Corona Crisis: 10 ಸಾವಿರಕ್ಕಿಂತ ಕಡಿಮೆಯಾದ ಸಕ್ರಿಯ ಕೇಸ್‌

By Kannadaprabha News  |  First Published Feb 17, 2022, 4:39 AM IST

*   835 ಮಂದಿಗೆ ಸೋಂಕು, 4 ಮಂದಿ ಸಾವು, 1979 ಮಂದಿ ಗುಣಮುಖ
*  43 ಸಾವಿರ ಪರೀಕ್ಷೆ 
*  ಶೇ.2.3ರಷ್ಟು ಪಾಸಿಟಿವಿಟಿ ದರ ದಾಖಲು 


ಬೆಂಗಳೂರು(ಫೆ.17):  ರಾಜಧಾನಿಯಲ್ಲಿ ಕೊರೋನಾ(Coronavirus) ಸೋಂಕು ಪ್ರಕರಣಗಳು ತುಸು ಹೆಚ್ಚಳವಾಗಿದ್ದು, ಸಾವು ಇಳಿಕೆಯಾಗಿದೆ. ಸಕ್ರಿಯ ಸೋಂಕು ಪ್ರಕರಣಗಳು 10 ಸಾವಿರಕ್ಕಿಂತ ಕೆಳಕ್ಕಿಳಿದಿವೆ.

ಬುಧವಾರ 835 ಮಂದಿಗೆ ಸೋಂಕು ತಗುಲಿದ್ದು, 4 ಜನರು ಸಾವಿಗೀಡಾಗಿದ್ದಾರೆ. 1979 ಮಂದಿ ಗುಣಮುಖರಾಗಿದ್ದಾರೆ. ಸದ್ಯ 9955 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ(Treatment) ಆರೈಕೆಯಲ್ಲಿದ್ದಾರೆ. 43 ಸಾವಿರ ಪರೀಕ್ಷೆ ನಡೆದಿದ್ದು, ಶೇ.2.3ರಷ್ಟು ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ನಾಲ್ಕು ಸಾವಿರ ಇಳಿಕೆಯಾಗಿವೆ. ಆದರೆ, ಹೊಸ ಪ್ರಕರಣಗಳ ಸಂಖ್ಯೆ 70 ಏರಿಕೆಯಾಗಿವೆ (ಮಂಗಳವಾರ 765 ಕೇಸ್‌).

Tap to resize

Latest Videos

Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

ಹೊಸ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿ, ಗುಣಮುಖರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳು 40 ದಿನಗಳ ಬಳಿಕ (ಜ.7) 10 ಸಾವಿರಕ್ಕಿಂತ ಕಡಿಮೆಯಾಗಿವೆ. ಸಕ್ರಿಯ ಸೋಂಕಿತರಲ್ಲಿ 486 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 161 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ. ಉಳಿದ 9 ಸಾವಿರಕ್ಕೂ ಅಧಿಕ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ.

ಸಾವಿಗೀಡಾದ ನಾಲ್ಕು ಸೋಂಕಿತರ ಪೈಕಿ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.73 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.46 ಲಕ್ಷಕ್ಕೆ, ಸಾವಿನ ಸಂಖ್ಯೆ 16,785ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 7 ಸಕ್ರಿಯ ಕಂಟೈನ್ಮೆಂಟ್‌ ವಲಯ(Containment Zone), ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 11 ಕ್ಲಸ್ಟರ್‌ ವಲಯಗಳಿವೆ ಎಂದು ಬಿಬಿಎಂಪಿ(BBMP) ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 7 ವಾರ ಬಳಿಕ 1500ಕ್ಕೆ ತಗ್ಗಿದ ಕೊರೋನಾ ಕೇಸ್‌

ಬೆಂಗಳೂರು: ರಾಜ್ಯದಲ್ಲಿ(Karnataka) ಏಳು ವಾರಗಳ ಬಳಿಕ ಕೊರೋನಾ(Coronavirus) ಸೋಂಕಿನ ಹೊಸ ಪ್ರಕರಣಗಳು ಒಂದೂವರೆ ಸಾವಿರಕ್ಕೆ ಇಳಿಕೆಯಾಗಿದ್ದು, ಪಾಸಿಟಿವಿಟಿ ದರ(Positivity Rate) ಶೇ.2ಕ್ಕೆ ಕುಸಿದಿದೆ. ಅದರಲ್ಲೂ ರಾಜಧಾನಿಯಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.

