ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಚನ್ನಗಿರಿಯ ಟಿಪ್ಪು ನಗರದ ವಾಸಿ, ಕಾರ್ಪೆಂಟರ್ ಕೆಲಸಗಾರ ಆದಿಲ್ ನನ್ನು ಪೊಲೀಸರು ವಿಚಾರಣೆಗೆ ಕರೆ ತಂದ ಕೆಲವೇ ನಿಮಿಷಗಳಲ್ಲಿ ಆತ ಸಾವನ್ನಪ್ಪಿದ್ದ. ಇದೊಂದು ಲಾಕಪ್ ಡೆತ್ ಎಂಬುದಾಗಿ ಆರೋಪಿಸಿ ಸಂಬಂಧಿಗಳು ಆದಿಲ್ ಶವ ತಂದು ಠಾಣೆಯಲ್ಲಿಟ್ಟು ಪ್ರತಿಭಟಿಸಿದ್ದರು.
ದಾವಣಗೆರೆ(ಮೇ.31): ರಾಜ್ಯವ್ಯಾಪಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಚನ್ನಗಿರಿ ಪೊಲೀಸ್ ಠಾಣೆಯ ಆದಿಲ್ ಸಾವಿನ ಪ್ರಕರಣದ ಮರಣೋತ್ತರ ವರದಿ ಸಿಐಡಿ ತಂಡದ ಕೈಸೇರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದಲೇ ಆದಿಲ್ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಕಡಿಮೆ ರಕ್ತದೊತ್ತಡದಿಂದಾಗಿ ಹೃದಯಸ್ತಂಭನಗೊಂಡು ಆದಿಲ್ ಸಾವನ್ನಪ್ಪಿದ್ದಾರೆ ಎಂದು ಶವ ಪರೀಕ್ಷೆ ನಡೆಸಿದ ವೈದ್ಯರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಮೃತ ಆದಿಲ್‌ನ ದೇಹದ ಇತರ ಕೆಲ ಅಂಗಾಂಶಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ಕ್ಕೆ ಕಳಿಸಲಾಗಿದೆ. ಎಫ್‌ಎಸ್‌ಎಲ್ ನ ವರದಿಗಾಗಿ ಕಾಯಲಾಗುತ್ತಿದೆ.
undefined
ಆದಿಲ್ ಸಾವು ಪ್ರಕರಣ: ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ ಎಂದ ಪತ್ನಿ!
ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಚನ್ನಗಿರಿಯ ಟಿಪ್ಪು ನಗರದ ವಾಸಿ, ಕಾರ್ಪೆಂಟರ್ ಕೆಲಸಗಾರ ಆದಿಲ್ ನನ್ನು ಪೊಲೀಸರು ವಿಚಾರಣೆಗೆ ಕರೆ ತಂದ ಕೆಲವೇ ನಿಮಿಷಗಳಲ್ಲಿ ಆತ ಸಾವನ್ನಪ್ಪಿದ್ದ. ಇದೊಂದು ಲಾಕಪ್ ಡೆತ್ ಎಂಬುದಾಗಿ ಆರೋಪಿಸಿ ಸಂಬಂಧಿಗಳು ಆದಿಲ್ ಶವ ತಂದು ಠಾಣೆಯಲ್ಲಿಟ್ಟು ಪ್ರತಿಭಟಿಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಇಲಾಖೆಯ ಜೀಪು, ಇತರ ವಾಹನಗಳನ್ನು ಜಖಂ ಮಾಡಿದ್ದರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದರು.