ಹಣದ ಭಾಗ್ಯ: ಅಕ್ಕಿ ಬದಲು ಹಣ ವರ್ಗ, ಬ್ಯಾಂಕ್‌ ಖಾತೆ ಸಕ್ರಿಯಗೊಳಿಸಿ

By Kannadaprabha News  |  First Published Jul 14, 2023, 8:44 PM IST

ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ನಿಷ್ಕ್ರೀಯ ಬ್ಯಾಂಕ್‌ ಖಾತೆ ಹೊಂದಿದ್ದರೇ ಜಮೆಯಾಗುವುದಿಲ್ಲ. ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ (ಇ-ಕೆವೈಸಿ) ಮಾಡದೇ ಇರುವುದರಿಂದ ಅಥವಾ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಯನ್ನು ಹೊಂದಿರದೇ ಇರುವುದರಿಂದ ಜಮೆಯಾಗಿರುವುದಿಲ್ಲ. 


ಬಾದಾಮಿ(ಜು.14): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದಲ್ಲಿ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಪಿ.ಎಚ್‌.ಎಚ್‌) ಫಲಾನುಭವಿಗಳಿಗೆ ಪ್ರತೀ ತಿಂಗಳು ಹೆಚ್ಚುವರಿಯಾಗಿ ವಿತರಿಸಲಾಗುವ 05 ಕೆಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ 34ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗುತ್ತಿದೆ ಎಂದು ತಹಸೀಲ್ದಾರ್‌ ಜೆ.ಬಿ.ಮಜ್ಜಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಸರ್ಕಾರದ ಮಾರ್ಗಸೂಚಿಗಳಂತೆ ಬಾದಾಮಿ ತಾಲೂಕಿನಲ್ಲಿ ಒಟ್ಟು 7427 ಎಎವೈ 42897 ಪಿ.ಎಚ್‌.ಎಚ್‌ ಪಡಿತರ ಚೀಟಿಗಳಲ್ಲಿ ಒಟ್ಟು 6,805 ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ (ಪಿ.ಎಚ್‌.ಎಚ್‌) ಪಡಿತರ ಚೀಟಿಗಳಿಗೆ ಕೆಲವು ಕಾರಣಗಳಿಂದ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿರುವುದಿಲ್ಲ. ಪಡಿತರ ಚೀಟಿಗೆ ಹಣ ಜಮೆಯಾಗದೇ ಇರುವುದಕ್ಕೆ ಈ ಕೆಳಗಿನ ಕಾರಣಗಳು ಕಂಡುಬಂದಿರುತ್ತದೆ.

Tap to resize

Latest Videos

undefined

ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..

ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ನಿಷ್ಕ್ರೀಯ ಬ್ಯಾಂಕ್‌ ಖಾತೆ ಹೊಂದಿದ್ದರೇ ಜಮೆಯಾಗುವುದಿಲ್ಲ. ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ (ಇ-ಕೆವೈಸಿ) ಮಾಡದೇ ಇರುವುದರಿಂದ ಅಥವಾ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಯನ್ನು ಹೊಂದಿರದೇ ಇರುವುದರಿಂದ ಜಮೆಯಾಗಿರುವುದಿಲ್ಲ. ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಅಮಾನ್ಯವಾದ ಆಧಾರ್‌ ಸಂಖ್ಯೆಯನ್ನು ನೀಡಿದ್ದರೇ ಜಮೆಯಾಗುವುದಿಲ್ಲ. ಕಾರಣ ಈ ಮೇಲ್ಕಂಡ ಕಾರಣಗಳಿಂದ ನಿಮ್ಮ ಪಡಿತರ ಚೀಟಿಗೆ ಹಣ ಜಮೆಯಾಗದೇ ಇರುವುದರಿಂದ ಪಡಿತರ ಚೀಟಿದಾರರು ಬ್ಯಾಂಕ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಬರುವ ಜುಲೈ 20ರೊಳಗೆ ಲಿಂಕ್‌ ಮಾಡಿಸಿ. ಖಾತೆಯನ್ನು ಸಕ್ರಿಯಗೊಳಿದ್ದಲ್ಲಿ ಮಾತ್ರ ಮುಂದಿನ ತಿಂಗಳಿನಿಂದ ಹಣ ಜಮೆಯಾಗುವುದು ಅಂತಾ ಈ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ. ಅರ್ಹ ಪಡಿತರ ಚೀಟಿದಾರರು ಡಿಟಿಟಿ ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರೆ ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದಿದ್ದಾರೆ.

click me!