ರಾಜ್ಯದಲ್ಲಿ ಹಂದಿ ಜ್ವರ ಪತ್ತೆ; ಫಾರ್ಮ್‌ನಲ್ಲಿ ಬೆಳೆಸಿದ 57 ಹಂದಿಗಳನ್ನು ಕೊಲ್ಲಲು ಆದೇಶ!

Published : Aug 28, 2025, 10:52 PM IST
pig farm

ಸಾರಾಂಶ

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಫಾರ್ಮ್‌ನಲ್ಲಿ ಬೆಳೆಸುತ್ತಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, 50 ಹಂದಿಗಳು ಸಾವನ್ನಪ್ಪಿವೆ. ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ (ಆ.28): ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಹಂದಿ ಫಾರ್ಮ್‌ವೊಂದರಲ್ಲಿ ಮಾರಕ ಆಫ್ರಿಕನ್ ಹಂದಿ ಜ್ವರ (African Swine Fever) ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಸುಮಾರು 50 ಹಂದಿಗಳು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಉಳಿದ 57 ಹಂದಿಗಳನ್ನು ಕಲ್ಲಿಂಗ್ (ಕೊಲ್ಲಲು) ಮಾಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ.

ಸಾವಿನ ಸರಣಿ ಮತ್ತು ವೈರಸ್ ದೃಢೀಕರಣ:

ಕಳೆದ ಆಗಸ್ಟ್ 19 ರಿಂದ ಇಲ್ಲಿಯವರೆಗೆ ಫಾರ್ಮ್‌ನಲ್ಲಿ ಸುಮಾರು 50 ಹಂದಿಗಳು ಸಾವನ್ನಪ್ಪಿವೆ. ಹಂದಿಗಳ ಸರಣಿ ಸಾವಿನ ಬಗ್ಗೆ ಎಚ್ಚೆತ್ತ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ಹಂದಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಭೂಪಾಲ್‌ನ ನಿಷಾನ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿಯಲ್ಲಿ ಹಂದಿಗಳ ಸಾವಿಗೆ ಆಫ್ರಿಕನ್ ಹಂದಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.

ಮುನ್ನೆಚ್ಚರಿಕೆ ಕ್ರಮಗಳು:

ಹಂದಿ ಜ್ವರದ ಹರಡುವಿಕೆಯನ್ನು ತಡೆಯಲು, ನಾಳೆ (ಆಗಸ್ಟ್ 29) ಹೆಬ್ರಿ ಗ್ರಾಮದ ಫಾರ್ಮ್‌ನಲ್ಲಿರುವ ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ರಂಗಪ್ಪ ಏಷ್ಯಾ ನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

ಆಫ್ರಿಕನ್ ಹಂದಿ ಜ್ವರವು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಮಾತ್ರ ಹರಡುವ ರೋಗವಾಗಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ. ಈ ಘಟನೆಯ ನಂತರ, ಸುತ್ತಮುತ್ತಲಿನ ಪ್ರದೇಶಗಳ ಹಂದಿ ಫಾರ್ಮ್‌ಗಳ ಮೇಲೆ ಇಲಾಖೆಯು ನಿಗಾ ಇರಿಸಿದೆ.

PREV
Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