ನನ್ನ ರಾಜಕೀಯ ಸೇವೆಗೆ ಕಾರ್ಯಕರ್ತರೇ ಶಕ್ತಿ : ಕೆ.ಟಿ. ಶಾಂತಕುಮಾರ್‌

By Kannadaprabha NewsFirst Published Jan 20, 2023, 6:03 AM IST
Highlights

ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಸಮಾಜ ಸೇವೆ ಹಾಗೂ ಜನರು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಕಂಡು ತಾಲೂಕು ಜೆಡಿಎಸ್‌ ಕಾರ್ಯಕರ್ತರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಲು ಬಂದಿರುವುದನ್ನು ನಾನು ಗೌರವಿಸುತ್ತಿದ್ದು, ನನಗೆ ಕಾರ್ಯಕರ್ತರೇ ಶಕ್ತಿಯಾಗಿದ್ದು ಅವರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದು ಹೆಜ್ಜೆ ಇಡುತ್ತೇನೆಂದು ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ತಿಳಿಸಿದರು.

 ತಿಪಟೂರು :  ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಸಮಾಜ ಸೇವೆ ಹಾಗೂ ಜನರು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಕಂಡು ತಾಲೂಕು ಜೆಡಿಎಸ್‌ ಕಾರ್ಯಕರ್ತರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಲು ಬಂದಿರುವುದನ್ನು ನಾನು ಗೌರವಿಸುತ್ತಿದ್ದು, ನನಗೆ ಕಾರ್ಯಕರ್ತರೇ ಶಕ್ತಿಯಾಗಿದ್ದು ಅವರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದು ಹೆಜ್ಜೆ ಇಡುತ್ತೇನೆಂದು ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ತಿಳಿಸಿದರು.

ನಗರದ ಕೆ.ಟಿ.ಶಾಂತಕುಮಾರ್‌ರವರ ನಿವಾಸಕ್ಕೆ ತಾಲೂಕುಮುಖಂಡರುಗಳು, ಕಾರ್ಯಕರ್ತರು ಆಗಮಿಸಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂದು ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಕಾರ್ಯಕರ್ತರು ನಮ್ಮ ಮನೆಗೆ ಬಂದು ಸ್ವಾಗತಿಸುತ್ತಿರುವುದನ್ನು ನಾನು ಗೌರವಿಸುತ್ತೇನೆ. ಹಲವು ವರ್ಷಗಳಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು ನನ್ನದೇ ಕಾರ್ಯರ್ತರು ಇದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವ ಕಾರಣ ಹೈಕಮಾಂಡ್‌ ಟಿಕೆಟ್‌ ಕೊಡುವ ಭರವಸೆ ನೀಡಿದ್ದು ಪಕ್ಷಕ್ಕಾಗಿ ದುಡಿದಿದ್ದೇನೆ. ಅಧಿಕಾರವಿಲ್ಲದೆ ತಾಲೂಕಿನಲ್ಲಿ ಜನರ ಸೇವೆ ಮಾಡುತ್ತಿದ್ದು ಜನರು ಸಹ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟುಕೊಂಡಿದ್ದಾರೆ. ತಾಲೂಕು ಜೆಡಿಎಸ್‌ ಪಕ್ಷಕ್ಕೆ ಸಮರ್ಥ ನಾಯಕನಾಗಬೇಕೆಂದು ನನ್ನನ್ನು ಬಯಸಿ ಬಂದಿದ್ದು ನನಗೆ ಸಮಯದ ಅವಕಾಶ ಬೇಕಿದೆ. ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಟಿಕೆಟ್‌ ಬಗ್ಗೆ ಮಾತನಾಡುತ್ತೇನೆ. ನಾನು ಚುನಾವಣೆಗೆ ನಿಲ್ಲುವುದು ಖಚಿತ, ರಾಜಕೀಯ ಸೇವೆ ಮಾಡಲು ಬಂದಿರುವ ನನಗೆ ಕಾರ್ಯಕರ್ತರೇ ಶಕ್ತಿ. ಸಭೆ ಮಾಡಿ ಅವರ ಅಭಿಪ್ರಾಯ ತೆಗೆದುಕೊಂಡು ನಂತರ ಹೆಜ್ಜೆ ಇಡುತ್ತೇನೆ. ಅಲ್ಲಿಯವರೆವಿಗೂ ನನಗೆ ಸಮಯ ಕೊಡಿ ಎಂದು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರನ್ನು ಮನವೊಲಿಸಿದರು.

