Mandya: ಸಾಫ್ಟ್‌ವೇರ್ ಸಮಸ್ಯೆಯಿಂದ ಭತ್ತ, ರಾಗಿ ಖರೀದಿ ವಿಳಂಬ; ರೈತರು ಅತಂತ್ರ

ಕನಿಷ್ಠ ಬೆಂಬಲ ಯೋಜನೆಯಡಿ ಇದುವರೆಗೂ ಸರ್ಕಾರ ಒಂದೇ ಒಂದು ಕ್ವಿಂಟಲ್‌ ಭತ್ತ ಹಾಗೂ ರಾಗಿ ಖರೀದಿ ಮಾಡಿಲ್ಲ. ಸಾಫ್‌್ಟವೇರ್‌ ಸಮಸ್ಯೆ ಮುಂದೊಡ್ಡಿ ಖರೀದಿ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದು, ರೈತರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.

Delay in purchase of paddy millet due to software problem; Farmers are helpless rav

ಮಂಡ್ಯ (ಜ.17) : ಕನಿಷ್ಠ ಬೆಂಬಲ ಯೋಜನೆಯಡಿ ಇದುವರೆಗೂ ಸರ್ಕಾರ ಒಂದೇ ಒಂದು ಕ್ವಿಂಟಲ್‌ ಭತ್ತ ಹಾಗೂ ರಾಗಿ ಖರೀದಿ ಮಾಡಿಲ್ಲ. ಸಾಫ್‌್ಟವೇರ್‌ ಸಮಸ್ಯೆ ಮುಂದೊಡ್ಡಿ ಖರೀದಿ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದು, ರೈತರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಡಿ.15ರಿಂದ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು. ಜ.1ರಿಂದ 31ರವರೆಗೆ ಖರೀದಿ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಇದುವರೆಗೂ ಭತ್ತ-ರಾಗಿ ಖರೀದಿ ಪ್ರಕ್ರಿಯೆಯೇ ಆರಂಭಗೊಂಡಿಲ್ಲ. ಖರೀದಿಗೆ ನೋಂದಣಿ ಮಾಡಿಕೊಂಡ ರೈತರು ಚಾತಕ ಪಕ್ಷಿಗಳಂತೆ ಎದುರು ನೋಡುವಂತಾಗಿದೆ.

ಸಂಸದೆ ಸುಮಲತಾ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿ.ಪಿ.ಯೋಗೇಶ್ವರ್‌

ಜ.1ರಿಂದ ರಾಗಿ-ಭತ್ತ ಖರೀದಿ ಪ್ರಕ್ರಿಯೆಯ ಆರಂಭಗೊಳ್ಳಬೇಕಿದ್ದರೂ ಇದುವರೆಗೂ ಒಂದು ಕ್ವಿಂಟಲ್‌ ಭತ್ತವನ್ನಾಗಲೀ ಅಥವಾ ರಾಗಿಯನ್ನಾಗಲೀ ಖರೀದಿಸಿಲ್ಲ. ಈ ಬಗ್ಗೆ ಕಾರಣ ಕೇಳಿದರೆ ಸಾಫ್‌್ಟವೇರ್‌ ಕೆಟ್ಟುಹೋಗಿರುವ ಕಾರಣ ಕೊಡುತ್ತಿದ್ದಾರೆ. ಸಾಫ್‌್ಟವೇರ್‌ ಸಿದ್ದವಾಗಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಖರೀದಿ ಪ್ರಕ್ರಿಯೆ ಮುಂದೂಡುತ್ತಿರುವುದು ದಲ್ಲಾಳಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.

ಎಷ್ಟುಉತ್ಪಾದನೆ?

