ಧಾರವಾಡ:ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಜೀವಂತವಾಗಿ ದಹನವಾದ ಮೂಕ ಪ್ರಾಣಿಗಳು

Published : Dec 21, 2019, 09:59 AM IST
ಧಾರವಾಡ:ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಜೀವಂತವಾಗಿ ದಹನವಾದ ಮೂಕ ಪ್ರಾಣಿಗಳು

ಸಾರಾಂಶ

ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ| ಸುಟ್ಟು ಕರಕಲಾದ ಎರಡು ಎತ್ತು, ಒಂದು ಆಕಳು| ತಾಲೂಕಿನ ಕಮಲಾಪುರದಲ್ಲಿ ನಡೆದ ಘಟನೆ| ಸಯ್ಯದ್ ಶೇಕ್ ಸನದಿ ಎಂಬುವವರಿಗೆ ಸೇರಿದ ಜಾನುವಾರುಗಳು| 

ಧಾರವಾಡ(ಡಿ.21): ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ ತಗುಲಿದ ಪರಿಣಾಮ ಎರಡು ಎತ್ತು, ಒಂದು ಆಕಳು ಜೀವಂತವಾಗಿ ದಹನವಾದ ಘಟನೆ ತಾಲೂಕಿನ ಕಮಲಾಪುರದಲ್ಲಿ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. 

ಸಯ್ಯದ್ ಶೇಕ್ ಸನದಿ ಎಂಬುವವರಿಗೆ ಸೇರಿದ ಜಾನುವಾರುಗಳಾಗಿವೆ. ನಿನ್ನೆ ತಡರಾತ್ರಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಮೂಕ ಪ್ರಾಣಿಗಳು ಸುಟ್ಟು ಕರಕಲಾಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದನದ ಕೊಟ್ಟಿಗೆಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಮಾತ್ರ ನಿಗೂಢವಾಗಿಯೇ ಇದೆ. ಮೂಕ ಪ್ರಾಣಿಗಳನ್ನ ಕಳೆದುಕೊಂಡ ಮಾಲೀಕ ಸಯ್ಯದ್ ಶೇಕ್ ಸನದಿ ಚಿಂತಾಕ್ರಾಂತರಾಗಿದ್ದಾರೆ. ಎರಡು ಎತ್ತು, ಒಂದು ಆಕಳು ಸಾವನ್ನಪ್ಪಿದ್ದರಿಂದ ರೈತನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಸರ್ಕಾರ ಮಾತ್ರವಲ್ಲ, ಮಂಡ್ಯದ ಪುರಸಭೆ ಖಾತೆಯಲ್ಲೂ ₹18,000 ಹಣವಿಲ್ಲ; ಬ್ಯಾಂಕ್‌ಗೆ ಹಾಕಿದ್ದ ಚೆಕ್ ಬೌನ್ಸ್!
ಇಟಗಿಯ ದೇಗುಲದಲ್ಲಿ ಕದಂಬರ ಕಾಲದ ಶಾಸನ ಪತ್ತೆ! ಕ್ರಿ.ಶ.1062ರ ಜಯಕೇಶಿ ದೊರೆ ಆಡಳಿತ ಹೇಗಿತ್ತು?