ಜೆಡಿಎಸ್‌ ತಾಲೂಕು ಕಾರ್ಯಾಧ್ಯಕ್ಷ ಎಂ.ಎಸ್‌. ಶಿವಸ್ವಾಮಿ ಮಾತನಾಡಿ, ಕೆ.ಟಿ. ಶಾಂತ್‌ಕುಮಾರ್‌ರವರ ಜನಸೇವೆ, ಕಷ್ಟಕ್ಕೆ ಸ್ಪಂದಿಸುವ ಗುಣ ಮತ್ತು ಅವರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆಂಬ ವಿಶ್ವಾಸದಿಂದ ಅವರನ್ನು ನಮ್ಮ ಜೆಡಿಎಸ್‌ ಪಕ್ಷಕ್ಕೆ ಆಹ್ವಾನಿಸಲು ಬಂದಿದ್ದು ಅವರು ಪಕ್ಷಕ್ಕೆ ಬಂದರೆ ನೂರು ಆನೆ ಬಲ ಬರಲಿದೆ. ಪಕ್ಷದ ವರಿಷ್ಠರಾದ ಹೆಚ್‌.ಡಿ. ಕುಮಾರಸ್ವಾಮಿಯವರೇ ಖುದ್ದು ಹೇಳಿದ್ದು ಕಾರ್ಯಕರ್ತರು ಸಹ ಇವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಬಾರಿ ತಿಪಟೂರಿನಲ್ಲಿ ಕಾಂಗ್ರೆಸ್‌ನಿಂದ ಶಾಂತಕುಮಾರ್‌ ಬಿಟ್ಟು ಬೇರೆಯವರೆಗೆ ಟಿಕೆಟ್‌ ಖಚಿತವಾಗಿದ್ದು ನಮ್ಮ ಜೆಡಿಎಸ್‌ಗೆ ಬನ್ನಿ ಎಂದು ಶಾಂತಕುಮಾರ್‌ಗೆ ಮನವಿ ಮಾಡಿದರು.

ಜೆಡಿಎಸ್‌ ಮುಖಂಡರಾದ ಗೋವಿಂದಸ್ವಾಮಿ ಮತ್ತು ಕರಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಳೇಕಾಯಿ ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯೆ ರಾಧಾನಾರಾಯಣಗೌಡ, ರಾಕೇಶ್‌, ತಾ.ಪಂ ಮಾಜಿ ಸದಸ್ಯ ನಾಗರಾಜು, ಜೆಡಿಎಸ್‌ ಮುಖಂಡರಾದ ಮಾದೀಹಳ್ಳಿ ತಿಮ್ಮೇಗೌಡ, ಜಗದೀಶ್‌, ಸಮೃದ್‌ಪಾಷ, ರಾಕೇಶ್‌, ಕುಮಾರ್‌ ಬಿಳಿಗೆರೆ, ಮಂಜುನಾಥ್‌, ಲೋಕೇಶ್‌ ಬಜಗೂರು, ಯೋಗಾನಂದ್‌, ರಾಜಶೇಖರ್‌ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

ಇವರೇ ಮುಳುವಾಗುವರೇ

ಮಂಡ್ಯ(ಜ.20): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತರಾಗಿದ್ದವರು ಹಾಗೂ ಬಂಡಾಯ ಎದ್ದವರು ಆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗುವ ಸಾಧ್ಯತೆಗಳಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲಾ ಜೆಡಿಎಸ್‌ನಲ್ಲಿ ಕೆಲವು ಬದಲಾವಣೆಗಳು ನಡೆದಿದ್ದು ಟಿಕೆಟ್‌ ಘೋಷಣೆಯಾದ ನಂತರ ಟಿಕೆಟ್‌ ವಂಚಿತರಲ್ಲಿ ಕೆಲವರು ಪಕ್ಷವನ್ನು ತೊರೆದರೆ, ಮತ್ತೆ ಕೆಲವರು ಬಂಡಾಯವನ್ನು ಸಾರಿದ್ದಾರೆ. ಕೆಲವರು ಒಳಗೊಳಗೆ ಅಸಹಕಾರ ಧೋರಣೆ ಮೂಲಕ ಸ್ವಪಕ್ಷೀಯ ಅಭ್ಯರ್ಥಿಗಳ ಸೋಲಿಗೆ ಸಂಚು ರೂಪಿಸಿದಂತೆ ಕಂಡುಬರುತ್ತಿದ್ದಾರೆ.

