ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ಸಾವು

By Kannadaprabha News  |  First Published May 17, 2024, 9:26 AM IST

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಮೃತ ಬಾಲಕರ ಶವಗಳನ್ನು ಹೊರತೆಗೆದಿದ್ದಾರೆ. ಕೆರೆಯಲ್ಲಿ ಕೇವಲ ಒಂದು ಅಡಿ ನೀರಿದೆ. ಆದರೆ, ಸುಮಾರು ೧೦ ಅಡಿ ಆಳದಷ್ಟು ಹೂಳು ತುಂಬಿದೆ. ಮಕ್ಕಳು ಕೆರೆಗೆ ಇಳಿದ ತಕ್ಷಣ ಹೂಳಿಗೆ ಸಿಲುಕಿ ಮೃತಪಟ್ಟಿದ್ದಾರೆ. 


ಆಲೂರು(ಮೇ.17):   ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ಹೂಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಪೃಥ್ವಿರಾಜ್ (14), ವಿಶ್ವಾಸ್ (13), ಜೀವನ್ (13) ಮತ್ತು ಸಾತ್ವಿಕ್ (13) ಮೃತಪಟ್ಟ ದುರ್ದೈವಿ ಮಕ್ಕಳು. 

ಬೇಲೂರು ತಾಲೂಕು ಮದಗಟ್ಟ ಗ್ರಾಮದ ಸಾತ್ವಿಕ್, ರಜೆ ಹಿನ್ನೆಲೆಯಲ್ಲಿ ಮುತ್ತಿಗೆಪುರದ ಅಜ್ಜಿ ಮನೆಗೆ ಬಂದಿದ್ದ. ಈತನ ತಂದೆ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಗುರುವಾರ ಐವರು ಮಕ್ಕಳು ಈಜಲು ಕೆರೆಗೆ ತೆರಳಿದ್ದರು. ಈ ವೇಳೆ, ಸುತ್ತಮುತ್ತಲ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಕೆರೆಗೆ ಇಳಿಯದಂತೆ ಇವರಿಗೆ ಎಚ್ಚರಿಕೆ ನೀಡಿದ್ದರು. ಬಳಿಕ, ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಅಲ್ಲಿಂದ ತೆರಳಿದಾಗ ಈ ನಾಲ್ವರು ಮಕ್ಕಳು ಕೆರೆಗೆ ಇಳಿದರು. ಈ ಮಧ್ಯೆ, ಇವರ ಜೊತೆಗಿದ್ದ ಚಿರಾಗ್‌ ಎಂಬ ಯುವಕ ಹೆದರಿಕೆಯಿಂದ ಕೆರೆಗೆ ಇಳಿದಿರಲಿಲ್ಲ. ಕೆರೆಗೆ ಇಳಿದ ನಾಲ್ವರು ಎಷ್ಟು ಹೊತ್ತಾದರೂ ಮೇಲೆ ಬರದಿದ್ದಾಗ ಭಯಗೊಂಡ ಚಿರಾಗ್‌, ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ. ಗ್ರಾಮಸ್ಥರು ಬರುವಷ್ಟರಲ್ಲಿ ನಾಲ್ವರೂ ಅಸುನೀಗಿದ್ದರು.

Tap to resize

Latest Videos

undefined

ಪ್ರಜ್ವಲ್‌ ರೇವಣ್ಣ ವಿವಾದ ನಡುವೆಯೇ ನಾಳೆ ದೇವೇಗೌಡರ 92ನೇ ಜನ್ಮದಿನ, ಆಚರಣೆ ಇಲ್ಲ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಮೃತ ಬಾಲಕರ ಶವಗಳನ್ನು ಹೊರತೆಗೆದಿದ್ದಾರೆ. ಕೆರೆಯಲ್ಲಿ ಕೇವಲ ಒಂದು ಅಡಿ ನೀರಿದೆ. ಆದರೆ, ಸುಮಾರು ೧೦ ಅಡಿ ಆಳದಷ್ಟು ಹೂಳು ತುಂಬಿದೆ. ಮಕ್ಕಳು ಕೆರೆಗೆ ಇಳಿದ ತಕ್ಷಣ ಹೂಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಶೋಕಿಸಿದ್ದಾರೆ.

ಎಲ್ಲ ಮಕ್ಕಳು ಕೂಲಿ ಕಾರ್ಮಿಕರ ಬಡ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. ಇವರ ನಾಲ್ವರು ಪೋಷಕರಿಗೂ ಒಬ್ಬೊಬ್ಬರೆ ಗಂಡು ಮಕ್ಕಳಾಗಿದ್ದರು. ಹೀಗಾಗಿ, ಈ ನಾಲ್ಕೂ ಕುಟುಂಬಗಳೂ ಈಗ ಗಂಡು ಮಕ್ಕಳಿಲ್ಲದೆ ಅನಾಥವಾಗಿವೆ.

click me!