ಯಾವುದೇ ಭಯ ಬೇಡ, ಭಾನುವಾರವೂ ಏರ್ ಶೋ ಇದೆ, ಬನ್ನಿ ಕಣ್ತುಂಬಿಕೊಳ್ಳಿ

Published : Feb 23, 2019, 08:46 PM IST
ಯಾವುದೇ ಭಯ ಬೇಡ, ಭಾನುವಾರವೂ ಏರ್ ಶೋ ಇದೆ, ಬನ್ನಿ ಕಣ್ತುಂಬಿಕೊಳ್ಳಿ

ಸಾರಾಂಶ

ಏರ್​ ಶೋ 2019 3ನೇ ದಿನವಾದ ಶನಿವಾರ ದೊಡ್ಡ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹಿನ್ನೆಲೆಯಲ್ಲಿ ನಾಳೆ [ಭಾನುವಾರ] ಏರ್ ಶೋ ಇರುತ್ತೋ..? ಇರಲ್ವಾ..? ಅಧಿಕಾರಿಗಳು ಹೇಳಿದ್ದೇನು..? 

ಬೆಂಗಳೂರು, [ಫೆ. 23]: ಇಂದು ಸಂಭವಿಸಿದ ಅಗ್ನಿ ದುರಂತದಿಂದ ನಾಳೆ ಕೊನೆ ದಿನ ಅಂದ್ರೆ ಭಾನುವಾರ ಏರ್ ಶೋ ನಡೆಯುತ್ತೋ ಇಲ್ವೋ? ಎನ್ನುವ ಅನುಮಾನ ಬೇಡ. 

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್​ ಶೋ ನಾಳೆಯೂ ಎಂದಿನಂತೆ ನಡೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಏರ್​ ಶೋ ನಾಳೆಗೆ [ಭಾನುವಾರ] ಕೊನೆಗೊಳ್ಳಲಿದ್ದು, ಅಂತಿಮ ದಿನದ ಪ್ರದರ್ಶನಗಳನ್ನ ಸ್ಥಗಿತಗೊಳಿಸದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಈ ಹಿನ್ನೆಲೆಯಲ್ಲಿ ನಾಳೆಯೂ ಯಥಾಸ್ಥಿತಿಯಲ್ಲಿ ಬೆಳಗ್ಗೆ 10 ರಿಂದ 12 ಗಂಟೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರಗೆ 2 ಪ್ರದರ್ಶನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದ್ದರಿಂದ ಈಗಾಗಲೇ ಟಿಕೆಟ್ ಬುಕ್ ಮಾಡಿದವರು ಯಾವುದೇ ಆತಂಕ ಪಡದೆ ಏರ್ ಶೋವನ್ನು ಕಾಣ್ತುಂಬಿಕೊಳ್ಳಬಹುದು. ಅಗ್ನಿ ಅವಘಡದಿಂದ ಭಯಭೀತರಾಗಿರುವ ಜನರು, ಭಾನುವಾರ ಏರ್​ ಶೋ ಪ್ರದರ್ಶ ವೀಕ್ಷಣೆಗೆ ಬರುವವರ ಸಂಖ್ಯೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. 

ಏರೋ ಶೋನಲ್ಲಿ ಕಾರುಗಳು ಭಸ್ಮ, ವಾಹನ ಮಾಲೀಕರ ಅನುಕೂಲಕ್ಕಾಗಿ RTO ಸಹಾಯ ಕೇಂದ್ರ

ಏರ್​ ಶೋ ಗೇಟ್​ ನಂ. 5ರ ಪಾರ್ಕಿಂಗ್​ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೂರಾರು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಈ ಘಟನೆಯಿಂದ ಕೆಲಸಮಯ ಏರ್​ ಶೋ ಸ್ಥಗಿತಗೊಳಿಸಲಾಗಿತ್ತು. 

ಇನ್ನು ಏರ್​ ಶೋ ಉದ್ಘಾಟನೆಗೂ ತಾಲೀಮು ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಪೈಲೆಟ್ ಸಾವನ್ನಪ್ಪಿದ್ದ.

PREV
click me!

Recommended Stories

ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?
ಏಷ್ಯಾನೆಟ್ ಸುವರ್ಣನ್ಯೂಸ್ ಸಿಬ್ಬಂದಿ ಲಲಿತಮ್ಮ ಸಾವು; ಟ್ರಕ್ ಚಕ್ರ ತಲೆ ಮೇಲೆ ಹರಿದು ಭೀಕರ ಅಂತ್ಯ