ಇದೆಂಥಾ ಸರ್ಕಾರವಯ್ಯಾ: ಅಹವಾಲು ಸಲ್ಲಿಸಲು ಬಂದ ರೈತನನ್ನೇ ಗಡಿಪಾರು ಮಾಡಿದ್ರಂತೆ ಎಡಿಜಿಪಿ

By Sathish Kumar KHFirst Published Dec 7, 2023, 10:04 PM IST
Highlights

ಕೊಪ್ಪಳದ ಎಸ್ಐ ಹಲ್ಲೆ ಮಾಡಿದ್ದಾರೆ ಎಂದು ಅಹವಾಲು ಸಲ್ಲಿಸಲು ಬಂದಿದ್ದ ರೈತನನ್ನೇ ಗಡಿಪಾರು ಮಾಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಕೊಪ್ಪಳ  (ಡಿ.07): ಕೊಪ್ಪಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹಲ್ಲೆ ನಡೆದಿರುವ ಬಗ್ಗೆ ಅಹವಾಲು ಸಲ್ಲಿಸಿ ನ್ಯಾಯ ಕೇಳಲು ಬಂದಂತಹ ರೈತನನ್ನೇ ಕ್ರಿಮಿನಲ್ ಹಿನ್ನೆಲೆಯುಳ್ಳವನು ಎಂದು ಹೀಗಳೆದು ಜಿಲ್ಲೆಯಿಂದ ಗಡಿಪಾರು ಮಾಡಿರುವ ಘಟನೆ ನಡೆದಿದೆ.

ಹೌದು, ಕೊಪ್ಪಳದಲ್ಲಿ ನಡೆದ ಸಾರ್ವಜನಿಕ ಸಭೆ ವೇಳೆ ಪೊಲೀಸ್‌ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಅಹವಾಲು ಸಲ್ಲಿಸಲು ಬಂದಿದ್ದ ರೈತನನ್ನು ಗಡಿಪಾರು ಮಾಡಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಇತ್ತೀಚಿಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ  ಮಲ್ಲಯ್ಯ‌ ಎನ್ನುವ ರೈತನ ಮೇಲೆ ಹಲ್ಲೆ ನಡೆದಿತ್ತು. ಈ ಹಿನ್ನಲೆಯಲ್ಲಿ ಕುಕನೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನನ್ನ ಮೇಲೆ ಮಾಡಿದ್ದಾರೆ ಎಂದು ರೈತ ಮಲ್ಲಯ್ಯ ಎಡಿಜಿಪಿಗೆ ಹೇಳಿದ್ದಾನೆ.

ವೀರಮರಣ ಹೊಂದಿದ ಅರ್ಜುನ ಆನೆ ಸಮಾಧಿಗೆ ಪೂಜೆ ಸಲ್ಲಿಸಿದ ಮೈಸೂರು ಒಡೆಯರ್ ದಂಪತಿ: ಕೊನೆಗೂ ಸಿಕ್ತು ರಾಜಮರ್ಯಾದೆ !

ರೈತನ ಅಹವಾಲು ಸರಿಯಾಗಿ ಕೇಳಿಸಿಕೊಳ್ಳದೇ ಎಡಿಜಿಪಿ ಅಲೋಕ್ ಕುಮಾರ್ ಅವರು ಪಿಎಸ್‌ಐನಿಂದ ಹಲ್ಲೆಗೆ ಒಳಗಾದ ರೈತನನ್ನೇ ಗಡಿಪಾರು ಮಾಡಲು ಸೂಚಿಸಿದ್ದಾರೆ. ರೈತನ ಮೇಲಿನ ಹಲ್ಲೆಯ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಪಿಐ, ಪಿ ಎಸ್ ಐ ಗೆ ಮಾಹಿತಿ ಕೇಳಿದ ಎಡಿಜಿಪಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಈ ವೇಳೆ ರೈತನದ್ದೇ ತಪ್ಪಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ರೈತ ಮಲ್ಲಯ್ಯ ಗ್ರಾಮದಲ್ಲಿ ದೌರ್ಜನ್ಯ ಮಾಡುತ್ತಾನೆ ಎಂದು ಆರೋಪಿಸಿದ ಚಿಕ್ಕೆನಕೊಪ್ಪ ಗ್ರಾಮಸ್ಥರು ಕೂಡ ಆರೋಪ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಎಡಿಜಿಪಿ ರೈತ ಮಲ್ಲಯ್ಯನನ್ನು ಗಡಿಪಾರು ಮಾಡಲು ಸೂಚಿಸಿದ್ದಾರೆ.