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯೊಳಗೆ ಭತ್ತದ ಉತ್ಪಾದನೆ 4,91,672 ಮೆಟ್ರಿಕ್‌ ಟನ್‌ ಭತ್ತ ಹಾಗೂ 1,00,601 ಮೆಟ್ರಿಕ್‌ ಟನ್‌ ರಾಗಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಜಿಲ್ಲೆಯ 61,459 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ 80 ಕ್ವಿಂಟಲ್‌ನಂತೆ 49,16,720 ಕ್ವಿಂಟಲ್‌ ಭತ್ತ ಉತ್ಪಾದನೆಯಾದರೆ, 45,728 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆದಿದ್ದು ಪ್ರತಿ ಹೆಕ್ಟೇರ್‌ಗೆ 22 ಕ್ವಿಂಟಲ್‌ನಂತೆ 10,06,016 ಕ್ವಿಂಟಲ್‌ ರಾಗಿ ಉತ್ಪಾದನೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು.

ತೀವ್ರ ಸಂಕಷ್ಟಪರಿಸ್ಥಿತಿ:

ಜಿಲ್ಲೆಯಲ್ಲಿ 18,859 ರೈತರು 4 ಲಕ್ಷ 68 ಸಾವಿರಕ್ಕೂ ಅಧಿಕ ಕ್ವಿಂಟಲ್‌ ಭತ್ತವನ್ನು ನೀಡುವುದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅದೇ ರೀತಿ 30,215 ರೈತರು 4 ಲಕ್ಷ. 20 ಸಾವಿರಕ್ಕೂ ಅಧಿಕ ಕ್ವಿಂಟಲ್‌ ರಾಗಿಯನ್ನು ಬೆಂಬಲ ಯೋಜನೆಯಡಿ ಮಾರಾಟ ಮಾಡಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಆದರೆ, ಈಗ ವಿಳಂಬ ಮಾಡುತ್ತಿರುವುದು ಅನ್ನದಾತರು ತೀವ್ರ ಸಂಕಷ್ಟಪರಿಸ್ಥಿತಿ ಎದುರಿಸುತ್ತಿದ್ದಾರೆ. ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಖರೀದಿ ಕೇಂದ್ರ ಆರಂಭವನ್ನು ವಿಳಂಬ ಮಾಡುವ ಸರ್ಕಾರ, ಈಗ ಸಾಫ್‌್ಟವೇರ್‌ ಸಮಸ್ಯೆಯ ಕಾರಣವನ್ನು ಮುಂದಿಡುತ್ತಿರುವುದು ರೈತರ ಸಮುದಾಯದ ಅಸಹನೆಗೆ ಕಾರಣವಾಗಿದೆ.

ಈಗಾಗಲೇ ಬೆಳೆಗಳ ಬೆಲೆ ಕುಸಿತ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕೃಷಿ ಕಾರ್ಮಿಕರ ಕೊರತೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ರೈತರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಇದೆ. ಇದರ ನಡುವೆ ಸರ್ಕಾರವೂ ಸೂಕ್ತ ಸಮಯದಲ್ಲಿ ಭತ್ತ-ರಾಗಿ ಖರೀದಿ ಆರಂಭಿಸಿ ಅನ್ನದಾತರ ನೆರವಿಗೆ ಬರದಿದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರತಿ ವರ್ಷವೂ ವಿಳಂಬ:

ಪ್ರತಿ ವರ್ಷವೂ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯುವುದು ವಿಳಂಬವಾಗುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತ ಸಮುದಾಯದಿಂದ ತೀವ್ರ ಆರೋಪಗಳು ಕೇಳಿಬರುತ್ತಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಡಿಸೆಂಬರ್‌ ಅಂತ್ಯ ಅಥವಾ ಜನವರಿ ವೇಳೆಗೆ ಖರೀದಿ ಕೇಂದ್ರ ಆರಂಭಿಸುವುದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ದಲ್ಲಾಳಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಖರೀದಿ ಕೇಂದ್ರ ತೆರೆಯುವುದನ್ನು ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ದಲ್ಲಾಳಿಗಳಿಗೆ ಹೆಚ್ಚು ಲಾಭ:

