ಹುಬ್ಬಳ್ಳಿ: ಹತ್ಯೆಯಾದ ಅಂಜಲಿ ಸಹೋದರಿಯರ ದತ್ತು ಸ್ವೀಕಾರ, ದಿಂಗಾಲೇಶ್ವರ ಶ್ರೀ

By Kannadaprabha News  |  First Published May 17, 2024, 10:25 AM IST

ಮೃತ ಅಂಜಲಿ ಕುಟುಂಬದ ಜತೆಗೆ ನಾವಿದ್ದೇವೆ. ಅಂಜಲಿ ಸಹೋದರಿಯರ ಸಂಪೂರ್ಣ ಓದಿನ ಜವಾಬ್ದಾರಿಯನ್ನು ಬಾಲೆಹೊಸೂರು ಹಾಗೂ ಶಿರಹಟ್ಟಿ ಸಂಸ್ಥಾನ ಮಠಗಳು ಹೊರಲಿವೆ ಎಂದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ 


ಹುಬ್ಬಳ್ಳಿ(ಮೇ.17):   ಮೃತ ಅಂಜಲಿ ಕುಟುಂಬದ ಜತೆಗೆ ನಾವಿದ್ದೇವೆ. ಅಂಜಲಿ ಸಹೋದರಿಯರ ಸಂಪೂರ್ಣ ಓದಿನ ಜವಾಬ್ದಾರಿಯನ್ನು ಬಾಲೆಹೊಸೂರು ಹಾಗೂ ಶಿರಹಟ್ಟಿ ಸಂಸ್ಥಾನ ಮಠಗಳು ಹೊರಲಿವೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಮೃತ ಅಂಜಲಿ ಅಂಬಿಗೇರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಈ ಇಬ್ಬರೂ ಯುವತಿಯರ ಭವಿಷ್ಯದ ಹಿತದೃಷ್ಟಿಯಿಂದ ದತ್ತು ಪಡೆಯುತ್ತೇವೆ ಎಂದು ಭರವಸೆ ನೀಡಿದರು.

Tap to resize

Latest Videos

 ಹುಬ್ಬಳ್ಳಿ: ಅಂಜಲಿ ಹಂತಕನನ್ನ ಬಂಧಿಸಿದ್ದೇ ಬಲು ರೋಚಕ..!

ನಾಳೆ ಪ್ರತಿಭಟನೆ

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪೊಲೀಸರ ವೈಫಲ್ಯ ನಿಜಕ್ಕೂ ಈ ಒಂದು ಕೊಲೆಗೆ ಕಾರಣವಾಗಿದೆ. ಓದಲು ಹೋಗುವ ಯುವತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ನಿರ್ಲಕ್ಷ್ಯ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ. ಅಂಜಲಿ ಸಾವಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಈ ನಿಟ್ಟಿನಲ್ಲಿ ಮೇ 17ರಂದು ದೊಡ್ಡಮಟ್ಟದ ಪ್ರತಿಭಟನೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಅಂಜಲಿ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ರಾಜ್ಯದ ನಾಯಕರು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.

click me!