ರಾತ್ರೋ ರಾತ್ರಿ ಟೋಲ್ ಗೇಟ್ ಹಣ ವಸೂಲಿಗಿಳಿದ ಗ್ಯಾರಂಟಿ ಸರ್ಕಾರ: 
ಬಳ್ಳಾರಿ(ಡಿ.07):  
ಅದು ದಶಕದ ಹಿಂದೆ ನಿರ್ಮಾಣ ಮಾಡಿದ ರಸ್ತೆ.. ಈವರೆಗೂ ಆ ರಸ್ತೆಯ ಮೇಲೆ ಜನರು ಸರಾಗವಾಗಿ ಓಡಾಡಿದ್ದಾರೆ. ಆದರೆ ಕಳೆದೊಂದು ವಾರದ ಹಿಂದೆ ದಿಡೀರನೇ ಟೋಲ್ ಗೇಟ್ ಒಂದನ್ನು ನಿರ್ಮಾಣ ಹಣ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯರಿಗೂ ವಿನಾಯಿತಿ ನೀಡದೇ ವಸೂಲಿ ಮಾಡ್ತಿರೋ ಹಿನ್ನೆಲೆ ಗ್ಯಾರಂಟಿ ಸರಿದೂಗಿಸಲು ಸರ್ಕಾರವೇ ನೇರವಾಗಿ ಹಣ ವಸೂಲಿ ದಂಧೆಗಿಳಿಯೇ ಎನ್ನುವ ಅನುಮಾನ ಕಾಡುತ್ತಿದೆ. ಅಷ್ಟಕ್ಕೂ ಟೋಲ್ ನಿರ್ಮಾಣ ಹಿಂದಿನ ರಹ್ಯವೇನು ಅಂತೀರಾ ಈ ಸ್ಟೋರಿ ನೋಡಿ.. 

ಗ್ಯಾರಂಟಿ ಹಣವನ್ನು ಸರಿದೂಗಿಸಲು ನಿಯಮ ಬಾಹಿರವಾಗಿ ಟೋಲ್ ನಿರ್ಮಾಣ ಮಾಡಿತೇ ಸರ್ಕಾರ..?  ಸ್ಥಳೀಯರಿಗೂ ವಿನಾಯಿತಿ ನೀಡದೆ ಹಣ ವಸೂಲಿ ಮಾಡುತ್ತಿರೋ ಹಿನ್ನೆಲೆ ಸಾರ್ವಜನಿಕರ ಆಕ್ರೋಶ,..  ಹೌದು, ಇದು ಬಳ್ಳಾರಿಯಿಂದ ಆಂಧ್ರ ಗಡಿಗೆ ತೆರಳುವ ಮತ್ತು ಹೊಸ ಏರ್ಪೋರ್ಟ್ ಗೆ ಹೋಗುವ ಚತುಷ್ಪಥ ರಸ್ತೆ… ಹನ್ನೆರಡು ವರ್ಷಗಳ ಹಿಂದೆ ಏರ್ಪೋರ್ಟ್ ನಿರ್ಮಾಣ ಮಾಡುವ ಹಿನ್ನೆಲೆ ಬಳ್ಳಾರಿಯಿಂದ ಮೋಕಾ ಗ್ರಾಮದವರೆಗೂ ಇರೋ ಇಪ್ಪತ್ತು ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಜನಾರ್ದನ ರೆಡ್ಡಿ ಕಾಲದಲ್ಲಿ ನಿರ್ಮಾಣ ಮಾಡಿದ್ರು. ಕಾರಣಾಂತರದಿಂದ ಏರ್ಪೋರ್ಟ್ ವಿಳಂಬವಾದ್ರೂ ಈ ರಸ್ತೆಯ ಮೇಲೆ ಎಂದಿನಂತೆ ಜನರ ಓಡಾಟ ಇತ್ತು. ಆದರೆ ಇದೀಗ ಈ ರಸ್ತೆ ಮಾರ್ಗದಲ್ಲೊಂದು ಟೋಲ್ ನಿರ್ಮಾಣ ಮಾಡಲಾಗಿದೆ ಕಳೆದೊಂದು ವಾರದಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ನಿಯಮಗಳ ಪ್ರಕಾರ 60 ಕಿ.ಮೀ. ರಸ್ತೆಗೆ ಟೋಲ್ ಹಾಕಬೇಕು. ಆದರೆ ಬಳ್ಳಾರಿಯಿಂದ ಮೂವತ್ತು  ಕಿ.ಮೀ. ಈ ರಸ್ತೆ ಮೂಲಕ ತೆರಳಿದ್ರೇ, ಆಂಧ್ರ ತಲುಪುತ್ತೆವೆ. ಅಲ್ಲಿಗೆ ರಾಜ್ಯ ಹೆದ್ದಾರಿ ಮುಗಿಯುತ್ತಿದೆ. ಹೀಗಿದ್ರೂ ಇಲ್ಲಿ ಟೋಲ್ ಯಾಕೆ ನಿರ್ಮಾಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ನನಗೆ ಅವಕಾಶ ಕೊಟ್ರೆ ಸಾವರ್ಕರ್ ಫೋಟೋವನ್ನು ಇವತ್ತೇ ತೆಗೀತೀನಿ: ಪ್ರಿಯಾಂಕ ಖರ್ಗೆ

