ಉಡುಪಿ (ಆ.26): ಕನ್ನಡ ಸಂಸ್ಕೃತಿ ಇಲಾಖೆ ಪುನರ್‌ರಚಿಸಿದ ಟ್ರಸ್ವ್‌ಗಳ ಸದಸ್ಯರ ಪಟ್ಟಿಯಲ್ಲಿ ನಿಧನರಾದ ವ್ಯಕ್ತಿಗಳ ಹೆಸರೂ ಸೇರಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಚಿವ ವಿ. ಸುನಿಲ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದು, ಈ ಪಟ್ಟಿಯನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ವ್ಯಕ್ತಿಗಳು, ತಂಡಕ್ಕೆ ಸೀಮಿತವಾಗಿದ್ದ ಟ್ರಸ್ವ್‌ಗಳನ್ನು ಪುನರ್ ರಚನೆ ಮಾಡಿದ್ದೇವೆ, ಈ ಪುನರ್‌ರಚನೆ ಬಹಳ ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ಈ ಪಟ್ಟಿಮಾಡಲಾಗಿತ್ತು, ಬುಧವಾರ ಸರ್ಕಾರ ಅನುಮೋದನೆ ಕೊಟ್ಟಿತ್ತು, ಅದರಲ್ಲಿ ಮರಣ ಹೊಂದಿದ ಇಬ್ಬರ ಹೆಸರು ಸೇರಿ ಸಣ್ಣ ಪ್ರಮಾದವಾಗಿದೆ. ಈ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಎಲ್ಲಾ ಟ್ರಸ್ಟ್, ಪ್ರತಿಷ್ಠಾನಗಳ ನೇಮಕಾತಿ ರದ್ದುಗೊಳಿಸಿದ ರಾಜ್ಯ ಸರ್ಕಾರ
ಸೋಮವಾರದೊಳಗೆ ಎರಡು ಮೂರು ಜನರ ಹೆಸರು ಸೇರಿಸಿಕೊಂಡು ಎಲ್ಲ ಟ್ರಸ್ಟ್‌ಗಳ ಪುನರ್ ರಚನೆಯಾಗಲಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಹೊಸ ಆಲೋಚನೆಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಪುನರ್ ರಚನೆಯಾಗಿದೆ, ಯಾರಿಗೆ ಟ್ರಸ್ವ್‌ನಲ್ಲಿ ಇರಲು ಆಸಕ್ತಿ ಇಲ್ಲವೋ ಅವರನ್ನು ಕೈ ಬಿಡಲಾಗುವುದು ಎಂದರು.
ಸಿದ್ದರಾಮಯ್ಯ ತಮ್ಮ ಮಾತನ್ನು ಕೆಂಪಣ್ಣರ ಬಾಯಿಂದ ಹೇಳಿಸುತ್ತಿದ್ದಾರೆ: ಸುನಿಲ್ ಕುಮಾರ್
ಉಡುಪಿ: ಸರ್ಕಾರದ ಮೇಲೆ ಮತ್ತೆ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಾಯಿಯಲ್ಲಿ ಸಿದ್ದರಾಮ್ಯಯ ತಮ್ಮ ಮಾತನ್ನು ಹೇಳಿಸುತ್ತಿದ್ದಾರೆ ಎಂದು ಕನ್ನಡ - ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ತಮ್ಮ ದೂರನ್ನು ಲೋಕಾಯುಕ್ತಕ್ಕೆ ಕೊಡಿ ಎಂದು ಮುಖ್ಯಮಂತ್ರಿಗಳೇ ಹೇಳಿದರೂ ಕೊಡುತ್ತಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದಾರೆ. ಯಾವುದನ್ನು ಸಿದ್ದರಾಮಯ್ಯ ಹೇಳಬೇಕಾಗಿತ್ತೋ ಅದನ್ನು ಕೆಂಪಣ್ಣ ಹೇಳುತ್ತಿದ್ದಾರೆ. ಇದು ಚುನಾವಣೆ ವೇಳೆ ಗಾಳಿಯಲ್ಲಿ ಹೊಡೆದಿರುವ ಗುಂಡು. ಸಿದ್ದರಾಮಯ್ಯ ಅವರ ಮೇಲೂ ನೂರಾರು ಆರೋಪ ಬಂದಿತ್ತು, ಆಗ ಸಾಕ್ಷಿ ಎಲ್ಲಿದೆ ಎಂದವರು ಕೇಳಿದ್ದರು. ಈಗ ಕೆಂಪಣ್ಣ ಹೇಳಿದ್ದಕ್ಕೆ ಸಾಕ್ಷಿ ಎಲ್ಲಿದೆ ಎಂದು ಸುನಿಲ್ ಪ್ರಶ್ನಿಸಿದರು.
ಅವರ ಹೇಳಿಕೆಗೆ ಮಹತ್ವವಿಲ್ಲ: ಕಮಿಷನ್ ಹಣದಲ್ಲಿ ಆರ್‌ಎಸ್‌ಎಸ್‌ಗೆ ಪಾಲಿದೆ ಎಂಬ ಬಿ.ಕೆ. ಹರಿಪ್ರಸಾದ್ ಆರೋಪಕ್ಕೆ ಉತ್ತರಿಸಿದ ಸುನಿಲ್ ಕುಮಾರ್, ಹರಿಪ್ರಸಾದ್ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ. ಹಿಂದೆ ಗೋವಿಂದರಾಜು ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ದುಡ್ಡು ನೀಡಿದ ವಿಚಾರ ಬರೆಯಲಾಗಿತ್ತು. ಈಗ ಅದೇ ಗೋವಿಂದರಾಜುನನ್ನು ಹಿಡಿದುಕೊಂಡು ಸಿದ್ದರಾಮಯ್ಯ ಓಡಾಡುತ್ತಿಲ್ಲವೇ? ಇಂದಿರಾ ಕ್ಯಾಂಟೀನ್ ಹಣದಲ್ಲಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡುವ ಬಗ್ಗೆ ಕಾಂಗ್ರೆಸ್‌ನವರೇ ಆರೋಪಿಸಿದ್ದರು. ಆಗ ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದರು.
ಟ್ರಸ್ಟ್,ಪ್ರತಿಷ್ಠಾನಗಳಿಗೆ ಅಧ್ಯಕ್ಷ- ಸದಸ್ಯರ ನೇಮಕ: ಮೃತಪಟ್ಟವರನ್ನ ನೇಮಸಿ ಎಡವಟ್ಟು ಮಾಡಿಕೊಂಡ ಸರ್ಕಾರ
ಮಂಗಳೂರಿಗೆ ಪ್ರಧಾನಿ ಭೇಟಿ: ಮಂಗಳೂರಿನಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ದೊಡ್ಡ ಸಭೆ ಮಾಡುತ್ತೇವೆ, ಅದರಲ್ಲಿ ಪ್ರಧಾನಿ ಅವರು ಸುಮಾರು 3800 ಕೋಟಿ ರುಪಾಯಿಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಾರೆ, 1 ಲಕ್ಷ ಫಲಾನುಭವಿಗಳನ್ನು ಸೇರಿಸಲು ಪೂರ್ವ ಸಿದ್ಧತೆ ಮಾಡಿದ್ದೇವೆ ಎಂದರು.