ಕಳೆದ ಚುನಾವಣೆ ಸಮಯದಲ್ಲಿ ಜೆಡಿಎಸ್‌ ಪಕ್ಷದಲ್ಲಿದ್ದವರ ಪೈಕಿ ಕೆಲವರು ಆ ಪಕ್ಷದಿಂದ ಹೊರಬಂದಿದ್ದಾರೆ. ಮದ್ದೂರು ಕ್ಷೇತ್ರದ ಎಸ್‌.ಪಿ.ಸ್ವಾಮಿ, ಮಂಡ್ಯ ಕ್ಷೇತ್ರದಿಂದ ಕೀಲಾರ ರಾಧಾಕೃಷ್ಣ, ಡಾ.ಎಚ್‌.ಕೃಷ್ಣ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಎಲ್‌.ಆರ್‌. ಶಿವರಾಮೇಗೌಡ ಅವರು ಪಕ್ಷವನ್ನು ತೊರೆದಿದ್ದರೆ, ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿ.ಎಲ್‌.ದೇವರಾಜು ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ತಗ್ಗಹಳ್ಳಿ ವೆಂಕಟೇಶ್‌ ಬಂಡಾಯದ ಬಾವುಟ ಹಾರಿಸಿದ್ದಾರೆ.
ಜೆಡಿಎಸ್‌ನಿಂದ ಹೊರಬಂದಿರುವ ಎಸ್‌.ಪಿ.ಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಕೀಲಾರ ರಾಧಾಕೃಷ್ಣ ಅವರು ಕಾಂಗ್ರೆಸ್‌ನಿಂದ ಅಖಾಡ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಡಾ.ಎಚ್‌.ಕೃಷ್ಣ ಕೂಡ ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಎಲ್‌.ಆರ್‌.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವುದಾಗಿ ಘೋಷಿಸಿದ್ದಾರೆ. ಇನ್ನು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಕೂಡ ಜೆಡಿಎಸ್‌ನಿಂದ ಒಂದು ಕಾಲು ತೆಗೆದು ಕಾಂಗ್ರೆಸ್‌ನೊಳಗೆ ಇಟ್ಟಿದ್ದಾರೆ. ಈ ಬೆಳವಣಿಗೆಗಳು ಆಯಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲಿವೆಯೇ ಎಂಬ ಪ್ರಶ್ನೆ ಮೂಡಿದೆ.

Mandya: ಸಾಫ್ಟ್‌ವೇರ್ ಸಮಸ್ಯೆಯಿಂದ ಭತ್ತ, ರಾಗಿ ಖರೀದಿ ವಿಳಂಬ; ರೈತರು ಅತಂತ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ನಂತರ ನಡೆದ ಲೋಕಸಭಾ ಚುನಾವಣೆ, ಕೆ.ಆರ್‌.ಪೇಟೆ ವಿಧಾನಸಭೆ ಉಪ ಚುನಾವಣೆ, ಎರಡು ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಜೆಡಿಎಸ್‌ಗೆ ಗೆಲುವಿನ ಸಿಹಿ ಸಿಗಲೇ ಇಲ್ಲ. ಹಿಂದಿನ ಚುನಾವಣೆ ಸಮಯದಲ್ಲಿ ಜಿಲ್ಲೆಯೊಳಗಿದ್ದ ಜೆಡಿಎಸ್‌ ಪರವಾದ ವಾತಾವರಣ ಈ ಬಾರಿ ಕ್ಷೀಣಿಸಿರುವಂತೆ ಕಂಡುಬರುತ್ತಿದೆ.

click me!