ಹತ್ತು ವರ್ಷ ಇಲ್ಲದ್ದು ಈಗೇಕೆ ಟೋಲ್ ವಸೂಲಿ:  ಇನ್ನೂ ಮೂಲಗಳ ಪ್ರಕಾರ ಹನ್ನೆರಡು ವರ್ಷಗಳ ಹಿಂದೆ ಖಾಸಗಿಯವರು ಈ ರಸ್ತೆ ನಿರ್ಮಾಣ ಮಾಡಿದ್ರು. ಹತ್ತು ವರ್ಷಗಳ ಕಾಲ ಅವರೇ ಇದನ್ನು ನಿರ್ವಹಣೆ ಮಾಡಿದ್ದಾರೆ. ಇದೀಗ ಇದರ ನಿರ್ವಹಣೆ ಸರ್ಕಾರದ ಮೇಲಿರೋ ಹಿನ್ನೆಲೆ ಇಲ್ಲಿ ಟೋಲ್ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ತಾತ್ಕಾಲಿಕ ಟೆಂಟ್ ಮಾದರಿಯಲ್ಲಿ ಇಲ್ಲಿ ಟೋಲ್ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರ ಪರವಿರೋಧದ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತದೆಯೇ ಎನ್ನುವ ಅನುಮಾನವಿದೆ..ಇನ್ನೂ ಬಳ್ಳಾರಿಯಿಂದ ಇಪ್ಪತ್ತು ಕಿ.ಮೀ. ಇರೋ ಮೋಕಾ ಮತ್ತು ಸುತ್ತಮುತ್ತಲಿನ ಗ್ರಾಮಕ್ಕೆ ಹೋಗುವವರು ಇದೇ ರಸ್ತೆ ಮೇಲೆ ಹೋಗಬೇಕು. ಆದರೆ ಇಲ್ಲಿ ಸ್ಥಳೀಯರಿಗೂ ವಿನಾಯಿತಿ ನೀಡಿಲ್ಲದಿರೋದು ಸಾರ್ವಜನಿಕರಿಗಷ್ಟೇ ಅಲ್ಲದೇ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಂಗಳಿಗೆ 210 ರೂಪಾಯಿ ಫಿಕ್ಸ್ ಮಾಡೋ ಮೂಲಕ ಪಾಸ್ ನೀಡಲು ಚಿಂತನೆ ನಡೆದಿದೆ. ಆದರೆ  ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಸ್ಥಳೀಯರಿಗೆ ವಿನಾಯಿತಿ ನೋಡೋದಾಗಿ ಹೇಳ್ತಿದ್ದಾರೆ.

click me!