ಕೊಡಗಿನಲ್ಲಿ ಭಾರೀ ಗಾತ್ರದ ಉಡ ಪ್ರತ್ಯಕ್ಷ: ಫೋಟೋ ವೈರಲ್‌

By Kannadaprabha News  |  First Published Oct 25, 2023, 10:45 AM IST

ಕುಂದ ಗ್ರಾಮದ ಕೊಡಂದೇರ ದಿಲೀಪ್ ಎಂಬವರ ಮನೆಯ ಸಮೀಪ ಪ್ರತ್ಯಕ್ಷವಾದ ಉಡವನ್ನು ರಕ್ಷಿಸಿ ಸಮೀಪದ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಜಿಲ್ಲೆಯಲ್ಲಿ ಉಡ ಇದ್ದರೂ ಇಷ್ಟೊಂದು ದೊಡ್ಡ ಗಾತ್ರದ ಉಡ ಇದುವರೆಗೆ ಪ್ರತ್ಯಕ್ಷಗೊಂಡಿರಲಿಲ್ಲ. 

ಮಡಿಕೇರಿ(ಅ.25):  ಭಾರೀ ಗಾತ್ರದ ಅಪರೂಪದ ಹಾಗೂ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಉಡ ಕೊಡಗಿನಲ್ಲಿ ಪ್ರತ್ಯಕ್ಷಗೊಂಡಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ಇತ್ತೀಚೆಗೆ 6 ಅಡಿ ಉದ್ದದ ಉಡ ಕಾಣಿಸಿಕೊಂಡಿದೆ.

ಕುಂದ ಗ್ರಾಮದ ಕೊಡಂದೇರ ದಿಲೀಪ್ ಎಂಬವರ ಮನೆಯ ಸಮೀಪ ಪ್ರತ್ಯಕ್ಷವಾದ ಉಡವನ್ನು ರಕ್ಷಿಸಿ ಸಮೀಪದ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಜಿಲ್ಲೆಯಲ್ಲಿ ಉಡ ಇದ್ದರೂ ಇಷ್ಟೊಂದು ದೊಡ್ಡ ಗಾತ್ರದ ಉಡ ಇದುವರೆಗೆ ಪ್ರತ್ಯಕ್ಷಗೊಂಡಿರಲಿಲ್ಲ.

Latest Videos

undefined

ಮಡಿಕೇರಿ ದಸರಾ: ವಿಜಯ ಪ್ರಕಾಶ್ ಗಾಯನಕ್ಕೆ ಮನ ಸೋತ ಯುವ ಸಮೂಹ

ಇದೀಗ ಕಾಣಿಸಿಕೊಂಡಿರುವ ಉಡ ಜಗತ್ತಿನಲ್ಲೇ ಅಪರೂಪ ಎನಿಸುವ ಕೊವೊಡೊ ಡ್ರ್ಯಾಗನ್ ಎಂದು ತಿಳಿದುಬಂದಿದೆ. ಇದರ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

click me!