Covid 19 Crisis Bengaluru: ಕೋವಿಡ್‌ ನಿಯಮ ಗಾಳಿಗೆ: ನಿತ್ಯ ₹2ಲಕ್ಷ ದಂಡ ಸಂಗ್ರಹ!

ಫೆ.14 ರಂದು 1,568 ಮಂದಿ ಸೋಂಕಿತರಾಗಿದ್ದು, 25 ಸೋಂಕಿತರು ಸಾವಿಗೀಡಾಗಿದ್ದಾರೆ(Death). 6,025 ಮಂದಿ ಗುಣಮುಖರಾಗಿದ್ದಾರೆ. ಸದ್ಯ 31 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 69000 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.2.2 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 33 ಸಾವಿರ ಕಡಿಮೆಯಾಗಿದ್ದು, ಹೀಗಾಗಿ, ಹೊಸ ಸೋಂಕಿತರ 804 ಇಳಿಕೆಯಾಗಿವೆ(ಭಾನುವಾರ 2372 ಪ್ರಕರಣ). ಬೆಂಗಳೂರಿನಲ್ಲಿ(Bengaluru) 754 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 305 ಕಡಿಮೆಯಾಗಿವೆ (ಭಾನುವಾರ 1059).

ಸೋಂಕಿತರ ಸಾವು ಕಡಿಮೆಯಾಗುತ್ತಿದ್ದು, ಸೋಮವಾರ ಬೆಳಗಾವಿಯಲ್ಲಿ(Belagavi) 2 ವರ್ಷ ಮಗು(Child) ಸಾವಿಗೀಡಾಗಿದೆ. ಉಳಿದಂತೆ ನಾಲ್ವರು ವಯಸ್ಕರು, 20 ಮಂದಿ 60 ವರ್ಷ ಮೇಲ್ಪಟ್ಟವರಿದ್ದಾರೆ. ಅತಿ ಹೆಚ್ಚು ಬೆಂಗಳೂರಿನಲ್ಲಿ 5, ಬೆಳಗಾವಿ, ಬೀದರ್‌, ಧಾರವಾಡ, ತುಮಕೂರು ಹಾಗೂ ಉಡುಪಿ ತಲಾ ಇಬ್ಬರು, ಎಂಟು ಜಿಲ್ಲೆಗಳಲ್ಲಿ ಒಬ್ಬ ಸೋಂಕಿತರ ಸಾವು ವರದಿಯಾಗಿತ್ತು.

ಬೆಂಗಳೂರು ಹೊರತು ಪಡಿಸಿದರೆ ಯಾವ ಜಿಲ್ಲೆಯಲ್ಲೂ 100ರ ಗಡಿದಾಟಿಲ್ಲ. ಬೆಳಗಾವಿ, ಮೈಸೂರು, ಬೆಳಗಾವಿ, ಶಿವಮೊಗ್ಗದಲ್ಲಿ 50ಕ್ಕೂ ಹೆಚ್ಚು ಮಂದಿಗೆ, ಬೆಂಗಳೂರು ಗ್ರಾಮಾಂತರ, ಬೀದರ್‌, ಗದಗದಲ್ಲಿ ಬೆರಳೆಣಿಕೆಯಷ್ಟುಮಂದಿಗೆ ಸೋಂಕು ತಗುಲಿತ್ತು. 
 

click me!