ವ್ಯಸನಮುಕ್ತರಾಗಿ ಸಮಾಜಕ್ಕೆ ಮಾದರಿಯಾಗಿ: ಸುನಿಲ್‌ ಕುಮಾರ್‌

By Kannadaprabha News  |  First Published Nov 13, 2022, 12:05 AM IST
  • ವ್ಯಸನಮುಕ್ತರಾಗಿ ಸಮಾಜಕ್ಕೆ ಮಾದರಿಯಾಗಿ: ಸುನಿಲ್‌ ಕುಮಾರ್‌
  • ಬಜಗೋಳಿಯಲ್ಲಿ 1611ನೇ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭ

ಕಾರ್ಕಳ (ನ.12) : ವ್ಯಸನ ಮುಕ್ತರಾಗಿ ನವಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಬಾಳಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ವ್‌ ಕಾರ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ವ್‌ ಬೆಳ್ತಂಗಡಿ, ಜನಜಾಗೃತಿ ವೇದಿಕೆ ಕಾರ್ಕಳ, ಶ್ರೀ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಬಜಗೋಳಿ ವಲಯ, ರಾಜಪುರ ಕ್ರೆಡಿಟ್‌ ಕೋ. ಆಪರೇಟಿವ್‌ ಸೊಸೈಟಿ ಕುಕ್ಕುಂದೂರು ಕಾರ್ಕಳ, ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಜಗೊಳಿ ವಲಯ, ನವ ಜೀವನ ಸಮಿತಿ ಬಜಗೋಳಿ ವಲಯ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಊರಿನ ದಾನಿಗಳ ಸಂಯುಕ್ತ ಆಶ್ರಯದಲ್ಲಿ ಬಜಗೋಳಿಯ ಶ್ರೀ ನಾರಾಯಣಗುರು ಸಮುದಾಯ ಮಂದಿರದಲ್ಲಿ ನಡೆದ 1611ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Tap to resize

Latest Videos

undefined

ಕರ್ನಾಟಕದಲ್ಲಿ ವಿದ್ಯುತ್ ದರ ಇಳಿಕೆಯಾಗುತ್ತಾ?: ಸಚಿವ ಸುನಿಲ್‌ ಕುಮಾರ್‌ ಪ್ರತಿಕ್ರಿಯೆ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಬೃಹತ್‌ ಮಟ್ಟದಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣದಂತಹ ಉತ್ತಮ ಕೆಲಸ ಮಾಡುತ್ತಿದೆ. ವ್ಯಸನ ಮುಕ್ತರಾದ ಶಿಬಿರಾರ್ಥಿಗಳು ಸಮಾಜದಲ್ಲಿ ಗೌರವದಿಂದ ಬಾಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ್‌ ಚಂದ್ರ ಚೌಟ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಶಿವರಾಯ ಪ್ರಭು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಸ್‌, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್‌ ಅಮೀನ್‌, ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕರಾದ ಮಹಾವೀರ ಜೈನ್‌, ಹರಿಶ್ಚಂದ್ರ ತೆಂಡುಲ್ಕರ್‌, ಪ್ರೇಮ್‌ಕುಮಾರ್‌, ನಲ್ಲೂರು ಗ್ರಾ.ಪಂ. ಅಧ್ಯಕ್ಷೆ ಕವಿತಾ ಸಂತೋಷ್‌ ಪೂಜಾರಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಜಗೋಳಿ ವಲಯಾಧ್ಯಕ್ಷೆ ಜಯಲಕ್ಷ್ಮೇ, ಕೇಂದ್ರ ಸಮಿತಿ ಒಕ್ಕೂಟ ಅಧ್ಯಕ್ಷ ಪ್ರವೀಣ್‌ ಹೆಗ್ಡೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಶರತ್‌ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಭಾಸ್ಕರ್‌ ವಿ. ಸ್ವಾಗತಿಸಿದರು. ಮೇಲ್ವಿಚಾರಕ ಮನೋಜ್‌ ಹೆಗ್ಡೆ ವಂದಿಸಿದರು. ಸೌಮ್ಯ ಶೆಟ್ಟಿನಿರೂಪಿಸಿದರು. ಮೈಸೂರು ದಸರಾ ಮೀರಿಸುವಂತೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೀವಿ: ಸಚಿವ ಸುನೀಲ್‌ ಕುಮಾರ್‌

click me!