ಪ್ರತಿ ವರ್ಷ ಡಿಸೆಂಬರ್‌ ಮೊದಲ ವಾರದಲ್ಲಿ ಭತ್ತ ಮತ್ತು ರಾಗಿ ಕಟಾವು ಆರಂಭವಾಗುತ್ತದೆ. ಕಟಾವನ್ನೇ ಎದುರು ನೋಡುವ ದಲ್ಲಾಳಿಗಳು ಮುಂಗಡ ಹಣ ಕೊಟ್ಟು ಭತ್ತವನ್ನು ಕೊಂಡುಕೊಳ್ಳುತ್ತಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ ಭತ್ತಕ್ಕೆ 1960 ರು. ನಿಗದಿಪಡಿಸಿದೆ. ಈಗಾಗಲೇ ನೋಂದಣಿಯಾಗಿರುವ ರೈತರಿಂದ ರಾಗಿ-ಭತ್ತ ಖರೀದಿ ಆರಂಭಿಸಿದರೆ ರೈತರಿಗೆ ಅಲ್ಪಸ್ವಲ್ಪ ಹಣ ಸಿಗುತ್ತದೆ. ಖರೀದಿ ಪ್ರಕ್ರಿಯೆ ವಿಳಂಬದಿಂದ ದಲ್ಲಾಳಿಗಳು ರೈತರಿಂದ ಪ್ರತಿ ಕ್ವಿಂಟಲ್‌ ಭತ್ತಕ್ಕೆ 1400 ರಿಂದ 1450 ರು.ಗೆ ಖರೀದಿ ಮಾಡಿ ಅವರದೇ ಆರ್‌ಟಿಸಿಯನ್ನು ಮುಂದಿಟ್ಟು ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವುದು ಹಿಂದಿನಿಂದಲೂ ಬೆಳೆದುಬಂದಿರುವ ಸಂಪ್ರದಾಯವಾಗಿದೆ.

ಇದು ಸರ್ಕಾರಕ್ಕೆ ತಿಳಿದಿದ್ದರೂ ಪ್ರತಿ ವರ್ಷವೂ ಖರೀದಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಲೇ ಇದೆ. ಜನವರಿ ತಿಂಗಳಲ್ಲಿ ಮೂರನೇ ಆರಂಭವಾದದರೂ ಖರೀದಿ ಆರಂಭಿಸದಿರುವುದು ರೈತರಿಗೆ ಸರ್ಕಾರದ ಬಗೆಗಿನ ವಿಶ್ವಾಸ ಕುಸಿಯುವಂತೆ ಮಾಡಿದೆ. ಕುಂಭಕರ್ಣ ನಿದ್ರೆಯಲ್ಲಿರುವ ಆಳುವ ನಾಯಕರಿಗೆ ಅನ್ನದಾತರ ಕೂಗು ಕೇಳಿಸುತ್ತಲೇ ಇಲ್ಲ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದರೂ ರೈತರ ಜೀವನಮಟ್ಟಸುಧಾರಣೆಯನ್ನೇ ಕಾಣದಂತಾಗಿದೆ.

ಕುಮಾರಸ್ವಾಮಿಗೆ ರಾಮನಗರ ಬಿಟ್ರೆ ಬೇರೇನೂ ಗೊತ್ತಿಲ್ಲ, ಮಂಡ್ಯವೇ ಅವರ ಕೂಪ ಮಂಡೂಕ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಸಾಫ್‌್ಟವೇರ್‌ ಸಮಸ್ಯೆ ಮುಂದಿಟ್ಟು ಖರೀದಿ ಪ್ರಕ್ರಿಯೆ ಮುಂದೂಡುತ್ತಿರುವುದು ಸರಿಯಲ್ಲ. ಇದರಿಂದ ಖರೀದಿಗೆ ನೋಂದಣಿ ಮಾಡಿಕೊಂಡಿರುವ ರೈತರ ಗತಿ ಏನು. ಕೂಡಲೇ ಸಾಫ್‌್ಟವೇರ್‌ ದುರಸ್ತಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟು, ಖರೀದಿ ಪ್ರಕ್ರಿಯೆಗೆ ಚಾಲನೆ ಕೊಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ.

- ದಿನೇಶ್‌ ಗೂಳಿಗೌಡ, ವಿಧಾನಪರಿಷತ್‌ ಸದಸ್ಯರು

Latest Videos
Follow Us:
Download App:
  • android
  • ios