಡುಗಿದ ಭೂಮಿ
*   ರಿಕ್ಟರ್‌ ಮಾಪಕದಲ್ಲಿ 2.0 ರಷ್ಟು ತೀವ್ರತೆ ದಾಖಲು
*   ಆಲಮಟ್ಟಿ ಮತ್ತು ಕಲಬುರಗಿ ಭೂಕಂಪಕ ಮಾಪಕ ಕೇಂದ್ರಗಳಲ್ಲಿ ದಾಖಲು 
 


ವಿಜಯಪುರ(ಅ.03): ಜಿಲ್ಲೆಯಲ್ಲಿ ಕಳೆದ ಎರಡು ದಿನದಲ್ಲಿ ಮೂರು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 8.31 ಗಂಟೆ​ಗೆ ಮತ್ತೆ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 2.0 ರಷ್ಟು ತೀವ್ರತೆ ದಾಖಲಾಗಿದೆ. 

ಅಲ್ಲದೆ ಅ.1 ರಂದು ಮಧ್ಯಾಹ್ನ 1.47ಕ್ಕೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸೂತಿ ಗ್ರಾಪಂ ವ್ಯಾಪ್ತಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 2.5 ರಷ್ಟು ತೀವ್ರತೆ ಭೂಕಂಪನವಾಗಿರುವ ಕುರಿತು ದಾಖಲಾಗಿದೆ. ಅ.1 ರಂದೇ ಸಂಜೆ 4.10 ಗಂಟೆ​ಗೆ ವಿಜಯಪುರ(Vijayapura) ನಗರದ ನೈಋುತ್ಯ ಭಾಗದಲ್ಲಿ ರಿಕ್ಟರ್‌ ಮಾಪಕದಲ್ಲಿ 2.2 ರಷ್ಟುತೀವ್ರತೆ ಭೂಕಂಪನವಾಗಿರುವ ಬಗ್ಗೆ ಜಿಲ್ಲೆಯ ಆಲಮಟ್ಟಿ(Almatti) ಮತ್ತು ಕಲಬುರಗಿ(Kalaburagi) ಭೂಕಂಪಕ ಮಾಪಕ ಕೇಂದ್ರಗಳಲ್ಲಿ ದಾಖಲಾಗಿದೆ. ಈ ಮೂರು ಭೂಕಂಪಗಳ ತೀವ್ರತೆಯು ತುಂಬಾ ಕಡಿಮೆಯಾಗಿದ್ದು, ಇಂತಹ ಲಘು ಭೂಕಂಪದಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Tap to resize

Latest Videos

ವಿಜಯಪುರ : ಒಂದೇ ವಾರದಲ್ಲಿ 2ನೇ ಸಲ ಭೂಕಂಪನ

ಸಿಂದಗಿಯಲ್ಲೂ ಭೂಕಂಪ

ಕೆಲವು ದಿನಗಳ ಹಿಂದಷ್ಟೇ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ಹೀಗಾಗಿ ಜನರು ರಾತ್ರೋರಾತ್ರಿ ಮನೆಗಳಿಂದ ಹೊರಗಡೆ ಬಂದು ಆತಂಕದಿಂದ ಕಾಲ ಕಳೆದಿದ್ದರು.  ಬಂದಾಳ ರಸ್ತೆ, ಗೋಲಿಬಾರ ಮಡ್ಡಿ, ಜ್ಯೋತಿ ನಗರ, ಶಾಂತವೀರ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಂಪಿಸಿದೆ. ಪ್ರಥಮವಾಗಿ 4.30ಕ್ಕೆ ಸ್ವಲ್ಪ ಪ್ರಮಾಣದಲ್ಲಿ ಭೂಮಿ ಅಲುಗಾಡಿತು. ನಂತರ 4.55ಕ್ಕೆ ಇನ್ನೊಂದು ಬಾರಿ ಕಂಪನವಾಗಿ, ಮೂರನೇ ಬಾರಿ 5.10ಕ್ಕೆ ಮತ್ತು 5.15ಕ್ಕೆ ಹಾಗೂ 5.25ಕ್ಕೆ ಭೂಮಿ ಕಂಪಿಸಿತ್ತು(Earthquake) ಎಂದು ಜನರು ಹೇಳಿದ್ದಾರೆ. 
 

click me!